ರಾಜಕೀಯ

'ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ' ಎಂದ ರಮ್ಯಾ ವಿಡಿಯೋ ವೈರಲ್!

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಈಗ 'ಫೇಕ್‌ ಅಕೌಂಟ್‌' ವಿವಾದದಲ್ಲಿ ಸಿಲುಕಿದ್ದು, ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ತೆರೆಯುವಂತೆ ಹೇಳಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

'ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ' ಎಂದ ರಮ್ಯಾ ವಿಡಿಯೋ ವೈರಲ್!
ಟ್ವಿಟರ್ ವಿಡಿಯೋ
Published On :
ಬೆಂಗಳೂರು: ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಈಗ 'ಫೇಕ್‌ ಅಕೌಂಟ್‌' ವಿವಾದದಲ್ಲಿ ಸಿಲುಕಿದ್ದು, ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ತೆರೆಯುವಂತೆ ಹೇಳಿರುವ ವಿಡಿಯೋ  ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಂಸದೆ ರಮ್ಯಾ ಕಾರ್ಯಕರ್ತರಿಗೆ ಸಾಮಾಜಿಕ ಜಾಲತಾಣದ ನಿಯಂತ್ರಣದ ಕುರಿತು ಪಾಠ ಮಾಡುತ್ತಿದ್ದು, ಈ ವೇಳೆ ಟ್ವಿಟರ್‌ ಹಾಗೂ ಫೇಸ್‌ಬುಕ್‌ ನಲ್ಲಿ ಮೂರ್ನಾಲ್ಕು ಫೇಕ್‌  ಅಕೌಂಟ್‌ ತೆರೆಯುವಂತೆ ರಮ್ಯಾ ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿರ್ದೇಶನ ನೀಡಿರುವ ವಿಡಿಯೊ ಇದೀಗ ವೈರಲ್ ಆಗಿದೆ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಹಿಂದೆ ಟ್ವಿಟರ್‌ನಲ್ಲಿ 'ಫೇಕು' ಎಂದು ನಿಂದಿಸಿದ್ದ  ರಮ್ಯಾ ಈಗ ತಾವೇ ಫೇಕ್‌ ವಿವಾದದಲ್ಲಿ ಸಿಕ್ಕಿ ಬಿದ್ದಿದ್ದಾರೆ.
ವಿಡಿಯೋದಲ್ಲಿರುವಂತೆ ರಮ್ಯಾ ಕಾರ್ಯಕರ್ತರನ್ನು ಉದ್ದೇಶಿಸಿ "ಈಗ ಮೊದಲನೇ ಪ್ರಶ್ನೆ ಏನಪ್ಪಾ ಅಂದರೆ, ಫೇಕ್‌ ಅಕೌಂಟ್‌... ನೀವೆಲ್ಲ ಎಷ್ಟು ಅಕೌಂಟ್‌ ಹೊಂದಿದ್ದೀರಿ... ಅಷ್ಟೇನಾ ?... ನೀವೆಲ್ಲರೂ ಇನ್ನು ಮೂರು ಅಕೌಂಟ್‌  ಕ್ರಿಯೇಟ್‌ ಮಾಡಬೇಕು. ಒಂದು ನಿಮ್ಮ ಹೆಸರಲ್ಲಿ, ಇನ್ನೊಂದು ಇನ್ಯಾರದೋ ಹೆಸರಲ್ಲಿ, ಇನ್ನೊಂದು ಶ್ರೀವತ್ಸಾ ಹೆಸರಲ್ಲಿ... ನಕಲಿ ಅಕೌಂಟ್ ಕ್ರಿಯೆಟ್ ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಕಾರ್ಯಕರ್ತರು ಇದರಲ್ಲಿ ಏನು  ತಪ್ಪಿಲ್ವಾ ?  ಎಂದು ಕೇಳಿದಾಗ ಮೂರ್ನಾಲ್ಕು ಅಕೌಂಟ್‌ ಹೊಂದಿದರೂ ತಪ್ಪಿಲ್ಲ. ಫೇಕ್‌ ಅಕೌಂಟ್‌ ಬಂದು... ಈಗ ನಾನೇ ಫೇಸ್‌ಬುಕ್‌ ನಲ್ಲಿ ಎರಡು ಅಕೌಂಟ್‌ ಹೊಂದಿದ್ದೇನೆ. ಒಂದು ದಿವ್ಯಸ್ಪಂದನಾ ಅಂತ ಇದೆ. ಇನ್ನೊಂದು  ಕ್ರಿಯೇಟೆಡ್‌.... ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಮ್ಯಾ, ''ಇದೊಂದು ಎಡಿಟೆಡ್‌ ವಿಡಿಯೊ'' ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.