ಸಚಿನ್ ಕುಳ್ಳ ಆದರೂ ಫೇಮಸ್, ನಾನೂ ಅಷ್ಟೇ ಅಲ್ತಾಫ್‌ಗಿಂತ ಫೇಮಸ್: ಜಮೀರ್ ಅಹಮ್ಮದ್
ಕಾಂಗ್ರೆಸ್ ಮುಖಂಡ ಜಮೀರ್ ಅಹಮ್ಮದ್ ನಾಲ್ಕೂವರೆ ಅಡಿ ನಾನು 6 ಅಡಿ ಎಂದು ಹೇಳಿದ್ದ ಜೆಡಿಎಸ್ ನಾಯಕ ಅಲ್ತಾಫ್ ಖಾನ್ ಹೇಳಿದ್ದು ಇದಕ್ಕೆ ತಿರುಗೇಟು ನೀಡಿರುವ...

Published On :
ಬೆಂಗಳೂರು: ಕಾಂಗ್ರೆಸ್ ಮುಖಂಡ ಜಮೀರ್ ಅಹಮ್ಮದ್ ನಾಲ್ಕೂವರೆ ಅಡಿ ನಾನು 6 ಅಡಿ ಎಂದು ಹೇಳಿದ್ದ ಜೆಡಿಎಸ್ ನಾಯಕ ಅಲ್ತಾಫ್ ಖಾನ್ ಹೇಳಿದ್ದು ಇದಕ್ಕೆ ತಿರುಗೇಟು ನೀಡಿರುವ ಜಮೀರ್ ಸಚಿನ್ ತೆಂಡೂಲ್ಕರ್ ಸಹ ಕುಳ್ಳ ಆದರೂ ಆತ ಫೇಮಸ್ಸು ಅದೇ ರೀತಿ ನಾನು ಅಲ್ತಾಫ್‌ಗಿಂತ ಫೇಮಸ್ ಎಂದು ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಜಮೀರ್ ಅಹಮ್ಮದ್ ನಾನು ನಾಲ್ಕೂವರೆ ಅಡಿ ಆದರೆ ಸಖತ್ ಫೇಮಸ್ ಎಂದು ಲೇವಡಿ ಮಾಡಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಎತ್ತರ ಎಷ್ಟು, ಅಮಿತಾಬ್ ಬಚ್ಚನ್ ಎತ್ತರ ಎಷ್ಟು? ಬಚ್ಚನ್ ಗಿಂತ ಸಚಿನ್ ಫೇಮಸ್ ಅಲ್ಲವೇ? ನಾನು ಹಾಗೆಯೇ ಎಂದು ಹೇಳಿದ್ದಾರೆ.
ಇದೇ ವೇಳೆ ಎಂಎಲ್ಸಿ ಶರವಣ ವಿರುದ್ಧ ಕಿಡಿಕಾರಿದ ಜಮೀರ್, ಶರವಣ ರಾಜಕಾರಣಿಯೇ ಅಲ್ಲ. ಚಿನ್ನದ ವ್ಯಾಪಾರಿ. ದೇವೇಗೌಡ ಮತ್ತು ಅವರ ಮಕ್ಕಳ ಜತೆ ಓಡಾಡಿಕೊಂಡೇ ಎಂಎಲ್ಸಿ ಆದವರು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.
ಇನ್ನು ಈ ಬಾರಿಯ ಚುನಾವಣೆಯಲ್ಲಿ ನಾನು ಸೋತರೆ ನನ್ನ ಕತ್ತು ಕತ್ತರಿಸಿ ನಿಮ್ಮ ಕಾಲ ಮುಂದೆ ಇಡುತ್ತೇನೆ. ಅಲ್ತಾಫ್ ಖಾನ್ ಕಾಲು ಹಿಡಿದುಕೊಂಡು ಸಹಾಯ ಕೇಳಿದ್ದೇ ಎಂದಿದ್ದಾರೆ. ಅದು ಸಾಬೀತಾದರೆ ನಾನು ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುCongressಕಾಂಗ್ರೆಸ್BengaluruJDSಜೆಡಿಎಸ್Zameer Ahmadಜಮೀರ್ ಅಹಮ್ಮದ್Karnataka Assembly Electionಅಲ್ತಾಫ್ ಖಾನ್Altaf Khan
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


