ರಾಜಕೀಯ ಮುಳ್ಳಿನ ಹಾಸಿಗೆ, ದೂರ ಉಳಿಯಲು ಯತೀಂದ್ರನಿಗೆ ಸಲಹೆ ನೀಡಿದ್ದೆ:ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರ ಮೊದಲನೇ ಪುತ್ರ ರಾಕೇಶ್ ಅಕಾಲಿಕ ನಿಧನದ ನಂತರ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ಸಿಎಂ ಅವರ ಎರಡನೇ ಪುತ್ರ ಡಾ.ಯತೀಂದ್ರ ..

ಮೈಸೂರು: ಸಿದ್ದರಾಮಯ್ಯ ಅವರ ಮೊದಲನೇ ಪುತ್ರ ರಾಕೇಶ್ ಅಕಾಲಿಕ ನಿಧನದ ನಂತರ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ಸಿಎಂ ಅವರ ಎರಡನೇ ಪುತ್ರ ಡಾ.ಯತೀಂದ್ರ ಹವಣಿಸುತ್ತಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಯತೀಂದ್ರ ಇತ್ತೀಚೆಗೆ ವರುಣಾ ವಿಧಾನ ಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಜನರ ಕುಂದು ಕೊರೆತೆಗಳನ್ನು ಆಲಿಸಿದ್ದರು. ಯತೀಂದ್ರ ರಾಜಕೀಯ ಪ್ರವೇಶದ ಕುರಿತು ಸಿಎಂ ಸಿದ್ದರಾಮಯ್ಯ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ.
ನಾನು ಯತೀಂದ್ರನನ್ನು ರಾಜಕೀಯಕ್ಕೆ ಬರುವಂತೆ ಯಾವುತ್ತೂ ಹೇಳಲಿಲ್ಲ. ರಾಜಕೀಯದಲ್ಲಿ ಎದುರಾಗುವ ಹಲವು ಅಪಾಯಗಳ ಬಗ್ಗೆ ಆತನಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ರಾಜಕೀಯದಲ್ಲಿ ಸಕ್ರಿಯನಾಗಲು ನೀವು ಸಹಾಯ ಮಾಡಬೇಕು ಎಂದು ಕೇಳಿದಾಗ ನನಗೂ ನಿಜಕ್ಕೂ ಆಘಾತವಾಯಿತು. ಯಾವಾದಗಲು ಜನರಿಂದ ದೂರ ಉಳಿಯುವ ಯತೀಂದ್ರ ತೀರಾ ಸಂಕೋಚ ಸ್ವಭಾವದ ವ್ಯಕ್ತಿ. ಆತನದು ವ್ಯವಸ್ಥಿತ ಜೀವನ. ಕ್ಯಾನ್ಸರ್ ಕಾಯಿಲೆ ಸಂಬಂಧ ದಿನಕ್ಕೆ ನಾಲ್ಕೈದು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಾರೆ.
ರಾಜಕೀಯ ಎಂಬುದು ಮುಳ್ಳಿನ ಹಾಸಿಗೆ. ಇಲ್ಲಿಗೆ ಇಳಿಯುವುದಕ್ಕೂ ಮುನ್ನ ಸರಿಯಾಗಿ ಯೋಚಿಸು, ಜನರ ಜೊತೆ ಆಸಕ್ತಿಯಿಂದ ಬೆರೆಯಬೇಕಾಗುತ್ತದೆ. ಒಮ್ಮೆ ರಾಜಕೀಯಕ್ಕೆ ಬಂದು ಜನರ ಜೊತೆ ಒಡನಾಟ ಇಟ್ಟಕೊಂಡು, ಅವರ ಪ್ರೀತಿ ವಿಶ್ವಾಸ, ಗೌರವಗಳನ್ನು ಸಂಪಾದಿಸಿದರೇ ಇದರಿಂದ ಹೊರ ಹೋಗುವುದು ತುಂಬಾ ಕಷ್ಟ ಎಂದು ಯತೀಂದ್ರನಿಗೆ ಸಲಹೆ ನೀಡಿದ್ದೆ.
ಒಬ್ಬ ವೈದ್ಯನಾಗಿ ನೀನು ಒರಟು ರಾಜಕೀಯದಲ್ಲಿ ಇರುವುದು ಕಷ್ಟ ಎಂದು ಹೇಳಿದೆ. ನೀವು ವಕೀಲರಾಗಿ ಮುಂದುವರಿಯದೇ ಯಾಕೆ ರಾಜಕೀಯ ರಂಗಕ್ಕೆ ಬಂದಿರಿ ಎಂದು ಯತೀಂದ್ರ ನನಗೆ ಮರು ಪ್ರಶ್ನೆ ಹಾಕಿದಾಗ ನನ್ನಲ್ಲಿ ಆತನಿಗೆ ನೀಡಲು ಉತ್ತರವಿರಲಿಲ್ಲ ಎಂದು ಸಿದ್ದರಾಮಯ್ಯ ವಿವರಿಸಿದರು.
ಯತೀಂದ್ರ ದೈವ ಭಕ್ತ, ಶುದ್ದ ಸಸ್ಯಹಾರಿ, ಪ್ರತಿ ಸೋಮವಾರ ಉಪವಾಸ ವಿದ್ದು ಪ್ರತಿದಿನ ಪೂಜೆ ಪುನಸ್ಕಾರ ಮಾಡುತ್ತಾರೆ. ಆತನಿಗೆ ಜನತೆಯ ಸಮಸ್ಯೆಗಳನ್ನು ಕೇಳುವ ತಾಳ್ಮೆ ಇದೆ. ಅಂತಿಮವಾಗಿ ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು, ಯತೀಂದ್ರರ ರಾಜಕೀಯ ಭವಿಷ್ಯವನ್ನು ಅವರೇ ನಿರ್ಧರಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


