ವಂದೇಮಾತರಂ ಹಾಡುವಾಗ ಎದ್ದು ನಿಲ್ಲದೆ, ಸಮಯದ ಕೊರತೆ ಎಂದ ರಾಹುಲ್: ವಿಡಿಯೋ ವೈರಲ್
ಬಿ. ಸಿ. ರೋಡ್ ನಲ್ಲಿ ನಡೆದ ಕಾಂಗ್ರೆಸ್ ಸಾರ್ವಜನಿಕ ಸಮಾವೇಶದ ವೇಳೆ ವಂದೇ ಮಾತರಂ ಗೀತೆ ಹಾಡುವಾಗ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ...

Published On :
ಬಂಟ್ವಾಳ: ಬಿ.ಸಿ. ರೋಡ್ ನಲ್ಲಿ ನಡೆದ ಕಾಂಗ್ರೆಸ್ ಸಾರ್ವಜನಿಕ ಸಮಾವೇಶದ ವೇಳೆ ವಂದೇ ಮಾತರಂ ಗೀತೆ ಹಾಡುವಾಗ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕೈಹಿಡಿದು ಎಬ್ಬಿಸಿದ ದೃಶ್ಯದ ವೀಡಿಯೊ ವೈರಲ್ ಆಗಿದೆ.
ವಂದೇ ಮಾತರಂ ಗೀತೆ ಶುರುವಿಗೂ ಮುನ್ನ ರಾಹುಲ್ ತಮ್ಮ ಕೈ ಗಡಿಯಾರ ನೋಡಿಕೊಂಡು, ಸಮಯದ ಕೊರತೆಯಿದೆ ಎಂದು ಸಂಘಟಕರಿಗೆ ಸನ್ನೆ ಮಾಡುತ್ತಾರೆ. ಬಳಿಕ ಕೇವಲ ಒಂದೇ ಸಾಲಿನಲ್ಲಿ ಈ ಗೀತೆ ಹಾಡಿ ಮುಗಿಸುವಂತೆ ವೇಣುಗೋಪಾಲ್ ಸೂಚನೆಕೊಟ್ಟರು ಎನ್ನಲಾಗಿದ್ದು . ಗಾಯಕಿ ಗೀತೆಯನ್ನು ಹಾಡಲು ಶುರು ಮಾಡಿದರೂ ರಾಹುಲ್ ಕುಳಿತೇ ಇದ್ದರು. ಆಗ ರಾಹುಲ್ ಅವರು ಬಲಭುಜ ಹಿಡಿದ ವೇಣುಗೋಪಾಲ್ ಎಬ್ಬಿಸಿ ನಿಲ್ಲಿಸುವುದು ದೃಶ್ಯದಲ್ಲಿ ಸೆರೆಯಾಗಿದೆ.
ರಾಹುಲ್ ಗಾಂಧಿ ಅವರ ಈ ವಿಡಿಯೋ ವೈರಲ್ ಆಗಿದ್ದು ಬಿಜೆಪಿ ನಾಯಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ, ವಂದೇ ಮಾತರಂ ಕೇಳಲು ಪುರುಸೊತ್ತಿಲ್ಲದ ರಾಹುಲ್ ಗಾಂಧಿ ರಾಜಕೀಯದಲ್ಲಿರಲು ಅನರ್ಹರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡರು ಅದೊಂದು ಫೇಕ್ ವಿಡಿಯೋ ಎಂದು ಸಮರ್ಥಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Rahul Gandhiರಾಹುಲ್ ಗಾಂಧಿrallyರ್ಯಾಲಿVande Mataramವಂದೇ ಮಾತರಂKarnataka Assembly Electionಕರ್ನಾಟಕ ವಿಧಾನ ಸಭೆ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


