ರಾಜಕೀಯ

ಕುಸಿಯುತ್ತಿದೆ ಮೋದಿ ಜನಪ್ರಿಯತೆ

ದೇಶದಲ್ಲಿ ಪ್ರಧಾನಿ ಮೋದಿ ಅವರ ಜನಪ್ರಿಯತೆ ಕಡಿಮೆಯಾಗುತ್ತಿ ದ್ದು, ಇದನ್ನು ಮೋದಿ ಅವರಿಗೆ ಮನವರಿಕೆ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ...

ಕುಸಿಯುತ್ತಿದೆ ಮೋದಿ ಜನಪ್ರಿಯತೆ
ದೇವೇಗೌಡ
Published On :
ಬೆಂಗಳೂರು: ದೇಶದಲ್ಲಿ ಪ್ರಧಾನಿ ಮೋದಿ ಅವರ ಜನಪ್ರಿಯತೆ ಕಡಿಮೆಯಾಗುತ್ತಿ ದ್ದು, ಇದನ್ನು ಮೋದಿ ಅವರಿಗೆ ಮನವರಿಕೆ ಮಾಡಿದ್ದೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಮೋದಿ ಅವರನ್ನು ಮೂರನೇ ಬಾರಿ ಭೇಟಿಯಾದಾಗ ಅವರಿಗೆ ಅನೇಕ ವಿಚಾರಗಳನ್ನು ನೇರವಾಗಿಯೇ ಹೇಳಿ ದ್ದೇನೆ. ನಿಮ್ಮ ಸಚಿವರು ಏನೂ ಮಾಡುತ್ತಿದ್ದಾರೆ ಗೊತ್ತಿ ದೆಯೇ? ಎಂದು ಪ್ರಶ್ನಿಸಿ ಸಚಿವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದೇನೆ. ಅಷ್ಟಾದರೂ ಮೋದಿ ಮಾತ್ರ ಮೌನಂ  ಕಲಂ ನಾಸ್ತಿ ಎನ್ನುವಂತೆ ಇರುತ್ತಾರೆ. ಅಂಥವರೊಂದಿಗೆ ಏನು ಮಾತನಾಡುವುದು. ಯಾವ ರೀತಿಯ ಹೋರಾಟ ನಡೆಸುವುದು ಎಂದು ದೇವೇಗೌಡರು ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ಬೇಸರ ವ್ಯಕ್ತಪಡಿಸಿದರು.
ಬಿಹಾರ ದಲ್ಲಿ ಪಕ್ಷಗಳು ಸ್ವಹಿತಾಸಕ್ತಿಗಾಗಿ ಇಟ್ಟುಕೊಂಡು ಓಡಾಡುತ್ತಿ ದ್ದಾರೆ. ಆದ್ದರಿಂದ ಜಾತ್ಯತೀತ ಶಕ್ತಿಗಳು ಒಂದಾಗುವು ದು ಅಸಾಧ್ಯ. ಇದು ನನ್ನ ಅನುಭವದ ಮಾತು ಎಂದರು.
ಗೋಮಾಂಸ ತಿನ್ನುವುದು ಅವರ ವೈಯಕ್ತಿಕ ವಿಚಾರ.ಅವರನ್ನೇಕೆ ತಡೆಯಬೇಕು. ಅದರಲ್ಲೂ ಕೊಲ್ಲುವುದು ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ದೇವೇಗೌಡರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.