ಮೀನು ಡ್ರಿಲ್ ಮಾಡಲ್ಲ!: ಸಚಿವರಿಗೆ ಗೋಮ ವ್ಯಂಗ್ಯ
ಮೀನು ಡ್ರಿಲ್ ಮಾಡಲ್ಲ. ದೈಹಿಕ ಶಿಕ್ಷಕರು ಮೀನುಗಾರಿಕೆ ಇಲಾಖೆಯಡಿಯೇನು ಬರೋದಿಲ್ವಲ್ಲ...

ವಿಧಾನ ಪರಿಷತ್: 'ಮೀನು ಡ್ರಿಲ್ ಮಾಡಲ್ಲ. ದೈಹಿಕ ಶಿಕ್ಷಕರು ಮೀನುಗಾರಿಕೆ ಇಲಾಖೆಯಡಿಯೇನು ಬರೋದಿಲ್ವಲ್ಲ...' ಹೀಗೆಂದು ಬಿಜೆಪಿ ಸದಸ್ಯ ಗೋ. ಮಧುಸೂಧನ್ ಅವರು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್‍ರನ್ನು ಛೇಡಿಸಿದ ಪ್ರಸಂಗ ನಡೆಯಿತು.
ಪ್ರಶ್ನೋತ್ತರ ವೇಳೆಯಲ್ಲಿ ಗೋ. ಮಧುಸೂಧನ್ ಅವರು ದೈಹಿಕ ಶಿಕ್ಷಕರನ್ನು ಪ್ರೌಢಶಾಲೆಗಳಲ್ಲಿ ವಿಜ್ಞಾನ, ಕಲಾ ಮತ್ತು ಭಾಷಾ ವಿಷಯಗಳನ್ನು ಬೋಧಿಸುವ ಸಹ ಶಿಕ್ಷಕರೊಂದಿಗೆ ಸೇರಿ ಸಮಾನ ಮಾನ್ಯತೆ ಕಲ್ಪಿಸುವ ಸಂಬಂಧ ಪ್ರಶ್ನೆ ಕೇಳಿದ್ದರು.
ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಈ ರೀತಿ ಸರಿಯಾದ ಮಾನ್ಯತೆ ನೀಡಲು ನಾನಾ ರೀತಿ ಸಮಸ್ಯೆಗಳಿವೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇ, ಆದರೆ ಇನ್ನೂ ಚರ್ಚಾ ಹಂತದಲ್ಲೇ ಇದೆ. ಪ್ರೋ. ವೈದ್ಯನಾಥನ್ ವರದಿಯನ್ನು ಆಧರಿಸಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸುವ ಬಗ್ಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ತೃಪ್ತರಾಗದ ಗೋ. ಮಧುಸೂಧನ್, ಈಗಾಗಲೇ ಈ ವಿಚಾರವಾಗಿ ಸಾಕಷ್ಟು ಚರ್ಚೆ ನಡೆದಿದೆ. ಆದರೂ ಇನ್ನೂ ಏಕೆ ತಡ ಮಾಡಲಾಗುತ್ತಿದೆ. ಎಷ್ಟು ಸಮಯ ಬೇಕೆಂಬುದನ್ನು ಸ್ಪಷ್ಟಪಡಿಸಿ ಎಂದು ಪಟ್ಟು ಹಿಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಮೀನುಗಾರಿಕೆ ಸಚಿವ ಅಭಯ್ ಚಂದ್ರ ಜೈನ್, ಪರಿಶೀಲನೆಯಲ್ಲಿದೆ ಎಂದ ಮೇಲೆ ಏಕೆ ಒತ್ತಡ ಹೇರುತ್ತೀರಿ ಎಂದು ಗೋ ಮಧುಸೂಧನ್ ಅವರನ್ನು ಟೀಕಿಸಿದರು. ಈ ಸಂದರ್ಭದಲ್ಲಿ ಕೆರಳಿದ ಮಧುಸೂದನ್, ಮೀನು ಡ್ರಿಲ್ ಮಾಡಲ್ಲ, ದೈಹಿಕ ಶಿಕ್ಷಕರು ಮೀನುಗಾರಿಕೆ ಇಲಾಖೆಯಡಿಯೇನು ಬರುವುದಿಲ್ಲ ಎಂದು ಅಭಯಚಂದ್ರ ಜೈನ್ ರ ಕಾಲೆಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


