ವಿಧಾನಸಭೆ ಚುನಾವಣೆ: ಕರಾವಳಿಯಲ್ಲಿ ಬಿಜೆಪಿಗೆ ಆರ್ಎಸ್ಎಸ್ ಬೆನ್ನೆಲಬು
ವಿಧಾನಸಭೆ ಚುನಾವಣೆಯಲ್ಲಿ ಕರಾವಳಿ ಕರ್ನಾಟಕ ಭಾಗ್ದಲ್ಲಿ ಭಾರತೀಯ ಜನತಾ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ನ ....

Published On :
ಬಂಟ್ವಾಳ: ವಿಧಾನಸಭೆ ಚುನಾವಣೆಯಲ್ಲಿ ಕರಾವಳಿ ಕರ್ನಾಟಕ ಭಾಗ್ದಲ್ಲಿ ಭಾರತೀಯ ಜನತಾ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲುವ ಉದ್ದೇಶದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ನ ಅಧಿಕೃತ ಬೆಂಬಲ ಸ್ವೀಕರಿಸಿದೆ. ಬಿಜೆಪಿ ತಾನು ಸಂಘ ಪರಿವಾರದ ಭಾಗವಾಗಿದ್ದು ಸಹ ಇಷ್ಟು ಕಾಲವೂ ಆರ್ ಎಸ್ ಎಸ್ ಮಾತ್ರ ಚುನಾವಣಾ ರಾಜಕೀಯದಿಂದ ದೂರ ಇದ್ದಿತ್ತು. ಆದರೆ ಈ ಬಾರಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ - ಮೂರು ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು, ಸಂಘ ಪರಿವಾರದ ಕಾರ್ಯಕರ್ತರೂ ಒಟ್ಟಾಗಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಗೆ ಗಟ್ಟಿ ಅಡಿಪಾಯ ದೊರಕಿಸಲು ಆರ್ ಎಸ್ ಎಸ್ ಈ ಬಾರಿ ಕರ್ನಾಟಕ ಚಿಧಾನಸಭೆ ಚುನಾವಣೆ ಪ್ರಚಾರಕ್ಕೆ ಧುಮುಕುವ ಮೂಲಕ ಸ್ಪಷ್ಟ ಕಾರ್ಯಸೂಚಿ ಸಿದ್ದಪಡಿಸಿಕೊಳ್ಳುತ್ತಿದೆ ಎನ್ನಲಾಗಿದೆ.
ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ವಲಯದ ಕಾರ್ಯನಿರ್ವಾಹಕ ಸದಸ್ಯರಾದ ಕಲ್ಲಡ್ಕ ಪ್ರಭಾಕರ ಭಟ್, ಕರ್ನಾಟಕ ಕರಾವಳಿಯಲ್ಲಿ ಉದ್ಭವಿಸಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ಆರ್ ಎಸ್ ಎಸ್ ಎಂದೂ ನೇರ ರಾಜಕೀಯಕ್ಕೆಇಳಿಯುವುದಿಲ್ಲ ಎಂದಿದ್ದಾರೆ. "ಹಿಂದೆ ನಾವು ಲೋಕಸಭೆ ಚುನಾವಣೆಗಾಗಿ ಕೆಲಸ ಮಾಡಿದ್ದೆವು. ಆದರೆ ರಾಜ್ಯವೊಂದರ ಚುನಾವಣೆಯಲ್ಲಿ ಎಂದೂ ಪ್ರಚಾರ ನಡೆಸಿಲ್ಲ. ಆದರೆ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಗೆಲುವನ್ನು ಖಚಿತಪಡಿಸಿಕೊಳ್ಳಲು ಪರ್ಕ್ಷದ ಪರ ಪ್ರಚಾರ ನಡೆಸುತ್ತೇವೆ, ಕರ್ನಾಟಕದಲ್ಲಿ ಬಿಜೆಪಿ ಗೆಲುವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ಪ್ರಭಾವ ಬೀರಲಿದೆ" ಪ್ರಭಾಕರ ಭಟ್ ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿಯಾಗಿದೆ ಎಂದು ಆರೋಪಿಸಿದ ಆರ್ ಎಸ್ ಎಸ್ ಹಿಂದುತ್ವದ ಅಜೆಂಡಾ ಹೊಂದಿದ ಪಕ್ಷಕ್ಕೆ ನಮ್ಮ ಬೆಂಬಲ ಎಂದಿದೆ. "ಸಿದ್ದರಾಮಯ್ಯ ಆಡಳಿತದಲ್ಲಿ ಹಿಂದೂಗಳಿಗೆ ಅನ್ಯಾಯವಾಗಿದೆ. ನಾವು ಹಿಂದುತ್ವಕ್ಕಾಗಿ ಹೋರಾಡುವ ಯಾರಿಗೂ ಬೆಂಬಲ ನೀಡಲು ಸಿದ್ದರಿದ್ದೇವೆ" ಅವರು ಹೇಳಿದರು.
ಕರ್ನಾಟಕ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಆರ್ ಎಸ್ ಎ ಸ್ ಶಾಖೆ ಇದ್ದು ನಿಶ್ಚಿತವಾಗಿ ಇದರ ಪ್ರಭಾವ ಬಹಳವಾಗಿ ಗೋಚರಿಸಲಿದೆ.ಇದಾಗಲೇ ಬಂಟ್ವಾಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರು ಪ್ರಚಾರ ಪ್ರಾರಂಭಿಸಿದ್ದು ಅವಿಭಜಿತ ದಕ್ಷಿಣ ಕನ್ನಡ ಭಾಗದಲ್ಲಿ ಇದನ್ನು ಮುಂದುವರಿಸುವುದಾಗಿ ಭಟ್ ಹೇಳಿದರು.
