ರಾಜಕೀಯ

ನೈಸ್ ಅಕ್ರಮ: ಸದನದಲ್ಲಿ ವರದಿ ಮಂಡಿಸಲು ವಿಪಕ್ಷಗಳ ಪಟ್ಟು

ಬೆಂಗಳೂರು-ಮೈಸೂರು ನಂಜಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಸಂಸ್ಥೆಯ ಹಗರಣ ಸಂಬಂಧ ಸದನ ಸಮಿತಿ ವರದಿ ಮಂಡಿಸುವಂತೆ ವಿಪಕ್ಷಗಳಾದ ಜೆಡಿಎಸ್ ಮತ್ತು ...

ನೈಸ್ ಅಕ್ರಮ: ಸದನದಲ್ಲಿ ವರದಿ ಮಂಡಿಸಲು ವಿಪಕ್ಷಗಳ ಪಟ್ಟು
ಆರ್ . ಅಶೋಕ್
Published On :

ಬೆಳಗಾವಿ: ಬೆಂಗಳೂರು-ಮೈಸೂರು ನಂಜಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಸಂಸ್ಥೆಯ ಹಗರಣ ಸಂಬಂಧ ಸದನ ಸಮಿತಿ ವರದಿ ಮಂಡಿಸುವಂತೆ ವಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಸದನದಲ್ಲಿ ಆಗ್ರಹಿಸಿವೆ.

ನಗ್ರೋಟಾದಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ನೈಸ್ ಅಕ್ರಮಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ತಯಾರಿಸಿರುವ ವರದಿಯನ್ನು ಅಧಿವೇಶನದಲ್ಲಿ ಮಂಡಿಸಬೇಕೆಂದು ಸ್ಪೀಕರ್ ಬಿ.ಕೋಳಿವಾಡ ಅವರಿಗೆ ಒತ್ತಾಯಿಸಲಾಯಿತು.

ಒಂದು ವಾರದ ಹಿಂದೆಯೇ ವರದಿ ಪೂರ್ಣಗೊಂಡಿದೆ. ವರದಿಯನ್ನು ಸರ್ಕಾರ ತನ್ನ ಬಳಿಯೇ ಇಟ್ಟುಕೊಂಡಿದೆ. ಏಕೆ ಸಾರ್ವಜನಿಕವಾಗಿ ವರದಿಯನ್ನು ಬಹಿರಂಗ ಪಡಿಸಿಲ್ಲ ಎಂದು ಬಿಜೆಪಿಯ ಆರ್. ಅಶೋಕ್ ಪ್ರಶ್ನಿಸಿದರು. ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರು ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷಗಳಿಂದ ಅವರಿಗೆ ಭೂಮಿಯೂ ಇಲ್ಲ; ಪರಿಹಾರವೂ ಸಿಕ್ಕಿಲ್ಲ. ಈ ಯೋಜನೆ ಸಂತ್ರಸ್ತರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಗುಣಾತ್ಮಕವಾದ ಕೆಲಸ ಆಗಬೇಕು ಎಂದರು. ಸಂಪುಟದ ಪವರ್ ಫುಲ್ ಸಚಿವರೊಬ್ಬರು, ಸರ್ಕಾರ ಸದನ ಸಮಿತಿಯ ವರದಿ ಮಂಡನೆಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ವರದಿ ಮಂಡಿಸದಂತೆ ಸುಪ್ರೀಂ ಕೋರ್ಟ್ ನಿಂದ ತಡೆಯಾಜ್ಞೆ ತರಲು ನೈಸ್ ಕಂಪೆನಿ ಯತ್ನಿಸುತ್ತಿದೆ. ಅದಕ್ಕೆ ಅವಕಾಶ ನೀಡಬಾರದು’ ಎಂದೂ ಅವರು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸ್ಪೀಕರ್ ಕೆ.ಬಿ ಕೋಳಿವಾಡ, ಗುರುವಾರ ಸಂಜೆ ಒಳಗೆ ಸದನದಲ್ಲಿ ಮಂಡಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸೈಬರ್ ಕ್ರೈಮ್ ನಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಆತಂಕ ವ್ಯಕ್ತ ಪಡಿಸಿದ ಅವರು, ರಾಜ್ಯ ಪೊಲೀಸರ ಆತ್ಮಸ್ಥೈರ್ಯ ಕುಂದಿಸಲಾಗುತ್ತಿದೆ. ಗೃಹ ಇಲಾಖೆಯ ಮೇಲೆ ಇತರ ಇಲಾಖೆ ಸಚಿವರು ಮೂಗು ತೂರಿಸುತ್ತಿದ್ದಾರೆ ಎಂದು ಯಾರೊಬ್ಬರ ಹೆಸರನ್ನು ಹೇಳದೆ ಅಶೋಕ್ ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.