ರಾಜಕೀಯ

ಡಿಸೆಂಬರ್ ನಂತರ ಜನತೆಗೆ ಬಿಸ್ಲೆರಿ ಭಾಗ್ಯ: ಮಾಜಿ ಸಿಎಂ ಹೆಚ್ಡಿಕೆ ವ್ಯಂಗ್ಯ

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದರೆ ಡಿಸೆಂಬರ್ ವೇಳೆಗೆ ನೀರು ಬರಿದಾಗಬಹುದು ಆ ನಂತರ ರಾಜ್ಯದ ಜನತೆಗೆ ಬಿಸ್ಲೆರಿ ಭಾಗ್ಯವನ್ನು ರಾಜ್ಯ ಸರ್ಕಾರ...

ಡಿಸೆಂಬರ್ ನಂತರ ಜನತೆಗೆ ಬಿಸ್ಲೆರಿ ಭಾಗ್ಯ: ಮಾಜಿ ಸಿಎಂ ಹೆಚ್ಡಿಕೆ ವ್ಯಂಗ್ಯ
ಹೆಚ್ ಡಿ ಕುಮಾರಸ್ವಾಮಿ
Published On :
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದ್ದರೆ ಡಿಸೆಂಬರ್ ವೇಳೆಗೆ ನೀರು ಬರಿದಾಗಬಹುದು ಆ ನಂತರ ರಾಜ್ಯದ ಜನತೆಗೆ ಬಿಸ್ಲೆರಿ ಭಾಗ್ಯವನ್ನು ರಾಜ್ಯ ಸರ್ಕಾರ ಕೊಡಬೇಕಾಗುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. 
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿಗಳು ರೈತರಿಗೆ ಸದ್ಯ 28 ಟಿಎಂಸಿ ನೀರು ಮಾತ್ರ ತಮಿಳುನಾಡಿಗೆ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಅಧಿಕಾರಿಗಳು ಈಗಾಗಲೇ 42 ಟಿಎಂಸಿ ನೀರು ಬಿಡಲಾಗಿದೆ ಎಂದು ಮಾಹಿತಿ ನೀಡುತ್ತಿದ್ದಾರೆ ಇದರಲ್ಲಿ ಯಾವುದು ನಿಜ ಎಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದ್ದಾರೆ. 
ಬೆಂಗಳೂರಿನ ಜನಕ್ಕೆ ಕುಡಿಯಲು ನೀರಿಲ್ಲ. ಡಿಸೆಂಬರ್ ನಂತರ ರಾಜ್ಯ ಸರ್ಕಾರವೇ ಬಿಸ್ಲೆರಿ ಭಾಗ್ಯ ಕೊಡಲಿ. ಭಾಗ್ಯಗಳ ಸರ್ಕಾರ ಎಂದು ಕರೆಸಿಕೊಳ್ಳುತ್ತಿರುವ ಸರ್ಕಾರಕ್ಕೆ ಇರುವ ನೀರನ್ನು ತಮಿಳುನಾಡಿಗೆ ಬಿಟ್ಟ ಮೇಲೆ ಬಿಸ್ಲೆರಿ ಭಾಗ್ಯ ನೀಡುವುದೊಂದೆ ಸದ್ಯದ ದಾರಿ ಎಂದು ಸರ್ಕಾರದ ಕಾರ್ಯವೈಖರಿ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.