ರಾಜಕೀಯ

ಪುಡಿ ಕಾಂಗ್ರೆಸ್ಸೂ ನಿರ್ನಾಮ: ಈಶ್ವರಪ್ಪ

ಕರ್ನಾಟಕದಲ್ಲಿ ಕಾಂಗ್ರೆಸ್‍ನ ಒಂದಿಷ್ಟು ಪುಡಿ ಹಾಗೆಯೇ ಉಳಿದಿದೆ. ಮುಂದಿನ ದಿನಗಳಲ್ಲಿ ಅದನ್ನೂ ಸಹ ನುಚ್ಚುನೂರು ಮಾಡಲಾಗುವುದು.ಅದು ಬಿಜೆಪಿಯ ಗುರಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ. ಎಸ್.ಈಶ್ವರಪ್ಪ ಹೇಳಿದ್ದಾರೆ...

ಪುಡಿ ಕಾಂಗ್ರೆಸ್ಸೂ ನಿರ್ನಾಮ: ಈಶ್ವರಪ್ಪ
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ
Published On :

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‍ನ ಒಂದಿಷ್ಟು ಪುಡಿ ಹಾಗೆಯೇ ಉಳಿದಿದೆ. ಮುಂದಿನ ದಿನಗಳಲ್ಲಿ ಅದನ್ನೂ ಸಹ ನುಚ್ಚುನೂರು ಮಾಡಲಾಗುವುದು. ಅದು ಬಿಜೆಪಿಯ ಗುರಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

`ಕಾಂಗ್ರೆಸ್ ಮುಕ್ತ ದೇಶ ಮಾಡುವುದು ಬಿಜೆಪಿಯ ಗುರಿ'. ಅದನ್ನು ಈಗಾಗಲೇ ಬಿಜೆಪಿ ಸಾಧಿಸಿದೆ. ದೇಶದ ಅಲ್ಲಿ, ಇಲ್ಲಿ ಯಾವುದೊ ಒಂದಿಷ್ಟು ಮೂಲೆಯಲ್ಲಿ ಕಾಂಗ್ರೆಸ್ ಇನ್ನೂ ಆಡಳಿತ ನಡೆಸುತ್ತಿದೆ. ಆ ಪುಡಿ ಕಾಂಗ್ರೆಸ್‍ನ್ನು ಸಹ ನಿರ್ನಾಮಗೊಳಿಸಲಾಗುವುದು ಎಂದು ಹೇಳಿದರು

ಶಿಕ್ಷಕರ ಸದನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಬಿಜೆಪಿ ಮುಕ್ತವನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಏಟಿಗೆ ತಿರುಗೇಟು ನೀಡಿದರು.

ಈ ಹಿಂದಿನ ಪ್ರಧಾನಿಗಳಾದ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಕಾಲದಿಂದಲ್ಲೂ ಇದನ್ನೇ ಹೇಳಿಕೊಂಡು ಬರಲಾಗುತ್ತಿದೆ. ಈಗ ಸಿಎಂ ಸಿದ್ದರಾಮಯ್ಯ ಅವರು ಅದನ್ನೇ ಮತ್ತೆ ಹೇಳುತ್ತಿದ್ದಾರೆ. ಆದರೆ, ಅದು ಅಸಾಧ್ಯದ ಮಾತು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.