ಅತೃಪ್ತರಿಗೆ ಕೊನೆಗೂ ಕೃಷ್ಣ ದರ್ಶನ: ಉಲ್ಟಾ ಹೊಡೆದ ಖಮರುಲ್ ಇಸ್ಲಾಂ
ಅತೃಪ್ತ ಶಾಸಕರಿಗೆ ಕೊನೆಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ದರ್ಶನವಾಗಿದೆ. ಸಂಪುಟ ಪುನಾರಚನೆಯಿಂದಾಗಿ ಸಾಕಷ್ಟು ಅಸಮಾಧಾನಗೊಂದಿದ್ದ ಭಿನ್ನ ಶಾಸಕರು ಹಲವು ದಿನಗಳಿಂದಲೂ ಕೃಷ್ಣ ಅವರನ್ನು ಭೇಟಿ ಮಾಡಲು...

ಬೆಂಗಳೂರು: ಅತೃಪ್ತ ಶಾಸಕರಿಗೆ ಕೊನೆಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ದರ್ಶನವಾಗಿದೆ. ಸಂಪುಟ ಪುನಾರಚನೆಯಿಂದಾಗಿ ಸಾಕಷ್ಟು ಅಸಮಾಧಾನಗೊಂದಿದ್ದ ಭಿನ್ನ ಶಾಸಕರು ಹಲವು ದಿನಗಳಿಂದಲೂ ಕೃಷ್ಣ ಅವರನ್ನು ಭೇಟಿ ಮಾಡಲು ನಿರೀಕ್ಷಿಸುತ್ತಿದ್ದರು. ಇದರಂತೆ ಮಂಗಳವಾರ ಕೃಷ್ಣ ಅವರನ್ನು ಭೇಟಿ ಮಾಡಿ ಭಿನ್ನ ಶಾಸಕರು ಮಾತುಕತೆ ನಡೆಸಿದ್ದಾರೆ.
ಮಾತುಕತೆ ವೇಳೆ ಖಮರುಲ್ ಇಸ್ಲಾಂ ಹಾಗೂ ಶಾಸಕ ಎ.ಬಿ. ಮಾಲಕ ರೆಡ್ಡಿಯವರು ಕೃಷ್ಣ ಅವರಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆಗುತ್ತಿರುವ ಬೆಳವಣಿಗೆ ಕುರಿತಂತೆ ವಿವರಣೆ ನೀಡಿದ್ದಾರೆ. ಅಲ್ಲದೆ, ವಿಚಾರವನ್ನು ಪಕ್ಷದ ಹೈ ಕಮಾಂಡ್ ಗಮನಕ್ಕೆ ತರುವಂತೆ ಆಗ್ರಹಿಸಿದ್ದಾರೆ.
ಮಾತುಕತೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಖಮರುಲ್ ಇಸ್ಲಾಂ ಅವರು, ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಮಾತುಕತೆ ವೇಳೆ ಪಕ್ಷದ ವರ್ಚಸ್ಸು ಹಾಗೂ ಆಶಯಗಳಿಗೆ ತೊಂದರೆಯಾಗದಂತೆ ಸಂಯಮ ಕಾಪಾಡುವಂತೆ ಕೃಷ್ಣ ಅವರು ಸಲಹೆ ನೀಡಿದ್ದಾರೆ. ಅಲ್ಲದೆ, ಸಮಸ್ಯೆಯನ್ನು ರಂಜಾನ್ ಬಳಿಕ ಹೈ ಕಮಾಂಡ್ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆಂದು ಹೇಳಿದ್ದಾರೆ.
ಶ್ರೀನಿವಾಸ ಪ್ರಸಾದ್ ಹಾಗೂ ಅಂಬರೀಷ್ ಅವರು ನಾಯಕತ್ವ ಬದಲಾವಣೆಯಾಗಬೇಕೆಂದು ಆಗ್ರಹಿಸಿದ್ದರು. ನಾಯಕತ್ವ ಬದಲಾವಣೆ ಆಗ್ರಹ ಶ್ರೀನಿವಾಸ ಪ್ರಸಾದ್ ಅವರದ್ದಾಗಿತ್ತೇ ವಿನಃ ನಾನು ಎಂದಿಗೂ ನಾಯಕತ್ವ ಬದಲಾಗಬೇಕೆಂದು ಆಗ್ರಹಿಸಿರಲಿಲ್ಲ. ಇಂದು ನಡೆದ ಮಾತುಕತೆ ವೇಳೆ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಚರ್ಚೆಯಾಗಿಲ್ಲ. ನನ್ನ ಹೋರಾಟವೇನಿದ್ದರೂ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿನ ಅಲ್ಪಸಂಖ್ಯಾತ ಸಮುದಾಯದ ನ್ಯಾಯಕ್ಕಾಗಿ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


