ರಾಜಕೀಯ

ಬಿಬಿಎಂಪಿಗೆ ಕೆಲಸವೇ ಇಲ್ಲ: ಸಚಿವ ಜಾರ್ಜ್

ರಸ್ತೆ ಮಾಡಲ್ಲ, ಕಸ ತೆಗೆಯಲ್ಲ, ಚರಂಡಿ ಕ್ಲೀನ್ ಮಾಡಲ್ಲ... ಎಲ್ಲ ಹೊರಗುತ್ತಿಗೆನೇ... ಏನೇನೂ ಕೆಲಸ ಇಲ್ಲದ ಬಿಬಿಎಂಪಿ...

ಬಿಬಿಎಂಪಿಗೆ ಕೆಲಸವೇ ಇಲ್ಲ: ಸಚಿವ ಜಾರ್ಜ್
ಕೆ.ಜೆ. ಜಾರ್ಜ್
Published On :

ಬೆಂಗಳೂರು: ರಸ್ತೆ ಮಾಡಲ್ಲ, ಕಸ ತೆಗೆಯಲ್ಲ, ಚರಂಡಿ ಕ್ಲೀನ್ ಮಾಡಲ್ಲ... ಎಲ್ಲ ಹೊರಗುತ್ತಿಗೆನೇ... ಏನೇನೂ ಕೆಲಸ ಇಲ್ಲದ ಬಿಬಿಎಂಪಿ ನಿರ್ವಹಣೆ ಕೆಲಸವನ್ನೂ ಸರಿಯಾಗಿ ಮಾಡೊಲ್ಲ....ಇದು ಯಾವುದೋ ಸಂಘಟನೆ ಅಥವಾ ಪ್ರತಿಪಕ್ಷದ ಮಾತಲ್ಲ. ಗೃಹ ಸಚಿವ ಕೆ.ಜೆ. ಜಾರ್ಜ್ ಅವರ ಮಾತು. ಬಿಬಿಎಂಪಿಗೆ ಕೆಲಸವೇ ಇಲ್ಲ ಎಂದಿರುವ ಅವರು, ಇರುವ ಕನಿಷ್ಠ ಕೆಲಸವನ್ನೂ ಮಾಡುತ್ತಿಲ್ಲ. ಬದಲಿಗೆ ಸರ್ಕಾರ ನೇರವಾಗಿ ಹಣ ನೀಡಿರುವ ಟೆಂಡರ್ ಶ್ಯೂರ್ ರಸ್ತೆಗಳ ನಿರ್ವಹಣೆಯನ್ನೂ ಮಾಡದೆ ಅದನ್ನೇ ಕಾರ್ಪೊರೇಟರ್ಗಳು ಕೌನ್ಸಿಲ್ನಲ್ಲಿ ಟೀಕಿಸುತ್ತಿದ್ದಾರೆ ಅಷ್ಟೇ. ಇಷ್ಟು ಮಾಡದವರು ಇನ್ನೇಕೆ ಎಂಬ ಮರುಪ್ರಶ್ನೆಯನ್ನೂ ಕೇಳಿದ್ದಾರೆ.

