ಸಿನಿಮಾ

ಸದ್ದಿಲ್ಲದೆ ಸದ್ದು ಮಾಡುತ್ತಿರುವ ಚಂದನವನದ ಚೆಲುವೆ ಸುಶ್ಮಿತಾ ದಾಮೋದರ್: ಫೋಟೊ ಗ್ಯಾಲರಿ 

ಮಾಡೆಲ್ ಆಗಿದ್ದ ಸುಶ್ಮಿತಾ ದಾಮೋದರ್ ‘ಡಾರ್ಕ್​ ಫ್ಯಾಂಟಿಸಿ’ ನಂತರ ಎರಡನೇ ಸಿನಿಮಾ ಪ್ರಾಜೆಕ್ಟ್ ‘ಆಡಿಸಿದಾತ’ ಬಗಲಿಗೇರಿಸಿಕೊಂಡಿದ್ದಾರೆ. ಸುಶ್ಮಿತಾ, ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಪ್ ಆಗಿದ್ದರು.

ಸದ್ದಿಲ್ಲದೆ ಸದ್ದು ಮಾಡುತ್ತಿರುವ ಚಂದನವನದ ಚೆಲುವೆ ಸುಶ್ಮಿತಾ ದಾಮೋದರ್: ಫೋಟೊ ಗ್ಯಾಲರಿ 
2019ರಲ್ಲಿ ಸುಶ್ಮಿತಾ ದಾಮೋದರ್ ಅಂತಾರಾಷ್ಟ್ರೀಯ ರೂಪದರ್ಶಿ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದರು.
Published On :
ಸುಶ್ಮಿತಾಗೆ ಆರಂಭದಲ್ಲಿ ಕಿರುತೆರೆಯ ಸಾಕಷ್ಟು ಅವಕಾಶಗಳು ಅರಸಿ ಬಂದಿದ್ದವು. ಆದರೆ, ಅವರ ಪ್ರಮುಖ ಆಸಕ್ತಿ ಕನ್ನಡ ಚಿತ್ರರಂಗ.

ಫಣೀಶ್ ಭಾರದ್ವಾಜ್ ನಿರ್ದೇಶನದ ‘ಡಾರ್ಕ್​ ಫ್ಯಾಂಟಸಿ’ ಸಿನಿಮಾ ಮೂಲಕ ಅವರಿಗೆ ಮೊದಲ ಸಿನಿಮಾ ಅವಕಾಶ ಸಿಕ್ಕಿತ್ತು.

‘ಡಾರ್ಕ್​ ಫ್ಯಾಂಟಸಿ’ ಸಿನಿಮಾ ಕೆಲಸ ಮುಗಿಯುತ್ತಿದ್ದಂತೆಯೇ ಫಣೀಶ್ ಅವರದೇ ಮತ್ತೊಂದು ಸಿನಿಮಾ 'ಆಡಿಸಿದಾತ'ದಲ್ಲಿ ಪ್ರಮುಖ ಪಾತ್ರಕ್ಕೆ ಸುಶ್ಮಿತಾ ಆಯ್ಕೆಯಾಗಿದ್ದಾರೆ.

ಇದರ ನಡುವೆ ಸುಶ್ಮಿತಾ ತೆಲುಗಿನ ‘ಚಾಯ್ ಕಹಾನಿ’ ಸಿನಿಮಾದಲ್ಲಿ ನಟಿಸುವುದಕ್ಕೆ ಸಹಿ ಮಾಡಿದ್ದಾರೆ.

ಪಕ್ಕಾ ಕಮರ್ಷಿಯಲ್ ಕಥೆ ಇರುವ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ‘ಪ್ರೇಮಂ ಪೂಜ್ಯಂ’ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ಮಾಡಿದ ಎಂ.ಎಸ್​. ತ್ಯಾಗರಾಜ್ ಅವರ ‘ಟ್ರುಥ್ ಆರ್ ಡೇರ್’ ಆಲ್ಬಂ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಈ ಹಾಡು ಬಿಡುಗಡೆಯಾಗಲಿದೆ.

ಜನರನ್ನು ತಲುಪಲು ಅವರ ಮನಸ್ಸಿನಲ್ಲಿ ಉಳಿಯುವಂಥ ಪಾತ್ರ ಮಾಡಬೇಕು ಎನ್ನುವುದು ಅವರ ಮಹದಾಸೆ.

ದೊಡ್ಡಮನೆಯ ಲಕ್ಷ್ಮೀ ಅಕ್ಕ ಮತ್ತು ಎಸ್​.ಎ ಗೋವಿಂದರಾಜು ಅವರು ಸಿನಿಮಾ ವಿಚಾರವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಸುಶ್ಮಿತಾ ಹರ್ಷ ವ್ಯಕ್ತಪಡಿಸುತ್ತಾರೆ.

ಶಾಲಾ ದಿನಗಳಿಂದಲೂ ನೃತ್ಯದ ಮೇಲೆ ಆಸಕ್ತಿ ಹೊಂದಿರುವ ಸುಶ್ಮಿತಾ, ಡಾನ್ಸ್​ನಲ್ಲಿಯೂ ಪರಿಣಿತಿ ಹೊಂದಿದ್ದಾರೆ.

ಸುಶ್ಮಿತಾಗೆ ಕಿರುತೆರೆಯ ಸಾಕಷ್ಟು ಅವಕಾಶಗಳು ಅರಸಿ ಬಂದಿದ್ದವು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.