ಸಂಪುಟ ವಿಸ್ತರಣೆ: ಗೀತಾ ಮಹಾದೇವ ಪ್ರಸಾದ್, ಹೆಚ್ಎಂ ರೇವಣ್ಣ, ತಿಮ್ಮಾಪುರಗೆ ಸ್ಥಾನ
ಅಂತೂ ಇಂತೂ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ಥ ಫಿಕ್ಸ್ ಆಗಿದೆ. ನಾಳೆ ಸಂಜೆ 5 ಗಂಟೆಗೆ ರಾಜ ಭವನದಲ್ಲಿ ನೂತನ ಸಚಿವರ ...

Published On :
ಬೆಂಗಳೂರು: ಅಂತೂ ಇಂತೂ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ಥ ಫಿಕ್ಸ್ ಆಗಿದೆ. ನಾಳೆ ಸಂಜೆ 5 ಗಂಟೆಗೆ ರಾಜ ಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ವಿಧಾನ ಪರಿಷತ್ ಸದಸ್ಯ ಎಚ್. ಎಂ ರೇವಣ್ಣ, ಆರ್. ಬಿ ತಿಮ್ಮಾಪುರ, ಮತ್ತು ಗೀತಾ ಮಹಾದೇವ ಪ್ರಸಾದ್ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸಂಪುಟ ವಿಸ್ತರಣೆಗೆ ಹಲವರ ಹೆಸರು ಕೇಳಿ ಬಂದಿದ್ದವು. ಕೊನೆ ಕ್ಷಣದಲ್ಲಿ ಮಾಜಿ ಸಚಿವ ದಿವಂಗತ ಮಹಾದೇವ ಪ್ರಸಾದ್ ಅವರ ಪತ್ನಿ ಗೀತಾ ಅವರಿಗೆ ಅವಕಾಶ ನೀಡಲಾಗಿದೆ.
ರಾಜ್ಯಪಾಲರಾದ ವಜುಭಾಯಿ ವಾಲಾನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಮಹದೇವಪ್ಪ ನಿಧನದಿಂದ ಒಂದು ಸ್ಥಾನ ತೆರವಾಗಿದ್ದರೆ, ಎಚ್.ವೈ.ಮೇಟಿ ಮತ್ತು ಡಾ.ಜಿ.ಪರಮೇಶ್ವರ ಅವರ ರಾಜೀನಾಮೆಯಿಂದ ಎರಡು ಸ್ಥಾನಗಳು ತೆರವಾಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Karnatakaಕರ್ನಾಟಕcabinet expansionಸಂಪುಟ ವಿಸ್ತರಣೆHM RevannaGeeta Mahadev PrasadR.B Timmappuraಹೆಚ್ಎಂ ರೇವಣ್ಣಗೀತಾ ಮಹಾದೇವ ಪ್ರಸಾದ್ ಆರ್ .ಬಿ ತಿಮ್ಮಾಪುರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


