ಅಡ್ಡ ಮತದಾನದ ಮೇಲೆ ಪಕ್ಷಗಳ ಕಣ್ಣು
ರಾಜ್ಯ ಸರ್ಕಾರದ ಭವಿಷ್ಯವೆಂದೇ ಬಣ್ಣಿಸಲಾಗಿರುವ ಬಿಬಿಎಂಪಿ ಮೇಯರ್ ಚುನಾವಣೆ ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಂತಿದೆ. ಕಾಂಗ್ರೆಸ್- ಬಿಜೆಪಿ ನಡುವಿನ ಪ್ರತಿಷ್ಠೆ...

ಬೆಂಗಳೂರು: ರಾಜ್ಯ ಸರ್ಕಾರದ ಭವಿಷ್ಯವೆಂದೇ ಬಣ್ಣಿಸಲಾಗಿರುವ ಬಿಬಿಎಂಪಿ ಮೇಯರ್ ಚುನಾವಣೆ ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಂತಿದೆ. ಕಾಂಗ್ರೆಸ್- ಬಿಜೆಪಿ ನಡುವಿನ ಪ್ರತಿಷ್ಠೆ
ಪ್ರಶ್ನೆಯಾಗಿರುವ ಮೇಯರ್ ಚುನಾವಣೆ ಈಗ ಕುತೂಹಲಕಾರಿ ಘಟ್ಟ ತಲುಪಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಮಂಜುನಾಥ ರೆಡ್ಡಿ ಮೇಯರ್ ಹಾಗೂ ಜೆಡಿಎಸ್‍ನ ಹೇಮಲತಾ ಉಪ ಮೇಯರ್ ಆಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಆದರೆ ಬಿಜೆಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವುದರಿಂದ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ ನಡುವಿನ ಹೋರಾಟಕ್ಕೆ ಶುಕ್ರವಾರ ಬೆಳಗ್ಗೆ 11.30ಕ್ಕೆ ಮೂಹೂರ್ತ ನಿಗದಿಯಾಗಿದೆ.
ಈ ಹೋರಾಟದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಜತೆ ಪ್ರತಿಪಕ್ಷಗಳಲ್ಲೊಂದಾಗಿದ್ದ ಜೆಡಿಎಸ್ ಕೈ ಜೋಡಿಸಿದ್ದರೂ ಬಿಜೆಪಿ ಮಾತ್ರ ಪ್ರಬಲ ಪೈಪೋಟಿ ನೀಡುವ ಮೂಲಕ ಹೋರಾಟ ಕದನ ಕುತೂಹಲ ಕೆರಳುವಂತೆ ಮಾಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಸದಸ್ಯರನ್ನು ಹಾಗೂ ಪಕ್ಷೇತರ 7 ಸದಸ್ಯರನ್ನು ರೆಸಾರ್ಟ್‍ಗಳಿಗೆ ಕರೆದು ಕೊಂಡು ಹೋಗಿ ಅಧಿಕಾರ ಹಿಡಿಯಲು ಬೇಕಾದ ಸದಸ್ಯ ಬಲ ಕಾಯ್ದುಕೊಂಡಿದೆ. ಅಷ್ಟೇ ಅಲ್ಲ. ಚುನಾವಣೆಯ ಕೊನೆ ಕ್ಷಣದವರೆಗೂ ಸಂಖ್ಯಾಬಲ ಕಾಪಾಡಿಕೊಳ್ಳಲು ಅಗತ್ಯವಾದ ಎಲ್ಲ ಕರಸತ್ತು, ತಂತ್ರ ವಿಧಾನ ಗಳನ್ನು ಹೆಣೆದಿದೆ.
ಇನ್ನೂ ಎರಡು ಹೆಜ್ಜೆ ಮುಂದೆ ಹೋಗಿ, ಮೇಯರ್ ಉಪ ಮೇಯರ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅಧಿಕಾರ ಹಿಡಿಯಲು ನೆರವಾದ 7 ಮಂದಿ ಪಕ್ಷೇತರರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ನಿರ್ಣಯವನ್ನೂ ಆಂತರಿಕವಾಗಿ ಕೈಗೊಂಡಿದೆ. ಅಡ್ಡ ಮತದಾನದ ಅಡ್ಡ ಪರಿಣಾಮ ಮೇಯರ್ ಚುನಾವಣೆಯಲ್ಲಿ ಯಾವುದೇ ರೀತಿಯ ಕೊನೆ ಕ್ಷಣದ ರಾಜಕೀಯ ಪವಾಡನಡೆದರೆ ಆಶ್ಚರ್ಯವಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


