ರಾಜಕೀಯ

ವಿಧಾನಸಭಾ ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಎಸ್'ಡಿಪಿಐ

ಕರ್ನಾಟಕ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಿಂದಲೂ ಸ್ಪರ್ಧೆ ನಡೆಸದಿರಲು ಸೋಷಿಯನ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್'ಡಿಪಿಐ) ನಿರ್ಧರಿಸಿದೆ...

ವಿಧಾನಸಭಾ ಚುನಾವಣಾ ಕಣದಿಂದ ಹಿಂದಕ್ಕೆ ಸರಿದ ಎಸ್'ಡಿಪಿಐ
ಸಂಗ್ರಹ ಚಿತ್ರ
Published On :
ಬೆಂಗಳೂರು; ಕರ್ನಾಟಕ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಮೂರು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಿಂದಲೂ ಸ್ಪರ್ಧೆ ನಡೆಸದಿರಲು ಸೋಷಿಯನ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್'ಡಿಪಿಐ) ನಿರ್ಧರಿಸಿದೆ. 
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ನರಸಿಂಹರಾಜ, ಬಂಟ್ವಾಳ, ಗುಲ್ಬರ್ಗ, ಬೆಂಗಳೂರಿನ ಸರ್ವಜ್ಞ ನಗರ, ಚಿಕ್ಕಪೇಟೆ, ಹೆಬ್ಬಾಳ ಸೇರಿದಂತೆ ಮುಂತಾದ ರಾಜ್ಯ ಆರು ಕ್ಷೇತ್ರಗಳಲ್ಲಿ ಎಸ್'ಡಿಪಿಐ ಸ್ಪರ್ಧಿಸಲು ಚಿಂತನೆಗಳನ್ನು ನಡೆಸಿತ್ತು. ಇದರಲ್ಲಿ ನರಸಿಂಹರಾಜ, ಚಿಕ್ಕಪೇಟೆ, ಗುಲ್ಬರ್ಗಾ ಹಾಗೂ ಬಂಟ್ವಾಳದ ನಾಮಪತ್ರವನ್ನೂ ಸಲ್ಲಿಸಲಾಗಿತ್ತು. ಆದರೆ, ಪಕ್ಷವು ನಿನ್ನೆ ಮಹತ್ತರ ನಿರ್ಧಾರವನ್ನು ಕೈಗೊಂಡಿದ್ದು, ಕೇವಲ ಮೈಸೂರಿನ ನರಸಿಂಹರಾಜ, ಬೆಂಗಳೂರಿನ ಚಿಕ್ಕಪೇಟೆ ಹಾಗೂ ಉತ್ತರ ಕಲಬುರಗಿಯಲ್ಲಿ ಮಾತ್ರ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದೆ. 
ಪಕ್ಷದ ನಿರ್ಧಾರ ಹಿನ್ನಲೆಯಲ್ಲಿ ಕರಾವಳಿಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಬಂಟ್ವಾಳ ಕ್ಷೇತ್ರ ಅಭ್ಯರ್ಥಿಯಾಗಿದ್ದ ರಿಯಾಝ್ ಫರಂಗಿಪೇಟೆಯವರು ಸಲ್ಲಿಸಿದ್ದ ನಾಮಪತ್ರವನ್ನು ಪಕ್ಷದ ನಾಯಕರ ಆದೇಶದ ಮೇರೆಗೆ ಹಿಂದಕ್ಕೆ ಪಡೆಯಲಾಗಿದೆ. 
ಈ ಬಾರಿಯ ಚುನಾವಣೆಯಲ್ಲಿ ಸುಮಾರು 25 ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಇದಕ್ಕಾಗಿ ಪೂರ್ವ ಸಿದ್ಧತೆಯಗಳನ್ನೂ ನಡೆಸಿದ್ದೆವು. ಪಕ್ಷಕ್ಕೆ ರಾಜ್ಯದಾದ್ಯಂತ ಬೆಂಬಲಗಳೂ ವ್ಯಕ್ತವಾಗತೊಡಗಿವೆ. ಮತದಾರರು ನಮ್ಮೊಂದಿಗಿದ್ದಾರೆ. ಆದರೆ, ಬಿಜೆಪಿಯು ಹಣ ಹಾಗೂ ಆಮಿಷಗಳ ಮೂಲಕ ಮತಗಳನ್ನು ಖರೀದಿಸಿ, ಮುಸ್ಲಿಂ ಹಾಗೂ ದಲಿತರ ಮತಗಳ ವ್ಯಾಪಾರ ಮಾಡಿ ಅಧಿಕಾರಕ್ಕೆ ಏರಲು ಹಣವಿಸುತ್ತಿದೆ. ಕೋಮು ಪಕ್ಷಗಳನ್ನು ತಡೆಯಬೇಕು ಮತ್ತು ನಮ್ಮ ಅಭ್ಯರ್ಥಿಗಳಲ್ಲೊಬ್ಬರು ವಿಧಾನಸೌಧಕ್ಕೆ ಆಯ್ಕೆಯಾಗಬೇಕೆಂಬುದೇ ನಮ್ಮ ಗುರಿ ಎಂದು ಎಸ್'ಡಿಪಿಐ ಪಕ್ಷದ ಪ್ರಧಾನಕಾರ್ಯದರ್ಶಿ ಅಬ್ದುಲ್ ಲತೀಫ್ ಅವರು ಹೇಳಿದ್ದಾರೆ. 
ಬೇರಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡುವ ಕುರಿತು ಈ ವರೆಗೂ ನಿರ್ಧಾರಗಳನ್ನು ಕೈಗೊಂಡಿಲ್ಲ. ಬಿಜೆಪಿ ಹಣಕೊಟ್ಟು ಮತಗಳನ್ನು ಖರೀದಿಸುವ ಪ್ರಯತ್ನಗಳನ್ನು ಮಾಡುತ್ತಿದೆ. ಆಧರೆ, ಹಣಕೊಟ್ಟು ಮತಗಳನ್ನು ಖರೀದಿಸುವ ಕಾಲ ಅಲ್ಲ. ದಲ್ಲಾಳಿ ಮಾಡುವ ಕಾಲವೂ ಅಲ್ಲ, ಕೋಮುವಾದಿ ಶಕ್ತಿಗಳ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ಇಂತಹ ಯಾವುದೇ ಅವಕಾಶ ನೀಡಲು ಬಯಸುವುದಿಲ್ಲ. ನರಸಿಂಹರಾಜದಲ್ಲಿ ಗೆಲ್ಲುವ ವಿಶ್ವಾಸವಿದ್ದು, ಅಲ್ಲಿ ಪಕ್ಷ ಸ್ಪರ್ಧೆ ನಡೆಯಸಲಿದೆ. ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಎಂದು ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯ ಅಬ್ದುಲ್ ಜಲೀಲ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.