ರಾಜಕೀಯ

ಬಿಜೆಪಿಗೆ ಆಪತ್ತು ತಂದ ಸಂಸದ, ಶಾಸಕರು!

ಬಿಜೆಪಿಗೆ ಏಕಾಏಕಿ ಎರಗಿರುವ ಈ ಆಪತ್ತಿಗೆ ಕಾರಣವಾಗಿದ್ದೇ ಬಿಜೆಪಿಯ ಸಂಸದರು, ಶಾಸಕರೇ ಎಂಬುದು ಅಚ್ಚರಿಯ ಸಂಗತಿ, ಬಿಜೆಪಿ 100 ಸ್ಥಾನ ಗಳಿಸುತ್ತಿದ್ದಂತೆ ಪಕ್ಷೇತರ ಸದಸ್ಯರ ಪೈಕಿ ಐವರು ಬಿಜೆಪಿಯ ಕದ ತಟ್ಟಿದ್ದರು...

ಬಿಜೆಪಿಗೆ ಆಪತ್ತು ತಂದ ಸಂಸದ, ಶಾಸಕರು!
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಬಿಜೆಪಿಗೆ ಏಕಾಏಕಿ ಎರಗಿರುವ ಈ ಆಪತ್ತಿಗೆ ಕಾರಣವಾಗಿದ್ದೇ ಬಿಜೆಪಿಯ ಸಂಸದರು, ಶಾಸಕರೇ ಎಂಬುದು ಅಚ್ಚರಿಯ ಸಂಗತಿ.

ಬಿಜೆಪಿ 100 ಸ್ಥಾನ ಗಳಿಸುತ್ತಿದ್ದಂತೆ ಪಕ್ಷೇತರ ಸದಸ್ಯರ ಪೈಕಿ ಐವರು ಬಿಜೆಪಿಯ ಕದ ತಟ್ಟಿದ್ದರು, ತಾವಾಗಿಯೇ ಪಕ್ಷದ ಕಚೇರಿಗೆ ಬಂದು ಬೆಂಬಲ ಸೂಚಿಸುವುದಾಗಿ ಹೇಳಿದ್ದರು. ಅಲ್ಲದೇ ಮುಖಂಡರೊಂದಿಗೆ ಉತ್ತಮ ರೀತಿಯಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ, ಹೇಗಿದ್ದರೂ ನಮಗೆ ಗರಿಷ್ಠ ಸ್ಥಾನ ಬಂದಿದೆ, ಕಾಂಗ್ರೆಸ್-ಜೆಡಿಎಸ್ ಒಂದಾಗಿ ಪೈಪೋಟಿ ನೀಡಲು ಸಾಧ್ಯವಿಲ್ಲವೆಂದರಿತ ಬಿಜೆಪಿ ಮುಖಂಡರು ಪಕ್ಷೇತರ ಸದಸ್ಯರಿಗೆ ಅಷ್ಟಾಗಿ ಮಣೆ ಹಾಕಲಿಲ್ಲ. ಆದರೆ, ಪರಿಸ್ಥಿತಿಯ ಸುಳಿವರಿತ ನಂತರ ಮಾತನಾಡಿದ್ದಾರೆ.

ಅಷ್ಟರಲ್ಲಾಗಲೇ ಬೆಂಗಳೂರಿನ ಸಂಸದರು ಒಬ್ಬ ಪಕ್ಷೇತರ ಪಾಲಿಕೆ ಸದಸ್ಯರ ವಿರುದ್ಧ ರೇಗಾಡಿದ್ದಾರೆ. ಅದೇ ರೀತಿ ಬೆಂಗಳೂರು ಉತ್ತರ ಭಾಗದ ಇಬ್ಬರು ಶಾಸಕರು ತಮ್ಮ ಭಾಗದ ಇಬ್ಬರು ಪಕ್ಷೇತರ ಸದಸ್ಯರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದರಿಂದ ರೋಸಿಹೋದ ಇಬ್ಬರು ಪಕ್ಷೇತರ ಸದಸ್ಯರು ಜೆಡಿಎಸ್‍ನ ಮೊರೆ ಹೋಗಿದ್ದಾರೆ. ಈ ಬೆಳವಣಿಗೆ ಬಿಜೆಪಿಯ ಒಳಗೂ ಪಸರಿಸಿದ್ದು, ಪಕ್ಷದ ಸಂಸದರು ಮತ್ತು ಶಾಸಕರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೇಗಾಡುವ ಅಗತ್ಯವೇನಿತ್ತು ಎಂಬ
ಟೀಕೆಗಳು ಕೇಳಿಬಂದಿವೆ.

ಬಿಜೆಪಿ ಲೆಕ್ಕಾಚಾರ

  • ಈಗಿನ ಮಾ್ಯಜಿಕ್ ನಂಬರ್ ಗೇಮ್ ಪ್ರಕಾರ ಎರಡು ಸ್ಥಾನಗಳ ಕೊರತೆ ಬೀಳಲಿದ್ದು, ಕನಿಷ್ಟ ಇಬ್ಬರು ಪಕ್ಷೇತರ ಕಾರ್ಪೊರೇಟರ್ ಮನವೊಲಿಸಿ ಬೆಂಬಲ ಪಡೆಯಲು ಪ್ರಯತ್ನಿಸಲಾಗುತ್ತದೆ.
  • ಪಕ್ಷೇತರ ಕಾರ್ಪೋರೇಟರ್‍ಗಳ ಪೈಕಿ ಮೂವರು ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದವರು. ಒಂದು ಹಂತಕ್ಕೆ ಅವರು ಬಿಜೆಪಿ ಮನಸ್ಥಿತಿಯಲ್ಲೇ ಇರುವವರು. ಅವರ ಮನವೊಲಿಕೆ ಕಷ್ಟವಾಗದು.
  • ಜೆಡಿಎಸ್ ನೊಂದಿಗೆ ಕೈಜೋಡಿಸಲು ಬಿಜೆಪಿ ಸಿದ್ಧವಿದೆ. ಈ ಅವಕಾಶ ಮುಚ್ಚಿದ ಬಾಗಿಲೇನಲ್ಲ ಎಂಬುದನ್ನು ಮುಖಂಡರು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ರಾಜ್ಯ ರಾಜಕೀಯದಲ್ಲಿ ನಡೆದ ಬೆಳವಣಿಗೆಯಂತೆ ಜೆಡಿಎಸ್ ಮೊರೆ ಹೋದರೂ ಅಚ್ಚರಿಯೇನಿಲ್ಲ.
  • ಮತದಾನ ಯಾರಿಗಿದೆ, ಯಾರಿಗಿಲ್ಲ ಎಂಬ ಗೊಂದಲ ಇನ್ನೂ ಇದೆ. ಹೀಗಾಗಿ ಸಮಗ್ರವಾಗಿ ಅವಲೋಕಿಸಿ ಮುಂದಿನ ಹೆಜ್ಜೆ ಇಡುವುದು.
  • ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪ್ರಾಥಮಿಕ ಹಂತದಲ್ಲೇ ಇರುವುದರಿಂದ, ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಕೊಡುವ ಸಾಧ್ಯತೆ ಕಡಿಮೆ ಎಂಬ ನಂಬಿಕೆಯಿಂದ ಕಾದು ನೋಡುವ ತಂತ್ರ ಅನುಸರಿಸುವುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.