ಆರೋಗ್ಯ ಸಚಿವರನ್ನು ಆಚೆಗೆ ಎಳೆದೊಯ್ರಿ!: ಸ್ಪೀಕರ್ ಆಕ್ರೋಶ ಭರಿತ ನುಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕದ ಬಗ್ಗೆ ಪಕ್ಷಾತೀತವಾಗಿ ಆರೋಗ್ಯ ಸಚಿವ ಯುಟಿ ಖಾದರ್ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು.

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ನೇಮಕದ ಬಗ್ಗೆ ಪಕ್ಷಾತೀತವಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸಚಿವರು ಸ್ಪಂದಿಸದಿದ್ದಾಗ ಎಲ್ಲ ಸೇರಿಕೊಂಡು ಅವರನ್ನು ಆಚೆಗೆ ಎಳೆದುಕೊಂಡು ಹೋಗ್ರಿ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಆಕ್ರೋಶಭರಿತವಾಗಿ ನುಡಿದರು.
ಪ್ರಶ್ನೋತ್ತರ ವೇಳೆಯಲ್ಲಿ ಗುರುಪಾದಗೌಡ ಸಂಗನಗೌಡ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 983 ತಜ್ಞರು, 331 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು 87 ದಂತ ಆರೋಗ್ಯಾಧಿಕಾರಿಗಳ ನೇಮಕಕ್ಕೆ ವಿಶೇಷ ನಿಯಮ ರೂಪಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಇದೆಲ್ಲಾ ಹಳೆಯದು ಆಗುವುದನ್ನು ಹೇಳಿ. ಎಲ್ಲೂ ವೈದ್ಯರಿಲ್ಲ ಎಂದು ಜಿ.ಎಸ್ ಪಾಟೀಲ್ ಆಗ್ರಹಿಸಿದರು.
ಇದಕ್ಕೆ ಸದನದಲ್ಲಿದ್ದ ಶಿವಲಿಂಗೇ ಗೌಡ, ಸಿಟಿ ರವಿ ವಿಶ್ವೇಶ್ವರ ಹೆಗಡೆ ಕಾಗೇರಿ, ಬಸವರಾಜ ರಾಯರೆಡ್ಡಿ, ಬಾಲಕೃಷ್ಣ, ನಿಂಗಯ್ಯ ಕುಮಾರಸ್ವಾಮಿ ಸೇರಿದಂತೆ ಬಹುತೇಕ ಎಲ್ಲಾ ಶಾಸಕರು ದನಿಗೂಡಿಸಿದರು. ಎಲ್ಲಾ ಕ್ಷೇತ್ರಗಳಲ್ಲೂ ಸರ್ಕಾರಿ ಆಸ್ಪತ್ರೆಗೆಳಲ್ಲಿ ವೈದ್ಯರ ಕೊರತೆ ಇದೆ. ಅದನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಈಗಿರುವ ಗುತ್ತಿಗೆ ವೈದ್ಯರ ಅವಧಿಯು ಮುಗಿದಿದ್ದು ಅವರೂ ಇಲ್ಲ. ಅವರನ್ನಾದರೂ ಮುಂದುವರಿಸಿ. ಇಲ್ಲದಿದ್ದರೆ ತೊಂದರೆ ಉಂಟಾಗುತ್ತದೆ ಎಂದು ಶಾಸಕರು ಹೇಳಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ನಿಮ್ಮ ಸಿಟ್ಟು ತೋರಿಸಿದ್ದೀರಿ. ಅವರು ಏನು ಬೇಕೋ ಮಾಡಲಿ ನಿಮಗೇನ್ರಿ ವೈದ್ಯರ ನೇಮಕ ಮಾಡಲು?, ಗುತ್ತಿಗೆ ಮುಂದುವರೆಸಿ ಎಂದು ಸೂಚಿಸಿದರು. ಅದಕ್ಕೆ ಸಚಿವ ಖಾದರ್ ಸ್ಪಂದಿಸದೇ ಕುಳಿತಲ್ಲಿಂದಲೇ ಇಲ್ಲ ಎಂದು ತಲೆಯಾಡಿಸಿದರು. ಆಗ ಸದಸ್ಯರ ಆಕ್ರೋಶ ಹೆಚ್ಚಾಯಿತು. ಸಚಿವರ ವರ್ತನೆ ಬಗ್ಗೆ ಸಿಟ್ಟಾದ ಸ್ಪೀಕರ್ ಕಾಗೋಡು ತಿಮ್ಮಪ್ಪ ಎಲ್ಲಾ ಸೇರಿಕೊಂಡು ಅವರನ್ನು ಆಚೆಗೆ ಎಳೆದುಕೊಂಡು ಹೋಗಿ ಕೇಳ್ರಿ ಅವರ ಒಳಗೆ ಏನಿದೆಯೋ ಗೊತ್ತಿಲ್ಲ. ಒಂದು ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ಇದೆಯೋ ಇಲ್ಲವೋ? ಎಲ್ಲದಕ್ಕೂ ಇವರ(ಸಿ.ಎಂ) ಆಶೀರ್ವಾದ ಬೇಕೇನೋ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾತಿನ ಚಕಮಕಿ ಹೆಚ್ಚಾದಾಗ, ಇಲಾಖೆ ಮೇಲಿನ ಚರ್ಚೆಯಲ್ಲಿ ಇವೆಲ್ಲ ಮಾತನಾಡಿ. ಆಗ ಸೂಕ್ತ ಉತ್ತರವನ್ನು ಸಚಿವರು ನೀಡುತ್ತಾರೆ ಎಂದು ಹೇಳಿ ಸ್ಪೀಕರ್ ಚಕಮಕಿಗೆ ತೆರೆ ಎಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


