ಮಂಡ್ಯ: ಹಳ್ಳಿಗೆ ಭೇಟಿ ನೀಡದ ಶಾಸಕನನ್ನು ಕಾರಿನಿಂದ ಇಳಿಸಿ ತರಾಟೆ ತೆಗೆದುಕೊಂಡ ಗ್ರಾಮಸ್ಥರು
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಗ್ರಾಮಕ್ಕೆ ಚುನಾವಣೆ ನಡೆದ ನಂತರ ಒಮ್ಮೆಯೂ ಭೇಟಿ ನೀಡದ ಜೆಡಿಎಸ್ ಬಂಡಾಯ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ...

Published On :
ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಗ್ರಾಮಕ್ಕೆ ಚುನಾವಣೆ ನಡೆದ ನಂತರ ಒಮ್ಮೆಯೂ ಭೇಟಿ ನೀಡದ ಜೆಡಿಎಸ್ ಬಂಡಾಯ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರನ್ನು ಗ್ರಾಮಸ್ಥರು ಕಾರಿನಿಂದ ಇಳಿಸಿ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಶ್ರೀರಂಗ ಪಟ್ಟಣದ ಮೇಲಪುರ ಗ್ರಾಮಕ್ಕೆ ರಮೇಶ್ ಬಾಬು 2013ರ ವಿಧಾನಸಭೆ ಚುನಾವಣೆ ನಂತರ ಒಮ್ಮೆಯೂ ಭೇಟಿ ನೀಡಿಲ್ಲ, ರಮೇಶ್ ಬಾಬು ಕಾರು ಗ್ರಾಮದ ಮೂಲಕ ಸಂಚರಿಸುವ ವೇಳೆ ತಡೆಗಟ್ಟಿದ ಗ್ರಾಮಸ್ಥರು, ಅವರನ್ನು ಕಾರಿನಿಂದ ಇಳಿಸಿ ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ, ಹೀಗಾಗಿ ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ, ಚರಂಡಿಗಳು ಸೇರಿದಂತೆ ಊರಿಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ, ಹಿರಿಯ ನಾಗರಿಕರು ರಸ್ತೆಗಳಲ್ಲಿ ನಡೆಯಲು ಸಾಧ್ಯವಾಗುತ್ತಿಲ್ಲ, ಕಳೆದ 4 ವರ್ಷಗಳಲ್ಲಿ ಒಂದು ಭಾರಿಯೂ ಗ್ರಾಮಕ್ಕೆ ಭೇಟಿ ತಮ್ಮ ಕುಂದುಕೊರತೆಗಳನ್ನು ಆಲಿಸಿಲ್ಲ ಎಂದು ಕಿಡಿ ಕಾರಿದ್ದಾರೆ. ಈಗ ವಿಧಾನ ಸಭೆ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿರುವುದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
VillagersSrirangapatnaಶ್ರೀರಂಗಪಟ್ಟಣಗ್ರಾಮಸ್ಥರುJds MLAಜೆಡಿಎಸ್ ಶಾಸಕRamesh Babu Bandisiddee Gowdaರಮೇಶ್ ಬಾಬು ಬಂಡಿಸಿದ್ದೇಗೌಡ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


