ಅವರ ಮಕ್ಕಳಿಗೆ ರೇಪ್ ಆದ್ರೆ ಸುಮ್ನಿರ್ತಾರ?

ಬೆಂಗಳೂರು: ಸಿದ್ದರಾಮಯ್ಯನವರ ಮಗಳು ಸಿದ್ದಮ್ಮ, ಜಾರ್ಜ್ ಮಗಳು ಮೇರಿಯಮ್ಮನ ಮೇಲೆ ಅತ್ಯಾಚಾರ ಆದಾಗ ಮಾತ್ರ ಇವರು ಜಾಗೃತರಾಗುತ್ತಾರೆ. ಇಲ್ಲ, ಆಗಲೂ ಅನುಮಾನ...!
ಮಾಧ್ಯಮದವರು ಟಿಆರ್ಪಿ ಹೆಚ್ಚಳಕ್ಕಾಗಿ ಅತ್ಯಾಚಾರ ಪ್ರಕರಣಗಳನ್ನು ವೈಭವೀಕರಿಸುತ್ತಾ ಎಂದು ಗೃಹ ಮಂತ್ರಿ ನಾಚಿಕೆ ಬಿಟ್ಟು ಹೇಳುತ್ತಿದ್ದಾನೆ. ನಿನ್ನ ಮಗಳ ಮೇಲೆ ಅತ್ಯಾಚಾರ ಆಗಿದ್ದರೆ ಸುಮ್ಮನೆ ಇರುತ್ತಿದ್ದೆಯಾ? ಅವರ ಮಕ್ಕಳ ಮೇಲಾಗಲಿ ಬರೆಯವರ ಮಕ್ಕಳ ಮೇಲಾಗಲಿ ಅತ್ಯಾಚಾರ ಆಗಬಾರದು ಎಂದು ನಾನು ಬಯಸುತ್ತೇನೆ. ಆದರೆ ಅವರ ಮಕ್ಕಳ ಮೇಲೆ ಅತ್ಯಾಚಾರ ಆದಾಗಷ್ಟೇ ಅವರಿಗೆ ಅದರ ಗಾಂಭೀರ್ಯ ಅರ್ಥವಾಗುವುದೇನೋ...
ಇದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಅವರ ಆಣಿಮುತ್ತು. ಈಶ್ವರಪ್ಪ ಹೇಳಿಕೆ ಬಗ್ಗೆ ಕಾಂಗ್ರೆಸ್ನಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವರ ಮನೆ ಎದುರು ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಗಣಿಯಲ್ಲಿ ಸಚಿವರ ಪುತ್ರ
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ ಮಹಾದೇವಪ್ಪ ಅವರ ಪುತ್ರನೂ ಭಾಗಿಯಾಗಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ ಪ್ರತಿ ನನ್ನ ಬಳಿ ಇದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ನವೆಂಬರ್ 10ರಂದು ಮತ್ತೊಂದು ಪತ್ರಿಕಾಗೋಷ್ಠಿ ಕರೆದು ದಾಖಲೆ ಬಿಡುಗಡೆ ಮಾಡುತ್ತೇನೆ. ಜತೆಗೆ ಇನ್ನೊಬ್ಬ ಸಚಿವರ ಅಕ್ರಮ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


