ರಾಜಕೀಯ

ಕಾವೇರಿ ವಿವಾದ: ದೇವೇಗೌಡರ ಭೇಟಿಗೆ ಸಿದ್ದರಾಮಯ್ಯರನ್ನು ಕಳಿಸಿದ ಮಾಸ್ಟರ್ ಮೈಂಡ್ ಯಾರು ಗೊತ್ತೆ?

ಕಾವೇರಿ ವಿವಾದ ಕಳೆದ 10 ವರ್ಷಗಳಿಂದ ದೂರವಾಗಿದ್ದ ಗುರು ಶಿಷ್ಯರನ್ನು ಮತ್ತೆ ಹತ್ತಿರ ತಂದಿದೆ. ಜೆಡಿಎಸ್ ನಿಂದ ಹೊರ ಬಂದ ಮೇಲೆ ಸುಮಾರು ಒಂದು ದಶಕದ..

ಕಾವೇರಿ ವಿವಾದ: ದೇವೇಗೌಡರ ಭೇಟಿಗೆ ಸಿದ್ದರಾಮಯ್ಯರನ್ನು  ಕಳಿಸಿದ ಮಾಸ್ಟರ್ ಮೈಂಡ್ ಯಾರು ಗೊತ್ತೆ?
ದೇವೇಗೌಡ ಮತ್ತು ಸಿಎಂ ಸಿದ್ದರಾಮಯ್ಯ
Published On :

ಬೆಂಗಳೂರು: ಕಾವೇರಿ ವಿವಾದ ಕಳೆದ 10 ವರ್ಷಗಳಿಂದ ದೂರವಾಗಿದ್ದ ಗುರು ಶಿಷ್ಯರನ್ನು ಮತ್ತೆ ಹತ್ತಿರ ತಂದಿದೆ. ಜೆಡಿಎಸ್ ನಿಂದ ಹೊರ ಬಂದ ಮೇಲೆ ಸುಮಾರು ಒಂದು ದಶಕದ ಕಾಲ ಸಿಎಂ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಭೇಟಿ ನೀಡಿರಲಿಲ್ಲ.

ಆದರೇ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಮೊನ್ನೆ ಸಿಎಂ ಸಿದ್ದರಾಮಯ್ಯ ಜೆಡಿಎಸ್ ವರಿಷ್ಠ ಎಚ್ .ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಸಿಎಂ ದೇವೇಗೌಡರ ಮನೆಗೆ ತೆರಳುವಂತೆ ಮಾಡಿದ್ದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಎಂದು ಮೂಲಗಳು ತಿಳಿಸಿವೆ.

ಹಲವು ವರ್ಷಗಳ ನಂತರ ಮಾಜಿ ಪ್ರಧಾನಿ ದೇವೇಗೌಡರನ್ನು ಅವರ ಮನೆಯಲ್ಲೇ ಭೇಟಿ ಮಾಡಿ ಸರ್ವ ಪಕ್ಷ ಸಭೆಗೆ ಅವರನ್ನು ಕರೆದುಕೊಂಡು ಬರುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದರು ಎಂಬುದಾಗಿ ಮೂಲಗಳು ತಿಳಿಸಿವೆ.

ದಶಕಗಳ ಕಾಲದಿಂದ ದೇವೇಗೌಡರ ಕುಟುಂಬದೊಂದಿಗೆ ರಾಜಕೀಯ ದ್ವೇಷ ಸಾಧಿಸುತ್ತಾ ಬಂದಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇದ್ದಕ್ಕಿದ್ದಂತೆ ಈ ಸಲಹೆ ನೀಡಿದ್ದನ್ನು ಕಂಡು ಇಡೀ ಸಚಿವ ಸಂಪುಟವೇ ನಿಬ್ಬೆರಗಾಗಿತ್ತು.

ದೇವೇಗೌಡರ ರಾಜಕೀಯ ಅನುಭವ ದೊಡ್ಡದು. ರಾಜ್ಯದಿಂದ  ಮೊದಲ ಬಾರಿ ಪ್ರಧಾನಿಯಾದವರು ಅವರು. ಹೀಗಾಗಿ ಒಕ್ಕೂಟ ವ್ಯವಸ್ಥೆಯ ಒಳಸುಳಿಗಳು ಅವರಿಗೆ ಚೆನ್ನಾಗಿ ಗೊತ್ತಿರುತ್ತವೆ. ಈ ಸಂದರ್ಭದಲ್ಲಿ ನಾವು ಅರ್ಧ ಶತಮಾನಕ್ಕೂ ಹೆಚ್ಚು ಕಾಲದ ಸುದೀರ್ಘ ಅನುಭವ ಹೊಂದಿದ ದೇವೇಗೌಡರ ಮಾರ್ಗದರ್ಶನವನ್ನು ಪಡೆಯುವುದು ಸೂಕ್ತ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದರು ಎನ್ನಲಾಗಿದೆ.

1996 ರಿಂದ ಸರ್ವ ಪಕ್ಷ ಸಭೆಗೆ ದೇವೇಗೌಡರು ಒಂದು ಬಾರಿಯೂ ಹಾಜರಾಗಿರಲಿಲ್ಲ. 20 ವರ್ಷಗಳ ನಂತರ ಸರ್ವ ಪಕ್ಷ ಸಭೆಯಲ್ಲಿ ದೇವೇಗೌಡರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.