ಜೆಡಿಎಸ್ ಗೆದ್ದರೇ ನನ್ನ ರುಂಡ ಕತ್ತರಿಸಿ ಇಡುತ್ತೇನೆ: ದೇವೇಗೌಡರಿಗೆ ಜಮೀರ್ ಸವಾಲ್
ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಠೇವಣಿ ಕೂಡ ಸಿಗುವುದಿಲ್ಲ, ಒಂದು ವೇಳೆ ಜೆಡಿಎಸ್ ಗೆದ್ದರೇ, ನನ್ನ ತಲೆ ಕತ್ತರಿಸಿ ಇಡುತ್ತೇನೆ ...

Published On :
ಬೆಂಗಳೂರು: ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಠೇವಣಿ ಕೂಡ ಸಿಗುವುದಿಲ್ಲ, ಒಂದು ವೇಳೆ ಜೆಡಿಎಸ್ ಗೆದ್ದರೇ, ನನ್ನ ತಲೆ ಕತ್ತರಿಸಿ ಇಡುತ್ತೇನೆ ಎಂದು ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ನಾನು ಯಾವತ್ತೂ ದೇವೇಗೌಡರನ್ನು ಬೈದಿಲ್ಲ. ಅವರ ಮೇಲೆ ನನಗೆ ವಿಶೇಷ ಗೌರವವಿದೆ, ನಾನು ಕೀಳು ಮಟ್ಟದ ರಾಜಕಾರಣ ಮಾಡಿಲ್ಲ, ಜನ ನನ್ನ ಮುಖ ನೋಡಿ ವೋಟು ಹಾಕಿದ್ದಾರೆ ಎಂದು ಜಮೀರ್ ತಿಳಿಸಿದ್ದಾರೆ.
ಕ್ಷೇತ್ರದ ಜನ ನನ್ನ ಇಷ್ಟಪಡ್ತಾರೆ, ದೇವೇಗೌಡರನ್ನಲ್ಲ. ಚಾಮರಾಜಪೇಟೆಯಲ್ಲಿ ಜನ ನನ್ನ ಮನೆಮಗ ಎಂದು ಭಾವಿಸಿದ್ದಾರೆ ಎಂದು ಹೇಳಿದರು. ಚುನಾವಣೆ ವೇಳೆ ಮನೆ, ಮನೆಗೆ ಹೋಗಿ ಜೆಡಿಎಸ್ ಗೆ ಮತ ಕೊಡಿ ಎಂದು ಕೇಳಿಕೊಂಡಿದ್ದೆ, ಚಾಮರಾಜ ಪೇಟೆ ಜನರು ದೇವೇಗೌಡರನ್ನು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ.
ಈ ದೇಶದ ಸ್ಥಿತಿ ನೋಡಿದರೆ ಭಯವಾಗುತ್ತದೆ ನನಗೆ. ಈ ದೇಶದಲ್ಲಿ ಮತ್ತೊಮ್ಮೆ ಸಮಾನವಾಗಿ ಬಾಳುವಂತೆ ಮಾಡಿ. ಅದಕ್ಕಾಗಿ ಜೆಡಿಎಸ್ ಪಕ್ಷವನ್ನು ಉಳಿಸಬೇಕಾಗಿದೆ. ಈ ಬಗ್ಗೆ ಹಿಂದೂ, ಮುಸ್ಲಿಂ ಅಣ್ಣ ತಮ್ಮಂದಿರು ಅರ್ಥ ಮಾಡಿಕೊಳ್ಳಬೇಕು ಎಂದು ದೇವೇಗೌಡರು ಹೇಳಿದ್ದರು. ಗೌಡರ ಹೇಳಿಕೆಗೆ ಜಮೀರ್ ಪ್ರತಿಕ್ರಿಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
JDSದೇವೇಗೌಡPoliticsರಾಜಕೀಯZameer ahmed khanಜಮೀರ್ ಅಹ್ಮದ್ ಖಾನ್winಜೆಡಿಎಸ್ಚಾಮರಾಜಪೇಟೆಗೆಲುವುDevegowdaChamarajpet
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


