ರಾಜಕೀಯ

ಶಾಸಕರನ್ನು ಖಾಲಿ ಕೂರಿಸಿದ ಸರ್ಕಾರ: ಜಗದೀಶ್ ಶೆಟ್ಟರ್ ಆರೋಪ

ಬಿಬಿಎಂಪಿ ಚುನಾವಣೆ ಮುಂದೂಡವ ದುರುದ್ದೇಶದಿಂದ ಕರೆದ ಈ ತುರ್ತು ಅಧಿವೇಶನ ವ್ಯರ್ಥ ಕಲಾಪವಾಯಿತು. ಸಮಯ, ಹಣವೂ ವ್ಯರ್ಥ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವ್ಯಾಖ್ಯಾನಿಸಿದ್ದಾರೆ...

ಶಾಸಕರನ್ನು ಖಾಲಿ ಕೂರಿಸಿದ ಸರ್ಕಾರ: ಜಗದೀಶ್ ಶೆಟ್ಟರ್ ಆರೋಪ
ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್
Published On :

ಬೆಂಗಳೂರು: ಬಿಬಿಎಂಪಿ ಚುನಾವಣೆ ಮುಂದೂಡವ ದುರುದ್ದೇಶದಿಂದ ಕರೆದ ಈ ತುರ್ತು ಅಧಿವೇಶನ ವ್ಯರ್ಥ ಕಲಾಪವಾಯಿತು. ಸಮಯ, ಹಣವೂ ವ್ಯರ್ಥ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವ್ಯಾಖ್ಯಾನಿಸಿದ್ದಾರೆ.

ಸದನ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಬಿಬಿಎಂಪಿ ವಿಭಜಿಸುವ ತಿದ್ದುಪಡಿ ವಿಧೇಯಕಕ್ಕಾಗಿ ವಿಶೇಷ ಅಧಿವೇಶನ ಅಗತ್ಯವಿರಲಿಲ್ಲ ಎಂದು ನಾವು ಮೊದಲ ದಿನವೇ ಹೇಳಿದ್ದೆವು. ಸರ್ಕಾರಕ್ಕೆ ಅಷ್ಟೊಂದು ಆಸಕ್ತಿ ಇದ್ದಿದ್ದರೆ ಬಜೆಟ್ ಅಧಿವೇಶನದಲ್ಲೇ ವಿಧೇಯಕಮಂಡನೆ ಮಾಡಬಹುದಾಗಿತ್ತು' ಎಂದರು. ವಿಧಾನಪರಿಷತ್‍ನ ಸೆಲೆಕ್ಟ್ ಕಮಿಟಿಯ ನಿರ್ಣಯವನ್ನು ನಾವು ಸ್ವಾಗತಿಸುತ್ತೇವೆ. ಮೂರು ತಿಂಗಳ ಅವಧಿಯಲ್ಲಿ ಪರಾಮರ್ಶೆ ನಡೆದು ವರದಿ ಬರುತ್ತದೆ. ಅಲ್ಲಿಯವರೆಗೂ ಈ ವಿಧೇಯಕದ ತಿದ್ದುಪಡಿ ವಿಚಾರದಲ್ಲಿ ಏನೂ ಮಾಡಲಾಗುವುದಿಲ್ಲ ಎಂದು ಹೇಳಿದರು.

ಒಟ್ಟಾರೆ 2 ದಿನಗಳ ಕಾಲ ಯಾವುದೇ ಚರ್ಚೆ ಇಲ್ಲದಂತೆ ವಿಧಾನಸಭೆಯಲ್ಲಿ ಶಾಸಕರು ಕಾಲಿ ಕುಳಿತಿದ್ದೆವು. 1994ರಿಂದ ಈ ಸದನದಲ್ಲಿ ಇಂತಹ ಪರಿಸ್ಥಿತಿ ನಾನು ನೋಡಿಲ್ಲ. ಚರ್ಚೆಗೆ ಯಾವುದೇ ವಿಷಯ ಇಲ್ಲದಂತೆ ಇಡೀ ಶಾಸಕರನ್ನು ಸರ್ಕಾರ ಖಾಲಿ ಕೂರಿಸಿತು. ಒಟ್ಟಾರೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಸರ್ಕಾರದ ತಪ್ಪು ನೀತಿ ಮತ್ತು ಸರ್ವಾಧಿಕಾರಿ ಧೋರಣೆ ಎಂದು ಅಭಿಪ್ರಾಯಪಟ್ಟರು. ಈ ಮಧ್ಯೆಯೇ ಚುನಾವಣೆ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರಿಂನಲ್ಲಿ ವಿಶೇಷ ಅರ್ಜಿ ಸಲ್ಲಿಸುವ ಪ್ರಯತ್ನ ಪ್ರಾರಂಭವಾಗಿದೆ ಎಂದರಲ್ಲದೇ, ಸುಪ್ರಿಂ ಏನು ಹೇಳುತ್ತದೋ ನೋಡೋಣ. 6 ತಿಂಗಳು ಸರ್ಕಾರಕ್ಕೆ ಚುನಾವಣೆ ನಡೆಸಲು ಅವಕಾಶ ಸಿಕ್ಕಿರಬಹುದು. ಆದರೆ, ತಕ್ಷಣವೇ ಬೆಂಗಳೂರನ್ನು ವಿಭಜಿಸುವ ಅವಕಾಶ ಸಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.

ವಿಧೇಯಕ ಪಾಸ್ ಆಗಿದ್ದರೆ ಬಿಬಿಎಂಪಿ ವಿಭಜನೆಯಾಗಿರುತ್ತಿತ್ತು. ಪರಿಷತ್ತಿನಲ್ಲಿ ವಿಧೇಯಕ ಪಾಸ್ ಆಗದೇ ಇದ್ದರೆ ಪುನಃ ಕೆಳಮನೆಯಲ್ಲಿ ಪುನಃ ಮಂಡನೆಯಾಗಿ ಪಾಸ್ ಆಗುತ್ತಿತ್ತು. ಇದೀಗ ಸೆಲೆಕ್ಟ್ ಕಮಿಟಿಗೆ ಒಪ್ಪಿಸಲಾಗಿರುವ ಕಾರಣ ಇನ್ನು ಮೂರು ತಿಂಗಳು ಪರಾಮರ್ಶೆಗೆ ಅವಕಾಶ ಸಿಕ್ಕಂತಾಗಿದೆ. ಸಾರ್ವಜನಿಕ ಚರ್ಚೆಗೂ ಅವಕಾಶವಾಗಿದೆ.

-ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.