ದೇಶ

ಪತಿ ಹುಸೇನ್ Video Call ರಿಸೀವ್ ಮಾಡ್ಲಿಲ್ಲಾ ಅಂತಾ ಬೇಸರಗೊಂಡ ಪತ್ನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ!

ಸುಮಾರು ಎರಡು ವರ್ಷಗಳ ಹಿಂದೆ ಮಹಬೂಬಾಬಾದ್‌ನ ಹೌಸಿಂಗ್‌ ಫೈನಾನ್ಸ್‌ ಮ್ಯಾನೇಜರ್‌ ಬನೋತ್‌ ಹುಸೇನ್‌ ಅವರನ್ನು ವಿವಾಹವಾಗಿದ್ದ ಅಖಿಲಾಗೆ ಚಿಕ್ಕ ಮಗುವಿತ್ತು.

ಪತಿ ಹುಸೇನ್ Video Call ರಿಸೀವ್ ಮಾಡ್ಲಿಲ್ಲಾ ಅಂತಾ ಬೇಸರಗೊಂಡ ಪತ್ನಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ!
ವಿವಾಹಿತ ಮಹಿಳೆ ಆತ್ಮಹತ್ಯೆ
Published On :

ಮಹಬೂಬಾಬಾದ್‌: ಪತಿ ವಿಡಿಯೋ ಕಾಲ್‌ ಸ್ವೀಕರಿಸದಿದ್ದಕ್ಕೆ ಮನನೊಂದು 20 ವರ್ಷದ ವಿವಾಹಿತ ಮಹಿಳೆಯೊಬ್ಬರು ಇಲಿ ಪಾಷಾಣ ಸೇವಿಸಿ ಮೃತಪಟ್ಟಿರುವ ದಾರುಣ ಘಟನೆ ತೆಲಂಗಾಣದ ಮಹಬೂಬಾಬಾದ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ವಾರಂಗಲ್‌ ಜಿಲ್ಲೆಯ ನೆಕ್ಕೊಂಡ ಮಂಡಲದ ಬೊಳ್ಳಿಕೊಂಡ ಗ್ರಾಮದ ಅಖಿಲಾ (20) ಎಂದು ಗುರುತಿಸಲಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಮಹಬೂಬಾಬಾದ್‌ನ ಹೌಸಿಂಗ್‌ ಫೈನಾನ್ಸ್‌ ಮ್ಯಾನೇಜರ್‌ ಬನೋತ್‌ ಹುಸೇನ್‌ ಅವರನ್ನು ವಿವಾಹವಾಗಿದ್ದ ಅಖಿಲಾಗೆ ಚಿಕ್ಕ ಮಗುವಿತ್ತು.

ಕುಟುಂಬಸ್ಥರ ಪ್ರಕಾರ, ಇತ್ತೀಚೆಗೆ ಅಖಿಲಾ ತನ್ನ ತವರು ಮನೆಯಲ್ಲಿದ್ದರು. ಸೆಪ್ಟೆಂಬರ್‌ 2ರಂದು ಮಗು ಅಳುತ್ತಿದ್ದ ವೇಳೆ, ತಂದೆಯೊಂದಿಗೆ ಮಾತನಾಡಿಸಲು ಪತಿಗೆ ವಿಡಿಯೋ ಕಾಲ್‌ ಮಾಡಲು ಅಖಿಲಾ ಪ್ರಯತ್ನಿಸಿದ್ದರು. ಆದರೆ ಹುಸೇನ್‌ ಕರೆ ಸ್ವೀಕರಿಸಲಿಲ್ಲ. ಇದರಿಂದ ಅಖಿಲಾ ತೀವ್ರವಾಗಿ ಬೇಸರಗೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಬಳಿಕ ಅಖಿಲಾ ಮಹಬೂಬಾಬಾದ್‌ ಪಟ್ಟಣದಲ್ಲಿರುವ ಅತ್ತೆ-ಮಾವನ ಮನೆಗೆ ವಾಪಸ್‌ ಬಂದಿದ್ದರು. ಅಲ್ಲಿ ಅವರು ಇಲಿ ಪಾಷಾಣ ಸೇವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕಿತ್ಸೆ ಫಲಿಸದೆ ಸಾವು

ಅಖಿಲಾ ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ನಡುವೆಯೇ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಸೋಮವಾರ ಮುಂಜಾನೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ಅಖಿಲಾ ವಿಷ ಸೇವಿಸಲು ಕಾರಣವಾದ ಸಂಪೂರ್ಣ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣದ ವಿವಿಧ ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.