ರಫೇಲ್ ಒಪ್ಪಂದ ಬಿಜೆಪಿಯ ಭ್ರಷ್ಟಾಚಾರದ ದುರ್ಗಂಧವನ್ನು ಪಸರಿಸುತ್ತಿದೆ: ಜೈವೀರ್ ಶೇರ್ಗಿಲ್
ರಫೇಲ್ ವಿಮಾನ ಖರೀದಿ ಒಪ್ಪಂದ ಬಿಜೆಪಿ ಭ್ರಷ್ಟಾಚಾರ ದುರ್ಗಂದವನ್ನು ಪರಿಸುತ್ತಿದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವರ್ತಾರ ಜೈವೀರ್ ಶೇರ್ಗಿಲ್ ಅವರು ಸೋಮವಾರ ಹೇಳಿದ್ದಾರೆ...

Published On :
ಮಂಗಳೂರು: ರಫೇಲ್ ವಿಮಾನ ಖರೀದಿ ಒಪ್ಪಂದ ಬಿಜೆಪಿ ಭ್ರಷ್ಟಾಚಾರ ದುರ್ಗಂಧವನ್ನು ಪರಿಸುತ್ತಿದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರ ಜೈವೀರ್ ಶೇರ್ಗಿಲ್ ಅವರು ಸೋಮವಾರ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಹಗರಣವು ರಾಷ್ಟ್ರೀಯ ಹಿತಾಸಕ್ತಿಯನ್ನು ನಾಶ ಮಾಡಿದ ದೊಡ್ಡ ನಿದರ್ಶನವಾಗಿದೆ. ಸರ್ಕಾರ ಬೊಕ್ಕಸಕ್ಕೆ ನಷ್ಟ ಹಾಗೂ ಆಪ್ತ ಬಂಡವಾಳಶಾಹಿ ಸ್ನೇಹಿತರಿಗೆ ಉತ್ತೇಜನವನ್ನು ಸಾರ್ಜವನಿಕ ಕ್ಷೇತ್ರದ ಉದ್ದಿಮೆಯನ್ನು ಬೆಲೆತೆತ್ತು ನೀಡಲಾಗಿದೆ. ಸ್ವತಂತ್ರ ಭಾರತದ ಅತೀ ದೊಡ್ಡ ರಕ್ಷಣಾ ವಲಯದ ಒಪ್ಪಂದದಲ್ಲಿ ಭಾರತವನ್ನು ವಂಚಿಸುವ ಕಲೆ ಮೋದಿ ಸರ್ಕಾರದ ಮಂತ್ರವಾಗಿದೆ. ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿರುವ ಮೋದಿ ಸರ್ಕಾರ ನಾಚಿಕೆಕೆಟ್ಟ ಮುಟ್ಟಿಗಾತುವ ಕಸರತ್ತಿನಲ್ಲಿ ತೊಗಡಿಕೊಂಡಿದೆ ಎಂದು ಹೇಳಿದ್ದಾರೆ.
ಯುಪಿಎ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2012ರ ಡಿಸೆಂಬರ್ 12ರಂದು ತೆರೆಯಲಾದ ಅಂತರಾಷ್ಟ್ರೀಯ ಬಿಡ್ ಪ್ರಕಾರ 126 ವಿಮಾನಗಳ ಪೈಕಿ ಪ್ರತೀವಿಮಾನಕ್ಕೆ ರೂ.526.1 ಕೋಟಿ, 18 ವಿಮಾನಗಳು ಹಾರಲು ಯೋಗ್ಯ ಸ್ಥಿತಿಯಲ್ಲಿ ಬರುವುದು, 108 ವಿಮಾನಗಳು ಸಾರ್ವಜನಿಕ ವಲ್ಯದ ಹೆಚ್ಎಎಲ್ ಫ್ರಾನ್ಸ್ ನಿಂದ ತಾಂತ್ರಿಕತೆಯ ಹಸ್ತಾಂತರ ಮುಖಾಂತರ ತಯಾರಾಗುವುದ ಎನ್ನಲಾಗಿತ್ತು. ಈ ಬೆಲೆಯಲ್ಲಿ 36 ವಿಮಾನಗಳ ಬೆಲೆ ರೂ.18,940 ಕೋಟಿಯಾಗುತ್ತದೆ. 2015ರ ಏ.10 ರಂದು ಮೋದಿಯವರು ಪ್ಯಾರಿಸ್ ನಲ್ಲಿ ಹಾರಾಟ ಯೋಗ್ಯ 36 ವಿಮಾನಗಳ ಖರೀದಿಯನ್ನು ಘೋಷಣೆ ಮಾಡಿದ್ದರು. ವಿಮಾನ ಖರೀದಿಯಲ್ಲಿ ರೂ.42 ಸಾವಿರ ಕೋಟಿ ಮೊತ್ತದ ಹಗರಣ ನಡೆದಿದೆ. ನಿರ್ವಹಣಾ ಗುತ್ತಿಗೆಯಲ್ಲಿ ರೂ.1 ಲಕ್ಷ ಕೋಟಿಗೂ ಹೆಚ್ಚು ಹಗರಣ ನಡೆದಿದೆ. ಈ ಹಗರಣದಲ್ಲಿ ಬಿಜೆಪಿ ಮುಖವಾಡ ಬಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


