ರಾಜಕೀಯ

ಲೋಕಾ ಪದಚ್ಯುತಿ ನಿರ್ಣಯ ಮಂಡನೆ

ಲೋಕಾಯುಕ್ತರ ಪದಚ್ಯುತಿಗೆ ರಾಜ್ಯ ವಿಧಾನ ಮಂಡಲದಲ್ಲಿ ಮಂಗಳವಾರ ಬಿಜೆಪಿ ನಿರ್ಣಯ ಮಂಡಿಸುವ ಸಾಧ್ಯತೆ ಇದೆ...

ಲೋಕಾ ಪದಚ್ಯುತಿ ನಿರ್ಣಯ ಮಂಡನೆ
ಲೋಕಾಯುಕ್ತ ಭಾಸ್ಕರ ರಾವ್ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಲೋಕಾಯುಕ್ತರ ಪದಚ್ಯುತಿಗೆ ರಾಜ್ಯ ವಿಧಾನ ಮಂಡಲದಲ್ಲಿ ಮಂಗಳವಾರ ಬಿಜೆಪಿ ನಿರ್ಣಯ ಮಂಡಿಸುವ ಸಾಧ್ಯತೆ ಇದೆ.

ಸೋಮವಾರ ನಡೆದ ಕಲಾಪ ಸಲಹಾ ಸಮಿತಿಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ವಿಧಾನ ಪರಿಷತ್‍ನಲ್ಲಿ ಮೊದಲು ನಿರ್ಣಯ ಮಂಡಿಸಲು ನಿರ್ಧರಿಸಲಾಗಿದೆ ಎಂಬ ವಿಚಾರ ಬಿಜೆಪಿ ಮುಖಂಡರು  ಸ್ಪೀಕರ್ ಕಾಗೋಡು ತಿಮ್ಮಪ್ಪ ಗಮನಕ್ಕೆ ತಂದಿದ್ದು, ಜೆಡಿಎಸ್‍ನಎಲ್ಲಸದಸ್ಯರಸಹಿಸಂಗ್ರಹವಾದ ಬಳಿಕ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸುವುದಾಗಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಭೆಯಲ್ಲಿ ಅಭಿಪ್ರಾಯ ತಿಳಿಸಿದರು.

ಆದರೆ ಸೂಕ್ತ ದಾಖಲೆಗಳ ಜತೆಗೆ ನಿರ್ಣಯ ಮಂಡಿಸಿ. ಕೇವಲ ಸಹಿ ಹಾಕಿದ ಪತ್ರ ನೀಡಿದರೆ ಅದರಿಂದ ಪ್ರಯೋಜನವಾಗುವುದಿಲ್ಲ ಎಂಬ ಸಲಹೆಯನ್ನು ಸ್ಪೀಕರ್ ಈ ಸಂದರ್ಭದಲ್ಲಿ ನೀಡಿದರು. ಆದರೆ ಮೌಢ್ಯ ನಿಷೇಧ ವಿಧೇಯಕ ಈ ಅಧಿವೇಶನದಲ್ಲಿ ಚರ್ಚೆಗೆ ಬರುವುದಿಲ್ಲ. ಈ ಬಗ್ಗೆಮತ್ತೊಂದುಕರಡುರಚಿಸಲು ಕಾನೂನು ಹಿನ್ನೆಲೆಯುಳ್ಳ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವುದಕ್ಕೆ  ಸರ್ಕಾರ ಚಿಂತನೆ ನಡೆಸಿದ್ದು, ರಮೇಶ್ ಕುಮಾರ್ ಸಮಿತಿ ನೀಡಿದ ವರದಿ ಆಧರಿಸಿಪಂಚಾಯಿತ್ ರಾಜ್ ಸುಧಾರಣಾ ವಿಧೇಯಕ ಮಾತ್ರ ಮಂಡನೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.