ಮತ್ತೆ ಪ್ರಧಾನಿ ಕೆಣಕಿದ ನಟಿ ರಮ್ಯಾ: ಮಾಜಿ ಸಂಸದೆ ವಿರುದ್ಧ ಟ್ವೀಟ್ ವಾರ್
ಕಾಂಗ್ರೆಸ್ ನಾಯಕಿ ಹಾಗೂ ನಟಿ ರಮ್ಯಾ ಅವರು ಹೊಸ ಆಫರ್ ನೀಡಿದ್ದಾರೆ. ಆದರೆ ಆ ಆಫರ್ ಗೂ ಮುನ್ನ ನೀವು ಅವರು ನೀಡಿರುವ...

Published On :
ಬೆಂಗಳೂರು: ಕಾಂಗ್ರೆಸ್ ನಾಯಕಿ ಹಾಗೂ ನಟಿ ರಮ್ಯಾ ಅವರು ಹೊಸ ಆಫರ್ ನೀಡಿದ್ದಾರೆ. ಆದರೆ ಆ ಆಫರ್ ಗೂ ಮುನ್ನ ನೀವು ಅವರು ನೀಡಿರುವ ಸವಾಲಿಗೆ ಉತ್ತರ ಕೊಡಬೇಕು.
ದೇಶದಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಆಡಳಿತಾರೂಢ ನಾಯಕರು ಯಾರು ಸಂತ್ರಸ್ತರ ನೆರವಿಗೆ ಬರುತ್ತಿಲ್ಲ. ಅದರಲ್ಲೂ ಪ್ರಧಾನಿ ಮೋದಿಯವರು ಜಲಪ್ರಳಯ ಪ್ರದೇಶಗಳಲ್ಲಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅಕಸ್ಮಾತ್ ನಿಮಗೆ ಯಾರಿಗಾದರು ಪ್ರಧಾನಿ ಮೋದಿ ಸಂತ್ರಸ್ತರ ಜೊತೆ ಇರುವ ಫೋಟೋ ದೊರೆತರೆ ದಯವಿಟ್ಟು ಇಲ್ಲಿ ನನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿ, ಆದರೆ ಅದು ಫೋಟೋ ಶಾಪ್ ಆಗಿರಬಾರದು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಒಂದು ವೇಳೆ ನೀವು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ, ಗುಜರಾತ್ ಅಥವಾ ಬಿಹಾರ ನೆರೆ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ ಫೋಟೋವನ್ನು (ಫೋಟೋಶಾಪ್ ಅಲ್ಲ) ಹುಡುಕಿ ಕೊಟ್ಟರೆ 25 ಸಾವಿರ ರೂಪಾಯಿ ನಗದು ನೀಡುವುದಾಗಿ ಸವಾಲು ಹಾಕಿದ್ದಾರೆ.
ರಮ್ಯಾ ಅವರ ಈ ಫೇಸ್ ಬುಕ್ ಫೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದ್ದು ಟ್ವೀಟ್ ವಾರ್ ಆರಂಭವಾಗಿದೆ.
Ok guys, I'll give you 25,000 rupees if you find me a picture of Modi with flood affected victims in Assam, Gujarat or Bihar. No photoshop
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


