ರಾಜಕೀಯ

ಸಿಎಂ ಪುತ್ರನ ಸ್ನೇಹಿತನ ಕಂಪನಿಗೆ 150 ಕೋಟಿ ಮೌಲ್ಯದ ಭೂಮಿ: ಸಿಬಿಐ ತನಿಖೆಗೆ ಶೆಟ್ಟರ್ ಆಗ್ರಹ

ಸಿಎಂ ಸಿದ್ದರಾಮಯ್ಯ ರಾಜಕೀಯ ಪ್ರಭಾವ ಬಳಸಿ, ತಮ್ಮ ಪುತ್ರ ಡಾ. ಯತೀಂದ್ರ ಅವರ ಸ್ನೇಹಿತನಿಗೆ 150 ಕೋಟಿ ರೂ. ಮೌಲ್ಯದ ಭೂಮಿ ನೀಡಿದ್ದಾರೆಂದು...

ಸಿಎಂ ಪುತ್ರನ ಸ್ನೇಹಿತನ ಕಂಪನಿಗೆ 150 ಕೋಟಿ ಮೌಲ್ಯದ ಭೂಮಿ: ಸಿಬಿಐ ತನಿಖೆಗೆ ಶೆಟ್ಟರ್ ಆಗ್ರಹ
ಜಗದೀಶ್ ಶೆಟ್ಟರ್
Published On :

ಬೆಂಗಳೂರು: ಸಿಎಂ ಸಿದ್ದರಾಮಯ್ಯ ರಾಜಕೀಯ ಪ್ರಭಾವ ಬಳಸಿ, ತಮ್ಮ ಪುತ್ರ ಡಾ. ಯತೀಂದ್ರ ಅವರ ಸ್ನೇಹಿತನಿಗೆ 150 ಕೋಟಿ ರೂ. ಮೌಲ್ಯದ ಭೂಮಿ ನೀಡಿದ್ದಾರೆಂದು, ಈ ಸಂಬಂಧ ಸಿಬಿಐ ತನಿಖೆ ನಡೆಯಬೇಕೆಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಪಾಲುದಾರರಾಗಿರುವ ಕಂಪನಿಗೆ ಸರ್ಕಾರಿ ಸ್ವಾಮ್ಯದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಲ್ಯಾಬ್‌ ತೆರೆಯಲು ಟೆಂಡರ್‌ ನೀಡಲಾಗಿರುವ ಪ್ರಕರಣಕ್ಕೆ ತಳಕು ಹಾಕಿಕೊಂಡಿರುವ ಡಾ.ರಾಜೇಶ್‌ಗೌಡ ಅವರ ಕಂಪನಿಗೆ ಬಿಡಿಎ ಬದಲಿ ಜಾಗ ಮಂಜೂರು ಮಾಡಿರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಡಾ.ರಾಜೇಶಗೌಡ ಅವರಿಗೆ ಸೇರಿದ ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸೆಸ್‌ಗೆ ಹೆಬ್ಟಾಳ ಮೇಲು ಸೇತುವೆ ಪಕ್ಕದಲ್ಲಿ 150 ಕೋಟಿ ರೂ. ಬೆಲೆ ಬಾಳುವ 2.19 ಎಕರೆ ಜಮೀನು ಮಂಜೂರು  ಮಾಡಲಾಗಿದೆ ಎಂದು ಆರೋಪಿಸಿದರು.

ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಜಮೀನು ಮಂಜೂರು ಪ್ರಕರಣಕ್ಕೆ ಡಾ.ರಾಜೇಶ್‌ ಗೌಡ ಪಾಲುದಾರಿಕೆಯ ಮ್ಯಾಟ್ರಿಕ್ಸ್‌ ಇಮೇಜಿಂಗ್‌ ಸಲೂಷನ್ಸ್‌ ಇಂಡಿಯಾ ಪ್ರೈ.ಲಿ. ಕಂಪನಿಗೆ ಡಾ.ಯತೀಂದ್ರ ಪಾಲುದಾರರಾಗಿ ಸೇರಿದ ತಕ್ಷಣ ಚಾಲನೆ ಸಿಕ್ಕಿದೆ. ಹಾಗಾಗಿ, ಮುಖ್ಯಮಂತ್ರಿಯವರ ಪುತ್ರನ ಮಿತ್ರನಿಗೆ ಸಹಾಯ ಮಾಡುವ ಏಕೈಕ ಉದ್ದೇಶದಿಂದ ಜಮೀನು ಮಂಜೂರು ಮಾಡಿರುವುದು ಇಲ್ಲಿ ಸ್ಪಷ್ಟವಾಗಿದೆ ಎಂದರು.

-ಮೆ.ಶಾಂತಾ ಇಂಡಸ್ಟ್ರಿಯಲ್‌ ಎಂಟರ್‌ಪ್ರೈಸೆಸ್‌ಗೆ ಸೇರಿದ್ದ ಮಹಾಲಕ್ಷ್ಮೀ ಲೇಔಟ್‌ನ ಕೇತಮಾರನಹಳ್ಳಿ ಗ್ರಾಮದ ಸರ್ವೆ ನಂಬರ್‌ 174 ಮತ್ತು 175 ಹಾಗೂ ಯಶವಂತಪುರ ಗ್ರಾಮದ ಸರ್ವೆ ನಂಬರ್‌ 59ರ 2.32 ಲಕ್ಷ ಚದರ ಅಡಿ ಜಾಗವನ್ನು ಬಡಾವಣೆ ನಿರ್ಮಿಸಲು 1977ರಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಆದರೆ, ಈ ಜಮೀನು ಹರಾಜಿನಲ್ಲಿ ಖರೀದಿ ಮಾಡಿರುವುದರಿಂದ ಸ್ವಾಧೀನಪಡಿಸಿಕೊಳ್ಳಲು ಬರುವುದಿಲ್ಲ ಎಂದು ವಾದಿಸಿದ್ದ ಸಂಸ್ಥೆಯು ಕೋರ್ಟ್‌ ಮೆಟ್ಟಿಲೇರಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.