ಯೋಗ ವಿರೋಧಿಯಲ್ಲ: ಆಂಜನೇಯ
ತಾವಾಗಲೀ, ರಾಜ್ಯ ಸರ್ಕಾರವಾಗಲೀ ಯೋಗ ವಿರೋಧಿ ಅಲ್ಲ. ಆದರೆ, ಇದನ್ನು ಬಲವಂತವಾಗಿ ಯಾವುದೇ ಧರ್ಮೀಯರ ಮೇಲೆ ಹೇರುವ ಕೆಲಸ ಮಾಡಬಾರದು ಮತ್ತು ಅದರಲ್ಲಿ ರಾಜಕೀಯ ಮಾಡಬಾರದು...

ಚಿತ್ರದುರ್ಗ: ತಾವಾಗಲೀ, ರಾಜ್ಯ ಸರ್ಕಾರವಾಗಲೀ ಯೋಗ ವಿರೋಧಿ ಅಲ್ಲ. ಆದರೆ, ಇದನ್ನು ಬಲವಂತವಾಗಿ ಯಾವುದೇ ಧರ್ಮೀಯರ ಮೇಲೆ ಹೇರುವ ಕೆಲಸ ಮಾಡಬಾರದು ಮತ್ತು ಅದರಲ್ಲಿ ರಾಜಕೀಯ ಮಾಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಹೇಳಿದರು.
ನಗರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಅಂಜನೇಯ ಯೋಗ ವಿರೋಧಿ ಎಂದು ಮಾಧ್ಯಮಗಳಲ್ಲಿ ಬಂದಿದೆ. ಆದರೆ, ನಾನು ಯೋಗ ವಿರೋಧಿಯಲ್ಲ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾರ ಮೇಲೂ ಯೋಗ ಬಲವಂತ ಹೇರಬಾರದು. ಕ್ರೀಡೆ, ವ್ಯಾಯಾಮ ಅವರ ಇಷ್ಟಕ್ಕೆ ಬೀಡಬೇಕು. ಬಲವಂತವಾಗಿ ಇದನ್ನೇ ಮಾಡುವಂತೆ ಒತ್ತಡ ಹೇರುವುದು ಸರಿಯಲ್ಲ. ಯೋಗ ಬೇಕು. ಆದರೆ, ಅದರಲ್ಲಿ ರಾಜಕೀಯ ಇರಬಾರದು ಎಂದು ಸ್ಪಷ್ಟಪಡಿಸಿದರು.
ನಮ್ಮ ಪುರಾತನ ಪರಂಪರೆಯ ಯೋಗವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಸಬೇಕಿದೆ. ಮುಂಚೆ ನಾನು ಯೋಗ ಮಾಡುತ್ತಿರಲಿಲ್ಲ. ಕಳೆದ ಡಿಸೆಂಬರ್‍ನಿಂದ ಯೋಗಾಭ್ಯಾಸ ಕೈಗೊಂಡಿದ್ದೇನೆ. ಈವರೆಗೆ 3-4 ಶಿಬಿರಗಳಲ್ಲಿ ಭಾಗವಹಿಸಿ ಸರಳ ಆಸನಗಳನ್ನು ಕಲಿತಿದ್ದೇನೆ. ಇದಕ್ಕೂ ಮುನ್ನ ಹೊಲದಲ್ಲಿ ಕೆಲಸ ಮಾಡುವ ಮೂಲಕ ದೇಹ ದಂಡಿಸುತ್ತಿದ್ದೆ. ಸಚಿವನಾದ ಮೇಲೆ ಅದು ಸಾಧ್ಯವಾಗದಿದ್ದರಿಂದ ಪ್ರತಿ ನಿತ್ಯ ವಾಕಿಂಗ್ ಹೋಗುವ ಅಭ್ಯಾಸ ಇಟ್ಟುಕೊಂಡಿದ್ದೇನೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


