ಅಧಿಕಾರಶಾಹಿ ಧೋರಣೆ ವಿರುದ್ಧ ಕಾಗೋಡು ಆಕ್ರೋಶ
ಅಧಿಕಾರಿಗಳು ದಿವಾಳಿ ಹತ್ತಿಹೋಗಿದ್ದಾರೆ. ನೀರು ಸಿಗದೆ ಜನ ಒದಾಡುತ್ತಿದ್ದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ . ಗಂಗಾ ಕಲ್ಯಾಣ ...

ಬೆಂಗಳೂರು: ಅಧಿಕಾರಿಗಳು ದಿವಾಳಿ ಹತ್ತಿಹೋಗಿದ್ದಾರೆ. ನೀರು ಸಿಗದೆ ಜನ ಒದಾಡುತ್ತಿದ್ದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ . ಗಂಗಾ ಕಲ್ಯಾಣ ಯೋ ಜನೆಯ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಒಂದು ವರ್ಷ ಬೇಕಾ? ಪರಿಸ್ಥಿತಿ ಹೀಗಾದ್ರೆ ಜನಸಾಮಾನ್ಯರ ಗತಿಏನು ಎಂದು ಖಾರವಾಗಿ ಪ್ರಶ್ನಿಸುವ ಮೂಲಕ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ರಾಜ್ಯದ ಅಧಿಕಾರಶಾಹಿ ಧೋರಣೆ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ ಘಟನೆ ನಡೆಯಿತು. `ಪರಿಶಿಷ್ಟರ ಉಪಯೋ ಜನೆ ಅಧಿನಿಯಮ 2013ರ ಕಾಯಿದೆ 'ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ, ನಗರದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವನ್ನು ಟೀಕಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜರಾಗುತ್ತಾರೆ. ಆ
ಬಗ್ಗೆ ತಾವು ಎನ್ನನ್ನು ಮಾತನಾಡುವುದಿಲ್ಲ ಎನ್ನುತ್ತಲೇ ಸರ್ಕಾರದ ಕಾರ್ಯವೈಖರಿ ಬಗ್ಗೆ ಬೇಸರ ಹೊರ ಹಾಕಿದರು. ಸಿದ್ದರಾಮಯ್ಯನವರೇ...ನೀವು ಬಜೆಟ್‍ನಲ್ಲಿಜನರಿಗೆ ನೀರು, ತಲೆ ಮೇಲ್ಲೊಂದು ಸೂರು ಕೋಡುತ್ತೇವೆಂದು ಹೇಳುತ್ತೀರಿ, ಆದರೆ, ರಾಜ್ಯದ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಈ ಹಿಂದೆ ತಾವು ಸಮಾಜ ಕಲ್ಯಾಣ ಹಾಗೂ ಆರೋಗ್ಯ ಇಲಾಖೆ ಸಚಿವರಾಗಿದ್ದಾಗ ಜಾರಿಗೆ ತಂದಿದ್ದ ಅನೇಕದೀರ್ಘಾವ„ ಕಾರ್ಯಕ್ರಮಗಳು ನಿಂತಲ್ಲಿಯೇ ನಿಂತಿವೆ.ವಿದ್ಯಾರ್ಥಿ ನಿಲಯಗಳ ಸುಧಾರಣೆಗೆ ತಂದ ಕಾರ್ಯ ಕ್ರಮಗಳನ್ನು ಕೇಳುವವರಿಲ್ಲ. ವಿದ್ಯಾರ್ಥಿನಿಲಯ ಗಳ ಸಮೀಪವೇ ವಾರ್ಡನ್‍ಗಳಿಗೆ ವಸತಿ ನಿಲಯ ಕಟ್ಟುವ ಕಾರ್ಯ ಮೂಲೆಗುಂಪಾಗಿದೆ. ಅಧಿಕಾರಿಗಳಿಗೆ ಇದು ಬೇಕಾಗಿಲ್ಲ ಎಂದು ಕಿಡಿಕಾರಿದರು.