ಭಷ್ಠಾಚಾರದ ವಿರುದ್ಧದ ಹೋರಾಟಕ್ಕೆ ಆರ್ ಎಸ್ ಎಸ್ ಬೆಂಬಲ್ವಿದೆ.ಈ ನಡುವೆ ಭ್ರಷ್ಟಾಚಾರದ ಪ್ರಕರಣದಲ್ಲಿ ಆರೋಪಿ ಬಿ.ಎಸ್. ಯಡಿಯೂರಪ್ಪರ ನಾಯಕತ್ವವನ್ನು ಬೆಂಬಲಿಸಲು ಸಂಘಟನೆ ನಿರ್ಧರಿಸಿದೆ ಮತ್ತು ಅಕ್ರಮ ಗಣಿಗಾರಿಕೆ ಹಗರಣ ಆರೋಪಿ ಜನಾರ್ದನ ರೆಡ್ಡಿ ಸೋದರನಿಗೆ ಬಿಜೆಪಿ ಟಿಕೆಟ್ ನೀಡಿದೆ "ಕಾಂಗ್ರೆಸ್ ನ ಭ್ರಷ್ಠಾಚಾರದ ಬಗ್ಗೆ ಜನರಿಗೆ ಅರಿವಾಗಿದೆ. ಇನ್ನು ಬಿಜೆಪಿಯಲ್ಲಿನ ಕೆಲ ಅಭ್ಯರ್ಥಿಗಳು ಭ್ರಷ್ಠಾಚಾರ ನಡೆಸಿದ್ದಾರೆನ್ನುವುದು ವಿಷಾದನೀಯ. ಆದರೆ ಇದು ಸುಧಾರಣೆಯತ್ತ ನಮ್ಮದೊಂದು ಹೆಜ್ಜೆಯಾಗಿದೆ.`ಲಭ್ಯವಿರುವ ಅಭ್ಯರ್ಥಿಗಳಲ್ಲಿ ಉತ್ತಮವಾದವರನ್ನು ನಾವು ಆಯ್ಕೆ ಮಾಡಬೇಕು." ಎಕ್ಸ್ ಪ್ರೆಸ್ ನೊಡನೆ ಮಾತನಾಡಿದ ಭಟ್ ನುಡಿದರು.
ಕಾಂಗ್ರೆಸ್ ಸರ್ಕಾರದ ಹಿಂದು ವಿರೋಧಿ ಭಾವನೆಗಳು ಜನರಲ್ಲಿ ಕೋಪಕ್ಕೆ ಕಾರಣವಾಗಿದೆ ಎಂದು ಭಟ್ ಹೇಳಿದ್ದಾರೆ "ಬಡ ಕಾರ್ಯಕರ್ತರನ್ನು ಪೋಲೀಸ್ ಠಾಣೆಗೆ ಕರೆಸಿ ಚುನಾವಣೆ ಸಮಯದಲ್ಲಿ ಹತ್ತು ಲಕ್ಷ ಬಾಂಡ್ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಈ ಪ್ರಕಾರ ಕರಾವಳಿಯ ಭಾಗಗಳಲ್ಲಿ ಉದ್ಭವಿಸುವ ಹಿಂಸೆ, ಘರ್ಷಣೆಗಳಿಗೆ ಅವರೇ ಜವಾಬ್ದಾರರಾಗುತ್ತಾರೆ.
ತಮ್ಮ ಎದುರಾಳಿ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸೇರಿದಂತೆ ಕಾಂಗ್ರೆಸ್ ಮುಖಂಡರು ಅಭಿವೃದ್ಧಿ, ಮೂಲಸೌಕರ್ಯ, ರಸ್ತೆ ಮತ್ತು ನೀರಿನ ವ್ಯವಸ್ಥೆ ಕುರಿತು ಮಾತನಾಡುತ್ತಾರೆ. ಆದರೆ ಹಿಂದೂ ಯುವತಿಯರಿಗೆ ಈ ರಸ್ತೆಗಳು ಸುರಕ್ಷಿತವಾಗಿವೆಯೇ? ಎಂದು ಪ್ರಶ್ನಿಸಿದ್ದಾರೆ. "ನಮ್ಮ ಏಕೈಕ ಅಜೆಂಡಾ ಹಿಂದುತ್ವದ ಆಗಿದೆ. ನಮ್ಮ ಸಿದ್ದಾಂತಕ್ಕೆ ಬೆಂಬಲಿಸುವ ಯಾವುದೇ ಅಭ್ಯರ್ಥಿಗೆ ನಮ್ಮ ಬೆಂಬಲವಿರಲಿದೆ. ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್bjpಬಿಜೆಪಿRSSKalladka Prabhakar Bhatಕಲ್ಲಡ್ಕ ಪ್ರಭಾಕರ್ ಭಟ್ಆರ್ಎಸ್ಎಸ್Karnataka Assembly Electionಕರ್ನಾಟಕ ವಿಧಾನಸಭೆ ಚುನಾವಣೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


