ರಾಜಕೀಯ

ಪಕ್ಷಕ್ಕೆ ತೊಂದರೆಯಾಗಲು ಬಿಡಲ್ಲ: ಮಾಜಿ ಪ್ರಧಾನಿ ದೇವೇಗೌಡ

ನಾನಿನ್ನೂ ಆರೋಗ್ಯವಾಗಿದ್ದೀನಿ, ನಾನು ಜೀವಂತವಾಗಿರುವ ತನಕ, ನಿಮ್ಮೆಲ್ಲರ ಆಶೀರ್ವಾದ ಇರುವ ತನಕ ಜೆಡಿಎಸ್ ಅನ್ನು ಮುಗಿಸಲು ಯಾರಿಂದಲೂ...

ಪಕ್ಷಕ್ಕೆ ತೊಂದರೆಯಾಗಲು ಬಿಡಲ್ಲ: ಮಾಜಿ ಪ್ರಧಾನಿ ದೇವೇಗೌಡ
ದೇವೇಗೌಡ
Published On :

ಮದ್ದೂರು: ``ನಾನಿನ್ನೂ ಆರೋಗ್ಯವಾಗಿದ್ದೀನಿ, ನಾನು ಜೀವಂತವಾಗಿರುವ ತನಕ, ನಿಮ್ಮೆಲ್ಲರ ಆಶೀರ್ವಾದ ಇರುವ ತನಕ ಜೆಡಿಎಸ್ ಅನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ'' ಹೀಗೆಂದವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ.

ಮತ್ತೆ ಧೂಳಿನಿಂದ ಎದ್ದು ಬರುವುದಾಗಿ ತಿಳಿಸಿರುವ ಅವರು, ಈ ತಾವು ಕಟ್ಟಿದ ಪಕ್ಷದ ಕಾರ್ಯಕರ್ತರನ್ನು ತಾವೇ ರಕ್ಷಿಸುವುದಾಗಿ ಗುಡುಗಿದ್ದಾರೆ. ನನ್ನ ಮುಂದೆ ಅನೇಕ ಚುನಾವಣೆ-ಗಳಿವೆ. ಆ ಸಂದರ್ಭದಲ್ಲಿ ನಿಮ್ಮ ಮುಂದೆ ಬರುತ್ತೇನೆ. ಮತ ಕೇಳುತ್ತೇನೆ. ಜೆಡಿಎಸ್‍ನ್ನು ಗೆಲ್ಲಿಸಿಕೊಳ್ಳುತ್ತೇನೆ. ನಾನು ಜೀವಂತವಾಗಿರುವವರೆಗೆ ಯಾರಿಂದಲೂ ಜೆಡಿಎಸ್ ಅನ್ನು ಮುಗಿಸಲು ಸಾಧ್ಯವಿಲ್ಲ'' ಎಂದು ಅವರು ಹೇಳಿದ್ದಾರೆ.

ಪಟ್ಟಣದಲ್ಲಿ ಬುಧವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ನನ್ನ ಮೇಲೂ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ನಾನು ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರಾಗಲಿಲ್ಲವೇ?  ನನ್ನ ಮಗ ಕುಮಾರಸ್ವಾಮಿ ಲೋಕಾಯುಕ್ತ ನ್ಯಾಯಾಲಯದಲ್ಲಿ ಹಾಜರಾಗಿ ಜಾಮೀನು ಮೇಲೆ ಹೊರಬರಲಿಲ್ಲವೇ? ನ್ಯಾಯಾಲಯಕ್ಕೆ ಹೋದವೆಂದು ನಾವು ಬೀದಿ ರಾದ್ಧಾಂತ ಮಾಡಿದ್ದೇವೆಯೇ ಎಂದು ಪ್ರಶ್ನಿಸಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ನವರು ನಡೆದುಕೊಂಡ ರೀತಿ ಸರಿಯಲ್ಲ. ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಕಾಂಗ್ರೆಸ್ ನವರು ಅರಿಯಬೇಕಿತ್ತು ಎಂದು ದೇವೇಗೌಡ ಕಿಡಿಕಾರಿದರು.

ಎರಡು ಬಾರಿ ಮುಗಿಸುವ ಸಂಚು ನಡೆದಿತ್ತು:ಎಚ್‍ಡಿಕೆ:
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲು ರಡು ಬಾರಿ ಪ್ರಯತ್ನಿಸಲಾಗಿತ್ತು. ಮಂಡ್ಯದಲ್ಲೂ ದೇವೇಗೌಡರ ಪಕ್ಷ ಒಡೆಯುವ ಪ್ರಯತ್ನಗಳನ್ನು ನಡೆಸಲಾಯಿತು
ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಜಕೀಯವಾಗಿ ದೇವೇಗೌಡರ ವರ್ಚಸ್ಸು ಕುಗ್ಗಿಸಬೇಕೆಂದು ಪಣ ತೊಟ್ಟು, ಆಡಳಿತ ಪಕ್ಷ ಹಣ ಮತ್ತು ಅಧಿಕಾರ ಬಲ ಪ್ರದರ್ಶನಕ್ಕೆ ಹೊರಟಿದೆ. ಈ ಚುನಾವಣೆಯಲ್ಲಿ ಆ ಆಟ ನಡೆಯುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಛಿದ್ರ ಮಾಡುವುದು ಅಷ್ಟು ಸುಲಭವಲ್ಲ.ದೇವೇಗೌಡರಿಗೆ ರಾಜಕೀಯವಾಗಿ ಶಕ್ತಿ ತುಂಬಿದ ಜಿಲ್ಲೆ ಇದು. ಇಲ್ಲಿನ ಜನ ಗೌಡರ ಮೇಲೆ ನಂಬಿಕೆ, ವಿಶ್ವಾಸ ಇಟ್ಟಿದ್ದಾರೆ. ಅದಕ್ಕೆ ಎಂದೂ ದ್ರೋಹ ಮಾಡಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.