ಗಂಗಾ ಕಲ್ಯಾಣ ಯೋ ಜನೆಯ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕೆ ಒಂದು ವರ್ಷ ಬೇಕಾ? ಎಂದು ಪ್ರಶ್ನಿಸಿದರಲ್ಲದೆ, ಈ ಬಗ್ಗೆ ಸಂಬಂಧಪಟ್ಟ ಮಂತ್ರಿ ಜತೆ ಮಾತನಾಡುತ್ತೇನೆ. ಜನ ಸಾಮಾನ್ಯರ ಪರಿಸ್ಥಿತಿ ಹೀಗಾದ್ರೆ ಗತಿಯೇನು ಎಂದು ನೊಂದು ನುಡಿದರು. ಸಮಾಜದಲ್ಲಿ ಬದಲಾವಣೆ ಆಗಬೇಕಾದರೆ ಹೋರಾಟ ಅನಿವಾರ್ಯ. ಹೋರಾಟವಿಲ್ಲದೆ ಯಾವ ಬದಲಾವಣೆಯೂ ಆಗದು. ಆದರೆ, ಈಗ ಹೋರಾಟದ ದಾರಿ ಕಡಿಮೆ ಆಗಿದೆ.
ಹೀಗಾಗಿ ಬದಲಾವಣೆಗಳನ್ನು ಎಣಿಸಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳಷ್ಟು ಜನ ಇಂದು ಹೋರಾಟವೆಂದರೆ ಲಾಭ ಮಾಡುವ ಕೆಲಸವೆಂದು ಭಾವಿಸಿದ್ದಾರೆ. ಹೀಗಾಗಿ ಹೋರಾಟಗಳು ನೆಲೆಯೂ ಕಾಣುತ್ತಿಲ್ಲ, ಗುರಿಯೂ ಕಾಣುತ್ತಿಲ್ಲ.ಮುಂದಾದರೂ ಹೋರಾಟಗಳು ನಿರ್ದಿಷ್ಟ ಕಾರ್ಯಕ್ರಮದ ಮೂಲಕ ನಡೆಯಬೇಕು.
- ಕಾಗೋಡು ತಿಮ್ಮಪ್ಪ, ವಿಧಾನಸಭಾಧ್ಯಕ್ಷ
ಸ್ಪೀಕರ್ ಆಗಿದ್ದಕ್ಕೆ ಧನ್ಯ
ಸಂವಿಧಾನಾತ್ಮಕವಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ಪರಿಶಿಷ್ಟರ ಉಪಯೋಜನೆಯ ವಿಶೇಷ ಕಾಯಿದೆಯಲ್ಲಿ ಸಣ್ಣ ಪುಟ್ಟ ತಪ್ಪಗಳಿರಬಹುದು, ಅದನ್ನು ಸರಿಪಡಿಸಿಕೊಳ್ಳೋಣ.
ನಿಲ್ಲುವುದಕ್ಕೆ ಒಂದು ನೆಲೆ ಸಿಕ್ಕಿದೆ. ಅದನ್ನು ಗಟ್ಟಿ ಮಾಡಿಕೊಳ್ಳೋಣ ಎಂದ ಅವರು, ಸಾಮಾಜಿಕ ನ್ಯಾಯದಡಿಯಲ್ಲಿ ಇಂತಹ ದೊಂದು ಕಾಯಿದೆ ಬಂದ ಸಂದರ್ಭದಲ್ಲಿ ತಾವು ವಿಧಾನ ಸಭಾಧ್ಯಕ್ಷರಾಗಿದ್ದಕ್ಕೆ ಧನ್ಯನಾಗಿದ್ದೇನೆ ಎಂದರು.ಉಪಯೋ ಜನೆ ಕಾಯಿದೆಯಡಿ 2014ಕ್ಕೆ ಮೀಸಲಾಗಿದ್ದ ಅನುದಾನ ಇತರೆ ಇಲಾಖೆಗೆ ಹೋಗಿದೆ ಎನ್ನುವ ಮಾತುಗಳಿವೆ. ಸದನದಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲು ಅವಕಾಶ ನೀಡ ಬೇಕೆಂದು ಶಾಸಕ ನರೇಂದ್ರಸ್ವಾಮಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


