ರಾಜಕೀಯ

ಬೆಂಗಳೂರನ್ನು ಕೊಂದವರು, ನಾಶಪಡಿಸಿದವರು, ಕಾಂಗ್ರೆಸ್ಸಿಗರು: ಯಡಿಯೂರಪ್ಪ

ಬೆಂಗಳೂರನ್ನು ನಾಶ ಮಾಡಿದವರು ಕಾಂಗ್ರೆಸ್ಸಿಗರು, ಬೆಂಗಳೂರನ್ನು ಕೊಂದವರು ಕಾಂಗ್ರೆಸ್ಸಿಗರು, ಬೆಂಗಳೂರು ಮುಳುಗುವಂತೆ ಮಾಡಿದವರು ಕಾಂಗ್ರೆಸ್ಸಿಗರು, ...

ಬೆಂಗಳೂರನ್ನು ಕೊಂದವರು, ನಾಶಪಡಿಸಿದವರು, ಕಾಂಗ್ರೆಸ್ಸಿಗರು: ಯಡಿಯೂರಪ್ಪ
ಬಿ.ಎಸ್ ಯಡಿಯೂರಪ್ಪ
Published On :
ಬೆಂಗಳೂರು: ಬೆಂಗಳೂರನ್ನು ನಾಶ ಮಾಡಿದವರು ಕಾಂಗ್ರೆಸ್ಸಿಗರು, ಬೆಂಗಳೂರನ್ನು ಕೊಂದವರು ಕಾಂಗ್ರೆಸ್ಸಿಗರು, ಬೆಂಗಳೂರು ಮುಳುಗುವಂತೆ ಮಾಡಿದವರು ಕಾಂಗ್ರೆಸ್ಸಿಗರು, ಇದು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಆರೋಪ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಬಿಎಸ್ ವೈ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಮಳೆ ಬಂದರೆ ಬೆಂಗಳೂರು ರಸ್ತೆಗಳು ಪ್ರವಾಹ ದಂತಾಗುತ್ತವೆ, ರಸ್ತೆಗಳ ಗುಂಡಿಗಳಿಂದಾಗಿ ಅನೇಕ ನಾಗರಿಕರು ಜೀವ ಕಳೆದುಕೊಳ್ಳುವಂತಾಗಿದೆ. ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದೆ,  ಬೆಂಗಳೂರು ಮೂಲಭೂತ ಸೌಕರ್ಯ ಹದಗೆಡಿಸಿರುವ ಕಾಂಗ್ರೆಸ್ ಗೆ ನಾಚಿಕೆಯಾಗಬೇಕು ಎಂದು ಆರೋಪಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಸಿದ್ದರಾಮಯ್ ಸರ್ಕಾರ ಲೂಟಿ ಮಾಡುತ್ತಿದೆ ಎಂದು ದೂರಿದ್ದಾರೆ. ಬೆಂಗಳೂರು ನಗರವೊಂದರಲ್ಲೇ 28 ವಿಧಾನಸಭೆ ಕ್ಷೇತ್ರಗಳಿದ್ದು, ಮಿಷನ್ 150 ಗೆ ಬೆಂಗಳೂರು ನಗರ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಯಡಿಯೂರಪ್ಪ ಅಭಿಪ್ರಾಯ.
ಇನ್ನೂ ಚುನಾವಣಾ ತಂತ್ರದ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಪರಿವರ್ತನಾ ಯಾತ್ರೆ ಮೂಲಕ ವಿಧಾನಸಭೆ ಚುನಾವಣಾ ಪ್ರಚಾರ ಆರಂಭಿಸುವುದಾಗಿ ಹೇಳಿದ್ದಾರೆ. ನವೆಂಬರ್ 2 ರಿಂದ ಪರಿವರ್ತನಾ ಯಾತ್ರೆ ಆರಂಭವಾಗಲಿದ್ದು, ರಾಜ್ಯದ 224 ವಿಧಾನ ಸಭೆ ಕ್ಷೇತ್ರಗಳಲ್ಲಿನ ಜನತೆಯನ್ನು ತಲುಪುವುದಾಗಿ ತಿಳಿಸಿದ್ದಾರೆ.
ಈ ವೇಳೆ ರಾಜ್ಯದ ಜನತೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ, ವಿವಿಧ ಜನಪರ ಕಾರ್ಯಕ್ರಮಗಳ ಬಗ್ಗೆ ಹಾಗೂ ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಜನರಿಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.