ರಾಜಕೀಯ

ರಫೇಲ್ ಒಪ್ಪಂದದಿಂದ ಹೆಚ್ಎಎಲ್'ಗೆ ಪ್ರಧಾನಿ ಮೋದಿ ಅನ್ಯಾಯ: ದಿನೇಶ್ ಗುಂಡೂರಾವ್

ಪ್ರಧಾನಮಮಂತ್ರಿ ನರೇಂದ್ರ ಮೋದಿಯವರು ಉದ್ಯಮಿಗಳಾದ ಅನಿಲ್ ಅಂಬಾನಿ ಹಾಗೂ ಆದಾನಿಗೆ ಪರವಾಗಿದ್ದು, ಹೆಚ್ಎಎಲ್ ಹಾಗೂ ಡೆಸರ್ಟ್ ಜೊತೆಗೆ ಮಾಡಿಕೊಂಡ ರಫೇಲ್...

ರಫೇಲ್ ಒಪ್ಪಂದದಿಂದ ಹೆಚ್ಎಎಲ್'ಗೆ ಪ್ರಧಾನಿ ಮೋದಿ ಅನ್ಯಾಯ: ದಿನೇಶ್ ಗುಂಡೂರಾವ್
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್
Published On :
ಬೆಂಗಳೂರು: ಪ್ರಧಾನಮಮಂತ್ರಿ ನರೇಂದ್ರ ಮೋದಿಯವರು ಉದ್ಯಮಿಗಳಾದ ಅನಿಲ್ ಅಂಬಾನಿ ಹಾಗೂ ಆದಾನಿಗೆ ಪರವಾಗಿದ್ದು, ಹೆಚ್ಎಎಲ್ ಹಾಗೂ ಡೆಸರ್ಟ್ ಜೊತೆಗೆ ಮಾಡಿಕೊಂಡ ರಫೇಲ್ ಉತ್ಪಾದನಾ ಒಪ್ಪಂದ ರದ್ದು ಮಾಡಿರುವುದರ ಹಿಂದೆ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬುಧವಾರ ಆರೋಪ ಮಾಡಿದ್ದಾರೆ. 
ಈ ಕುರಿತಂತೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಿಂದ ವಿಮಾನಗಳ ಖರೀದಿಯಲ್ಲಿ ಭ್ರಷ್ಟಚಾರಾ ನಡೆದಿದ್ದು, ಈ ಕೂಡಲೇ ಉದ್ಯಮಿಗಳಾದ ಅನಿಲ್ ಅಂಬಾನಿ ಹಾಗೂ ಅದಾನಿ ಒಡೆತನದ ಕಂಪನಿಗಳ ಜೊತಗೆ ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಮಾಡಬೇಕೆಂದು ಒತ್ತಾಯಿಸಿದ್ದಾರೆ. 
ರಕ್ಷಣಾ ಇಲಾಖೆಗೆ 126 ವಿಮಾನ ಖರೀದಿ ಮಾಡಲು ಹೆಚ್ಎಎಲ್ ಜೊತೆಗೆ 2013ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ನರೇಂದ್ರ ಮೋದಿ ಸರ್ಕಾರ ಅನಿಲ್ ಅಂಬಾನಿ ಹಾಗೂ ಅದಾನಿ ಕಂಪನಿಗಳಿಗೆ ಲಾಭ ಮಾಡಿಕೊಡಲು ಹೆಚ್ಎಎಲ್ ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಮಾಡಿದೆ. ವಿಮಾನ ತಂತ್ರಜ್ಞಾನದಲ್ಲಿ ಯಾವುದೇ ಅನುಭವ ಇಲ್ಲದಿದ್ದರೂ ಅಂಬಾನಿ ಹಾಗೂ ಅದಾನಿಗೆ ಟೆಂಡರ್ ನೀಡಿ ಸಹಾಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಕ್ಷಣಾ ಕ್ಷೇತ್ರದಲ್ಲಿ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಹೆಚ್ಎಎಲ್ ಒಪ್ಪಂದ ರದ್ದುಪಡಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ತಂತ್ರಜ್ಞಾನ ಸಹಕಾರದ ಒಪ್ಪಂದ ಹೆಚ್ಎಎಲ್ ಕೈತಪ್ಪಿದ್ದರಿಂದ ಅನೇಕ ಮಂದಿ ಉದ್ಯೋಗದಿಂದ ವಂಚಿತರಾಗಿದ್ದಾರೆ. ಇದೀಗ ಮೋದಿ ನೀಡಿರುವ ಟೆಂಡರ್ ಗಾಗಿಯೇ ಅಂಬಾನಿ ಹಾಗೂ ಅದಾನಿ ಹೊಸದಾಗಿ ವಿಮಾನ ಉತ್ಪಾನೆ ಕಂಪನಿ ಆರಂಭಿಸಿದ್ದಾರೆ.
ಒಪ್ಪಂದ ಕುರಿತು ಕಾನೂನು ವ್ಯಾಜ್ಯ ಹೊರತಪಡಿಸಿ ಯಾವುದೇ ಅಂಶ ಬಹಿರಂಗಗೊಳಿಸುವ ಅವಶ್ಯಕತೆಯಿಲ್ಲ ಎಂದು ಷರತ್ತು ಕೂಡ ವಿಧಿಸಿಕೊಂಡಿದ್ದಾರೆ. ಈ ಮೂಲಕ ಮೋದಿ ಹಾಗೂ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಭ್ರಷ್ಟಾಚಾರ ಮುಚ್ಚಿಹಾಕಲು ಯತ್ನ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.