ಮೇಯರ್ ಹುದ್ದೆ ಮೇಲೆ ಕಣ್ಣು: 'ಕಿಂಗ್ ಮೇಕರ್ ಜೆಡಿಎಸ್ ಕಿಂಗ್ ಆಗಲು ಪಟ್ಟು'
ಬಿಬಿಎಂಪಿ ಕೌನ್ಸಿಲ್ ನಲ್ಲಿ ಕಿಂಗ್ ಮೇಕರ್ ಆಗಿದ್ದ ಜಾತ್ಯಾತೀತ ಜನತಾ ದಳಕ್ಕೆ ಸದ್ಯ ರಾಜನಾಗಿ ಮೆರೆಯಬೇಕೆಂಬ ಹಂಬಲ ಹೆಚ್ಚಿದೆ. ಸೆಪ್ಟಂಬರ್ 28 ರಂದು ...

Published On :
ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ನಲ್ಲಿ ಕಿಂಗ್ ಮೇಕರ್ ಆಗಿದ್ದ ಜಾತ್ಯಾತೀತ ಜನತಾ ದಳಕ್ಕೆ ಸದ್ಯ ರಾಜನಾಗಿ ಮೆರೆಯಬೇಕೆಂಬ ಹಂಬಲ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ 28 ರಂದು ನಡೆಯುವ ಮೇಯರ್ ಚುನಾವಣೆಯಲ್ಲಿ ತನಗೆ ಮೇಯರ್ ಹುದ್ದೆ ನೀಡಬೇಕೆಂದು ಜೆಡಿಎಸ್ ಪಟ್ಟು ಹಿಡಿದಿದೆ.
ಭಾನುವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಪೋರೇಟರ್ ಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಕಳೆದ ಎರಡು ಅವಧಿಗೆ (ಅಂದರೆ ಪ್ರತಿ ಮೇಯರ್ ಗೆ 1 ವರ್ಷ) ಕಾಂಗ್ರೆಸ್ ಅಭ್ಯರ್ಥಿಗಳಾದ ಬಿಎನ್ ಮಂಜುನಾಥ ರೆಡ್ಡಿ ಮತ್ತು ಪದ್ಮಾವತಿ ಅವರು ಮೇಯರ್ ಆಗಲು ಜೆಡಿಎಸ್ ಬೆಂಬಲ ನೀಡಿತ್ತು, ಜೊತೆಗೆ ಜೆಡಿಎಸ್ ಗೆ ಉಪ ಮೇಯರ್ ಹುದ್ದೆ ನೀಡಲಾಗಿತ್ತು. ಹೀಗಾಗಿ ಈ ವರ್ಷ ಜೆಡಿಎಸ್ ಗೆ ಮೇಯರ್ ಹುದ್ದೆ ನೀಡಬೇಕಿದ್ದು, ಅದಕ್ಕೆ ಕಾಂಗ್ರೆಸ್ ಬೆಂಬಲ ನೀಡಬೇಕಿದೆ. ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೊತೆ ವ್ಯವಹರಿಸುವುದು ಜೆಡಿಎಸ್ ಗೆ ಸ್ವಲ್ಪ ಕಠಿಣವಾಗುತ್ತಿದೆ.
ಈ ಬಾರಿ ನಮಗೆ ಮೇಯರ್ ಸ್ಥಾನ ನೀಡಬೇಕಿದೆ, ಈ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅಂತಿಮ ನಿರ್ಧಾರ ಕೈಗೊಳ್ಳಲ್ದಿದ್ದಾರೆ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


