ವಾಚ್ ಆಯ್ತು ಈಗ ಸಿಎಂ ಶೂ ಸರದಿ; ಶೂ ಬೆಲೆ ರು.1.60 ಲಕ್ಷ ಅಂತೆ..!
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಅವರ ಶೂ ಕೂಡ ಇದೀಗ ಚರ್ಚೆಗೀಡಾಗುತ್ತಿದೆ...

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಅವರ ಶೂ ಕೂಡ ಇದೀಗ ಚರ್ಚೆಗೀಡಾಗುತ್ತಿದೆ.
ಖಾಸಗಿ ಪತ್ರಿಕೆಯೊಂದು ವರದಿ ಮಾಡಿರುವಂತೆ ಸಿದ್ದರಾಮಯ್ಯ ಅವರು ಧರಿಸುವ ಶೂ ಕೂಡ ದುಬಾರಿಯಾಗಿದ್ದು, ಸುಮಾರು 1.60 ಲಕ್ಷ ಬೆಲೆ ಬಾಳುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರ ವಾಚ್ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗುತ್ತಿದ್ದು. ಈ ಹಿಂದೆ ನಡೆದ ಸಭೆಯಲ್ಲಿ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ.
"ಸಮಾಜವಾದಿ ಹಿನ್ನೆಲೆಯವರು ಎ೦ದುಕೊ೦ಡಿದ್ದ ಸಿದ್ದರಾಮಯ್ಯ ಅವರು 1.60 ಲಕ್ಷ ರು. ಮೌಲ್ಯದ ಶೂಗಳು, 1.5 ಲಕ್ಷ ರೂ. ಬೆಲೆಬಾಳುವ ಕೂಲಿ೦ಗ್ ಗ್ಲಾಸ್, ದುಬಾರಿ ಕೈಗಡಿಯಾರ ತೊಡುತ್ತಾರೆ ಎ೦ದು ರಾಹುಲ್ ಅಸಮಾಧಾನ ತೋಡಿಕೊ೦ಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ದುಬಾರಿ ವಾಚ್ ಪ್ರಕರಣದಲ್ಲಿ ದಾಖಲೆಗಳ ಬಹಿರ೦ಗ, ರಾಜ್ಯಪಾಲರ ನಡೆ ಹಾಗೂ ಕಾನೂನು ಹೋರಾಟಗಳ ಸಾಧ್ಯತೆಗಳ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಗಮನ ಹರಿಸಿದ್ದಾರೆ ಎ೦ದು ತಿಳಿದುಬಂದಿದೆ.
ಒಟ್ಟಾರೆ ಕಾಂಗ್ರೆಸ್ ವರಿಷ್ಠರ ಬೆಂಬಲವಿದೆ ಎಂದು ತಿಳಿದಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ವಾಚ್ ಪ್ರಕರಣ ಮತ್ತು ಉಪ ಚುನಾವಣೆಯಲ್ಲಿನ ಸೋಲು ಅವರ ನಂಬಿಕೆಯನ್ನೇ ಬುಡಮೇಲು ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


