ರಾಜಕಾರಣಿಗಳು ಕತ್ತೆ ಕಾಯ್ತಿದ್ದಾರೋ?: ಕಾಗೋಡು ತಿಮ್ಮಪ್ಪ
ರಾಜಕಾರಣಿಗಳು ತಾವು ಜನರಿಗೆ ನೀಡಿರುವ ಭರವಸೆ ಈಡೇರಿಸಿ ಉತ್ತಮ ಆಡಳಿತ ನಡೆಸುತ್ತಿದ್ದಾರೋ ಅಥವಾ ಕತ್ತೆ ಕಾಯ್ತಾ ಇದ್ದಾರೋ?. ಇಂತಹ ಮಾತುತಪ್ಪಿದ ರಾಜಕಾರಣಿಗಳಿಗೆ ಹೋದಲ್ಲಿ, ಬಂದಲ್ಲೆಲ್ಲ ಹಾರ-ತುರಾಯಿ, ಮೆರವಣಿಗೆ....ತಮಗೆ ಬುದ್ಧಿ ಇಲ್ಲವೇ?...

ಬೆಂಗಳೂರು: ರಾಜಕಾರಣಿಗಳು ತಾವು ಜನರಿಗೆ ನೀಡಿರುವ ಭರವಸೆ ಈಡೇರಿಸಿ ಉತ್ತಮ ಆಡಳಿತ ನಡೆಸುತ್ತಿದ್ದಾರೋ ಅಥವಾ ಕತ್ತೆ ಕಾಯ್ತಾ ಇದ್ದಾರೋ?. ಇಂತಹ ಮಾತುತಪ್ಪಿದ
ರಾಜಕಾರಣಿಗಳಿಗೆ ಹೋದಲ್ಲಿ, ಬಂದಲ್ಲೆಲ್ಲ ಹಾರ-ತುರಾಯಿ, ಮೆರವಣಿಗೆ....ತಮಗೆ ಬುದ್ಧಿ ಇಲ್ಲವೇ? ಅಂತಹವರನ್ನು ಹಿಡಿದು ನಾಲ್ಕು ಬಾರಿಸಬೇಕು ಅನಿಸುವುದಿಲ್ಲವೇ? ಹೀಗೆಂದು ರಾಜಕಾರಣಿಗಳು ಹಾಗೂ ಜನರನ್ನು ತರಾಟೆಗೆ ತೆಗೆದುಕೊಂಡವರು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು. ರಾಜಕಾರಣಿಗಳು ಕೇವಲ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಅವುಗಳನ್ನು ಈಡೇರಿಸುವ ಗೋಜಿಗೆ ಹೋಗುವುದಿಲ್ಲ.
ಅಂತಹವರನ್ನು ಕಂಡರೆ ನಾಲ್ಕು ಬಾರಿಸಬೇಕು ಅನಿಸುತ್ತದೆ. ಆದರೆ, ಬುದ್ಧಿ ಇಲ್ಲದ ಜನ ಅವರು ಸಿಕ್ಕರೆ ಮಾಡುವ ಉಪಚಾರಕ್ಕೆ ಪಾರವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಹ್ಯಾದ್ರಿ ಸಂಘದಿಂದ `ಸಹ್ಯಾದ್ರಿ ಪ್ರಶಸ್ತಿ-2015' ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದ ಎಷ್ಟೇ ಪ್ರಯತ್ನಪಟ್ಟರೂ ಸರ್ಕಾರ, ಅಧಿಕಾರಿಗಳನ್ನು ಸರಿದಾರಿಗೆ ತರಲು ಆಗುತ್ತಿಲ್ಲ. ನಾಯಕರು ಕಥೆ ಹೇಳಿಕೊಂಡು ತಿರುಗುತ್ತಿದ್ದು, ಆದರೆ, ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಸುಧಾರಣೆ ಕಷ್ಟ ಎನಿಸುತ್ತಿದ್ದು, ಹೆಪ್ಪುಗಟ್ಟಿ ನಿಂತ ವ್ಯವಸ್ಥೆಯಾಗಿದೆ. ಹಾಗಾಗಿ ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ.
ಚುನಾವಣೆಯಲ್ಲಿ ಸುಮ್ಮನೆ ಸಿಕ್ಕಸಿಕ್ಕವರನ್ನು ಆರಿಸಿ ಕಳಿಸುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು. ಹದಗೆಟ್ಟ ಆಡಳಿತ ವ್ಯವಸ್ಥೆ ನೋವು ತಂದಿದೆ. ಹಾಗೆಂದ ಮಾತ್ರಕ್ಕೆ ಸುಮ್ಮನೆ ಕೂರಲು ಮನಸ್ಸಿಲ್ಲ. ನನ್ನ ದೃಷ್ಟಿ ಏನಿದ್ದರೂ ಜನರ ಮೇಲೆ. ಯಾರ ಮೇಲೂ ದ್ವೇಷವಿಲ್ಲ ಎಂದರು. ಪ್ರಗತಿಪರ ಕೃಷಿಕ ಕೆ.ಎಂ.ಮಲ್ಲಪ್ಪ ಹೆಗ್ಡೆ, ನಟಿ ನಭ, ಸಂಶೋಧನಾ ವಿದ್ಯಾರ್ಥಿ ನಿವೇದನ್ ಸೆಂಪೆ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


