ರಾಜಕೀಯ

ರಾಜೀನಾಮೆ ಕೊಡು ಅಂತಾ ಹೇಳೋದಕ್ಕೆ ಅನುಪಮಾ ಶೆಣೈ ಯಾರು? ಪರಮೇಶ್ವರ್ ನಾಯ್ಕ್

ತಮ್ಮ ರಾಜೀನಾಮೆ ಕೇಳಲು ಅನುಪಮಾ ಶೆಣೈ ಯಾರು ಎಂದು ಕಾರ್ಮಿಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ ಪರಮೇಶ್ವರ ನಾಯ್ಕ ..

ರಾಜೀನಾಮೆ ಕೊಡು ಅಂತಾ ಹೇಳೋದಕ್ಕೆ ಅನುಪಮಾ ಶೆಣೈ ಯಾರು? ಪರಮೇಶ್ವರ್ ನಾಯ್ಕ್
ಪರಮೇಶ್ವರ್ ನಾಯ್ಕ್
Published On :

ಚಿಕ್ಕಮಗಳೂರು: ತಮ್ಮ ರಾಜೀನಾಮೆ ಕೇಳಲು ಅನುಪಮಾ ಶೆಣೈ ಯಾರು ಎಂದು ಕಾರ್ಮಿಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ ಪರಮೇಶ್ವರ ನಾಯ್ಕ ಪ್ರಶ್ನಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಡಿವೈಎಸ್‌ಪಿ ಅನುಪಮಾ ಶೆಣೈ ರಾಜೀನಾಮೆಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದರು. ಒಂದು ವೇಳೆ ತಮ್ಮಿಂದ ತಪ್ಪಾಗಿದ್ದರೆ ಅದನ್ನು ವಿಚಾರಿಸಲು ಮುಖ್ಯಮಂತ್ರಿಗಳು, ಪಕ್ಷದ ಹೈಕಮಾಂಡ್‌ ಇದೆ. ನನ್ನ ರಾಜೀನಾಮೆ ಕೇಳಲು ಆಕೆ ಯಾರು ಎಂದು ಪ್ರಶ್ನಿಸಿದ್ದಾರೆ.

ಮೇ ತಿಂಗಳಲ್ಲಿ ಅನುಪಮಾ ಶೆಣೈ ವರ್ಗಾವಣೆ ಘಟನೆ ನಡೆದ ಅನಂತರ ಅವರೊಂದಿಗೆ ತಾವು ದೂರವಾಣಿಯಲ್ಲಿ ಮಾತನಾಡಿಯೇ ಇಲ್ಲ. ಈ ರೀತಿ ಅಪಪ್ರಚಾರ ಏಕೆ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಅನುಪಮಾ ಶೆಣೈ ಅವರ ಫೇಸ್‌ ಬುಕ್‌ ಅಸಲಿಯೋ ನಕಲಿಯೋ ಮೊದಲು ತನಿಖೆಯಾಗಬೇಕೆಂದು ಆಗ್ರಹಿಸಿದ ಅವರು, ಫೇಸ್‌ಬುಕ್‌ ಮೂಲಕ ಯಾರೋ ಷಡ್ಯಂತ್ರ ಮಾಡುತ್ತಿರಬಹುದು. ತಮ್ಮ ರಾಜೀನಾಮೆ ವಿಚಾರ ಇಲ್ಲಿ ಅಪ್ರಸ್ತುತ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.