ನಗರದಲ್ಲಿ ರಸ್ತೆಗಳ ದುಸ್ಥಿತಿ ಬಗ್ಗೆ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡುತ್ತಿದ್ದ ಸಚಿವರು, ರಸ್ತೆ ನಿರ್ಮಾಣ , ಅದರ ಸೂಕ್ತ ನಿರ್ವಹಣೆಯನ್ನು  ಬಿಬಿಎಂಪಿ ಮಾಡಬೇಕು. ಆದರೆ, ಅದನ್ನು ಮಾಡುತ್ತಿಲ್ಲ. ಯಾವ ಕೆಲಸವನ್ನೂ ಬಿಬಿಎಂಪಿಯವರು ಮಾಡುತ್ತಿಲ್ಲ. ಎಲ್ಲವೂ ಹೊರಗುತ್ತಿಗೆಯೇ  ಆಗಿದೆ. ಇನ್ನು ಸಂಪನ್ಮೂಲ ಕ್ರೋಡೀಕರಣ ಮಾಡಿ ಎಂದರೆ
ತೆರಿಗೆಯನ್ನೂ ಸಂಗ್ರಹಿಸುತ್ತಿಲ್ಲ. ಜಾಹೀರಾತು ಹಣವನ್ನೂ ವಸೂಲಿ ಮಾಡಲ್ಲ. ಏರ್ಪೋಟ್ ಹತ್ತಿರ 100 ಕೋಟಿ ಬರುತ್ತದೆ ಎನ್ನುತ್ತಾರೆ. ಅದೇ ನಗರದಲ್ಲೆಲ್ಲ ಕೇವಲ 10 ಕೋಟಿಯನ್ನು ಸಂಗ್ರಹಿಸುತ್ತಾರೆ. ಇದೇನಾ ಇವರ ಕೆಲಸ ಎಂದು ಪ್ರಶ್ನಿಸಿದರು.ನಗರದಲ್ಲಿ ವಾಹನ ಸಂಚಾರ ಹೆಚ್ಚಿರುವ ಭಾಗದಲ್ಲಿ ಸ್ಕೈವಾಕ್ ನಿರ್ಮಿಸುವ
ಸಂಬಂಧ ಪೋಲೀಸ್ ಇಲಾಖೆ ಸಲಹೆ ನೀಡಿತ್ತು. ಆದರೆ ಈ ಬಗ್ಗೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮುಂದಿನ ಸಭೆಯಲ್ಲಿ ಬಿಬಿಎಂಪಿ ಆಯುಕ್ತರನ್ನು
ಪ್ರಶ್ನಿಸಲಾಗುತ್ತದೆ. ಸೂಕ್ತ ಕ್ರಮಕ್ಕೆ ಸೂಚಿಸಲಾಗುತ್ತದೆ ಎಂದರು.

ರಸ್ತೆ ನಿರ್ಮಾಣ: ನಗರದ ರಸ್ತೆಗಳನ್ನು `ಬೂಟ್' ಆಧಾರದಲ್ಲಿ ನಿರ್ಮಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಅಂದರೆ, ರಸ್ತೆ ನಿರ್ಮಿಸುವ ಕಾಮ ಗಾರಿಯನ್ನು ಪ್ರತಿಷ್ಠಿತ ಸಂಸ್ಥೆಗೆ ವಹಿಸಲಾಗುತ್ತದೆ. ಅದು ಏಷ್ಯನ್ ಬ್ಯಾಂಕ್ ಅಥವಾ ಯಾವ ಬ್ಯಾಂಕ್ ನಿಂದ ಹಣ ತರುತ್ತದೋ ಗೊತ್ತಿಲ್ಲ. ಇದರ ವೆಚ್ಚವನ್ನು ಸರ್ಕಾರ ಒಂದೇ ಬಾರಿ
ಭರಿಸುವುದಿಲ್ಲ. ವರ್ಷ ವರ್ಷ ಇಂತಿಷ್ಟು ಹಣ ಎಂದು ನೀಡುತ್ತದೆ. ಇದರಿಂದ ಸಾರ್ವಜನಿಕರಿಗೆ ಹೊರೆ ಆಗುವುದಿಲ್ಲ. ಇದು ಟೋಲ್ ರಸ್ತೆ ಆಗುವುದಿಲ್ಲ ಎಂದು ಗೃಹ ಸಚಿವರು
ಸ್ಪಷ್ಟಪಡಿಸಿದರು.

ಮೆಟ್ರೋಗೆ ವೇಗ: ನಮ್ಮ ಮೆಟ್ರೋ ಕಾಮಗಾರಿ ನಿಧಾನಗತಿಯಲ್ಲಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ,
ನಮ್ಮ ಮೆಟ್ರೋ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತದೆ. ಅಲ್ಲದೆ, ಕಾಮಗಾರಿ ಮುಗಿದಿರುವ ಪ್ರದೇಶದಲ್ಲಿ ರಸ್ತೆಯನ್ನು ಸೂಕ್ತವಾಗಿ
ನಿರ್ವಹಣೆ ಮಾಡಲೂ ಸೂಚಿಸಲಾಗುತ್ತದೆ ಎಂದು ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.