ರಾಜಕೀಯ

ಪಿಯೂಷ್ ಗೊಯಲ್, ಪಿರಮಾಳ್ ಸಮೂಹ ಶಂಕಾಸ್ಪದ ಹಣಕಾಸು ವ್ಯವಹಾರದಲ್ಲಿ ತೊಡಗಿವೆ: ಪೃಥ್ವಿರಾಜ್ ಚೌಹ್ಹಾಣ್

ಕೇಂದ್ರ ರೈಲ್ವೆ ಮತ್ತು ಕಲ್ಲಿದ್ದಲು ಖಾತೆ ಸಚಿವ ಪಿಯೂಷ್ ಗೊಯಲ್ ಹಾಗೂ ಪಿರಾಮಾಳ್ ಕಂಪನಿ ಸಂಶಯಾಸ್ಪದ ಹಣಕಾಸು ವ್ಯವಹಾರದಲ್ಲಿ ತೊಡಗಿವೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವೀರಾಜ್ ಚೌಹ್ಹಾಣ್ ಆರೋಪಿಸಿದ್ದಾರೆ.

ಪಿಯೂಷ್ ಗೊಯಲ್, ಪಿರಮಾಳ್ ಸಮೂಹ ಶಂಕಾಸ್ಪದ ಹಣಕಾಸು ವ್ಯವಹಾರದಲ್ಲಿ ತೊಡಗಿವೆ: ಪೃಥ್ವಿರಾಜ್ ಚೌಹ್ಹಾಣ್
ಪೃಥ್ವಿರಾಜ್ ಚೌಹ್ಹಾಣ್
Published On :

ಬೆಂಗಳೂರು: ಕೇಂದ್ರ  ರೈಲ್ವೆ ಮತ್ತು ಕಲ್ಲಿದ್ದಲು ಖಾತೆ ಸಚಿವ ಪಿಯೂಷ್ ಗೊಯಲ್  ಹಾಗೂ ಪಿರಾಮಾಳ್ ಕಂಪನಿ ಸಂಶಯಾಸ್ಪದ ಹಣಕಾಸು ವ್ಯವಹಾರದಲ್ಲಿ ತೊಡಗಿವೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ  ಪೃಥ್ವೀರಾಜ್ ಚೌಹ್ಹಾಣ್ ಆರೋಪಿಸಿದ್ದಾರೆ.

 ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು.  ಇಂಧನ ಕ್ಷೇತ್ರದಲ್ಲಿ ಪಿರಾಮಾಳ್ ಸಮೂಹ ಕಂಪನಿ ಪ್ರಮುಖವಾದ ಪಾತ್ರ ವಹಿಸುತ್ತಿದೆ. ಗೊಯಲ್  ಇಂಧನ ಸಚಿವರಾದ ನಂತರ ಶೇ. 1000 ಪ್ರೀಮಿಯಂಗೆ ತನ್ನ ಕಂಪನಿಯನ್ನು ಅವರಿಗೆ ಮಾರಾಟ ಮಾಡಿದ್ದಾರೆ ಎಂದು ಹೇಳಿದರು.

ಹಿತಾಸಕ್ತಿ ಸಂಘರ್ಘವನ್ನು ಈ ಅಂಶಗಳೆ ಸ್ಪಷ್ಪಪಡಿಸುತ್ತವೆ. ಅಲ್ಲದೇ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಕಂಪನಿ ಮಾರಾಟ ಮಾಡಿರುವ ಬಗ್ಗೆ ಗೊಯಲ್ ಜವಾಬ್ದಾರರಾಗಿರಬೇಕಾಗುತ್ತದೆ. ಆದರೆ, ಏಕೆ ತನ್ನ ಆಸ್ತಿಯ ಬಗ್ಗೆ ಘೋಷಿಸಿಕೊಂಡಿಲ್ಲ ಎಂದು ಪೃಥ್ವೀರಾಜ್ ಚೌಹ್ಹಾಣ್ ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.