ರಾಜಕೀಯ

ಕಾಂಗ್ರೆಸ್'ನಿಂದ ಹೊಸ ಸಚಿವರ ನೇಮಕ: ಜೆಡಿಎಸ್ ನಡೆ ನಿಗೂಢ, ದಳದಲ್ಲಿ ಶಾಸಕರಿಗೆ ತಳಮಳ

ರಾಜ್ಯದ ಆಡಳಿತಾರೂಢ ಮೈತ್ರಿ ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿ ಪದಗ್ರಹಣ ಮಾಡಿದವರ ಮುಖದಲ್ಲಿ ಒಂದೆಂಡೆ ಸಂಭ್ರಮ ಮಾಡಿದ್ದಾರೆ, ಮತ್ತೊಂದೆಡೆ ಜೆಡಿಎಸ್ ಪಾಳಯದಲ್ಲಿ ಒಳಬೇಗುದಿ ಶುರವಾಗಿದೆ...

ಕಾಂಗ್ರೆಸ್'ನಿಂದ ಹೊಸ ಸಚಿವರ ನೇಮಕ: ಜೆಡಿಎಸ್ ನಡೆ ನಿಗೂಢ, ದಳದಲ್ಲಿ ಶಾಸಕರಿಗೆ ತಳಮಳ
ಸಂಗ್ರಹ ಚಿತ್ರ
Published On :
ಬೆಂಗಳೂರು: ರಾಜ್ಯದ ಆಡಳಿತಾರೂಢ ಮೈತ್ರಿ ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿ ಪದಗ್ರಹಣ ಮಾಡಿದವರ ಮುಖದಲ್ಲಿ ಒಂದೆಂಡೆ ಸಂಭ್ರಮ ಮಾಡಿದ್ದಾರೆ, ಮತ್ತೊಂದೆಡೆ ಜೆಡಿಎಸ್ ಪಾಳಯದಲ್ಲಿ ಒಳಬೇಗುದಿ ಶುರವಾಗಿದೆ. 
ಪಕ್ಷಕ್ಕೆ ಲಭ್ಯವಿರುವ ಎರಡು ಸಚಿವ ಸ್ಥಾನ  ಮತ್ತು ನಿಗಮ ಮಂಡಳಿಗಳನ್ನು ಯಾರಿಗೂ ನೀಡದಿರುವುದು ಆಕಾಂಕ್ಷಿಗಳಿಗೆ ತೀವ್ರ ನಿರಾಸೆಯನ್ನು ಮೂಡಿಸಿದೆ. 
ಎರಡನೇ ಹಂತದಲ್ಲಿ ಕಾಂಗ್ರೆಸ್'ಗೆ ಲಭ್ಯವಿದ್ದ ಎಂಟು ಸ್ಥಾನಗಳನ್ನು ಭರ್ತಿ ಮಾಡಲಾಗಿದ್ದು, ಜೆಡಿಎಸ್'ನ ಯಾವೊಬ್ಬ ಶಾಸಕರಿಗೂ ಸಚಿವ  ಸ್ಥಾನವನ್ನು ನೀಡಿಲ್ಲ. ಮೂರನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಜೆಡಿಎಸ್ ನಲ್ಲಿ ಖಾಲಿಯಿರುವ ಸಚಿವ ಸ್ಥಾನ ಮತ್ತು ನಿಗಮ ಮಂಡಳಿಗಳನ್ನು ತುಂಬುವ ಬಗ್ಗೆ ಚಿಂತನೆ ನಡೆಸಿದ್ದಾರೆ, 
ಮುಂಬರುವ ಜನವರಿ ಮಧ್ಯಂತರ ಅವಧಿಯಲ್ಲಿ ಮೂರನೇ ಹಂತದ ಸಚಿವ ಸಂಪುಟ ವಿಸ್ತರಣೆ ನಡೆಸುವ ಯೋಚನೆ ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆನ್ನಲಾಗಿದೆ. 
ದೇವೇಗೌಡ ಕುಟುಂಬವು ಅಪಾರ ದೈವಭಕ್ತಿಯುಳ್ಳದ್ದಾಗಿದ್ದು, ಧನುರ್ಮಾಸವು ಸಂಕ್ರಾತಿ ಹಬ್ಬಕ್ಕೆ ಮುಕ್ತಾಯವಾಗಲಿದೆ. ಧನುರ್ಮಾಸದ ಬಳಿಕ ಜೆಡಿಎಸ್ ಶಾಸಕರಿಗೆ ಸಚಿವ ಸ್ಥಾನ ಮತ್ತು ನಿಗಮ ಮಂಡಳಿಗೆ ಆಯ್ಕೆ ಪ್ರಕ್ರಿಯೆ ನಡೆಸುವ ಸಾಧ್ಯತೆಗಳಿವೆ. 
ಸಚಿವ ರೇವಣ್ಣ ಪೂಜೆ ಪುನಸ್ಕಾರ, ಕಾಲಗಳಲ್ಲಿ ಅಪಾರ ಪ್ರಮಾಣದಲ್ಲಿ ನಂಬಿಕೆಯುಳ್ಳವರಾಗಿದ್ದಾರೆ. ಧನುರ್ಮಾಸ ಒಳ್ಳೆಯ ಸಮಯವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಜೆಡಿಎಸ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವುದು ಬೇಡ ಎಂಬ ಸೂಚನೆ ನೀಡಿದ್ದರು. ಹೀಗಾಗಿ ಜೆಡಿಎಸ್ ಶಾಸಕರು ಕಾಂಗ್ರೆಸ್ ಜೊತೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿಲ್ಲ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.