'ನಶೆಯಲ್ಲಿದ್ದರೆ ಹೀಗೇ ಆಗೋದು': ಪ್ರಧಾನಿ ಮೋದಿ ಭಾಷಣದ ಕುರಿತು ನಟಿ ರಮ್ಯಾ ಟ್ವೀಟ್
ಪ್ರಧಾನಿ ಮೋದಿ ಅವರ ಬೆಂಗಳೂರು ರ್ಯಾಲಿ ಕುರಿತಂತೆ ಟೀಕೆ ಮಾಡಿರುವ ನಟಿ ರಮ್ಯಾ, ವಿವಾದಾತ್ಮಕ ಟ್ವೀಟ್ ಮಾಡಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

Published On :
ಬೆಂಗಳೂರು: ಪ್ರಧಾನಿ ಮೋದಿ ಅವರ ಬೆಂಗಳೂರು ರ್ಯಾಲಿ ಕುರಿತಂತೆ ಟೀಕೆ ಮಾಡಿರುವ ನಟಿ ರಮ್ಯಾ, ವಿವಾದಾತ್ಮಕ ಟ್ವೀಟ್ ಮಾಡಿ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.
ಪ್ರಧಾನಿ ಮೋದಿ ಭಾಷಣದ ಕುರಿತಂತೆ ಕಾಂಗ್ರೆಸ್ ಮುಖಂಡರಾದ ಜಿ ಪರಮೇಶ್ವರ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ಬೆನ್ನಲ್ಲೇ ಟ್ವೀಟ್ ಮಾಡಿರುವ ರಮ್ಯಾ, ಬೆಲೆ ಕುಸಿತ ನೀವು ನಶೆಯಲ್ಲಿದ್ದ ವೇಳೆ ನಡೆದಿದ್ದಾ ಎಂದು ಟೀಕಿಸುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಬೆಂಗಳೂರು ರ್ಯಾಲಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ರೈತ ಬೆಳೆಗಳ ಬೆಲೆ ಕುಸಿತ ಸಂಬಂಧ, ರೈತರ ಸಮಸ್ಯೆಗಳಿಗೇ ನನ್ನ ಮೊದಲ ಆದ್ಯತೆಯಾಗಿದ್ದು, ಟಾಪ್ ಪ್ರಿಯಾರಿಟಿ (ಟೊಮಾಟೋ, ಆನಿಯನ್ (ಈರುಳ್ಳಿ), ಪೊಟ್ಯಾಟೋ(ಆಲೂಗೆಡ್ಡೆ) ಎಂದು ಹೇಳಿದ್ದರು. ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ರಮ್ಯಾ, ಬೆಲೆ ಕುಸಿತ ನೀವು ನಶೆಯಲ್ಲಿದ್ದ ವೇಳೆ ನಡೆದಿದ್ದಾ ಎಂದು ಹೇಳಿದ್ದಾರೆ.
ನಟಿ ರಮ್ಯಾ ವಿರುದ್ಧ ಬಿಜೆಪಿ ವ್ಯಾಪಕ ಆಕ್ರೋಶ
ಇನ್ನು ಪ್ರಧಾನಿ ಮೋದಿ ಕುರಿತು ನಟಿ ರಮ್ಯಾ ಮಾಡಿದ್ದ ಟ್ವೀಟ್ ಬಿಜೆಪಿಯಿಂದ ವ್ಯಾಪಕ ಆಕ್ರೋಶವ್ಯಕ್ತವಾಗುತ್ತಿದ್ದು, ಬಿಜೆಪಿ ನಾಯಕಿ ಶಿಲ್ಪಾ ಗಣೇಶ್ ರಮ್ಯಾ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಿಲ್ಪಾ ಗಣೇಶ್, ಸತತ ಸೋಲಿನಿಂದ ತಲೆಕೆಟ್ಟು, ಆಗಾಗ ಗುಟ್ಟಾಗಿ ವಿದೇಶಕ್ಕೆ ಹೋದವರಿಗೆ ನಶೆಯ ವಿಚಾರ ಚೆನ್ನಾಗಿ ತಿಳಿದಿರುತ್ತದೆ. ರಮ್ಯಾ ಹೆಸರಲ್ಲೇ 'ರಮ್' ಇರುವುದರಿಂದ ಟ್ವೀಟ್ ಮಾಡುವಾಗಲೂ ಕುಡಿದಿರುತ್ತಾರೆ ಎಂದೆನಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
Ramya has a Rum in her name...looks like she is always drunk when she tweets
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುCongressಕಾಂಗ್ರೆಸ್BengalurubjpಬಿಜೆಪಿRamyaರಮ್ಯಾTwitterಟ್ವಿಟರ್PM Modiಪ್ರಧಾನಿ ಮೋದಿKarnataka politicsಕರ್ನಾಟಕ ರಾಜಕೀಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


