ದೇಶ

ಒಂದು ಚಿಕ್ಕ ಪ್ರಯತ್ನ: ಒಂಟಿಯಾಗಿ ನದಿ ಸ್ವಚ್ಛಗೊಳಿಸಿದ್ದ 20 ವರ್ಷದ ಭಾರತೀಯ ಯುವಕನಿಗೆ ಡಚ್ ಸಿಇಒನಿಂದ ಕೆಲಸದ ಆಫರ್!

ಜನರು ಸಾಮಾನ್ಯವಾಗಿ ನದಿಯಲ್ಲಿನ ಕೊಳಕನ್ನು ನೋಡಿ ನಿರ್ಲಕ್ಷಿಸಿದರೆ ಮಧ್ಯಪ್ರದೇಶದ 20 ವರ್ಷದ ಬಿಟ್ಟು ತಬಾಯಿ ಇದಕ್ಕೆ ವಿರುದ್ಧವಾಗಿ ನಡೆದುಕೊಂಡರು. ಅಜ್ನರ್ ನದಿಯಲ್ಲಿನ ಕೊಳಕನ್ನು ನೋಡಿ, ಅದನ್ನು ಸ್ವಚ್ಛಗೊಳಿಸಿದ್ದರು.

ಒಂದು ಚಿಕ್ಕ ಪ್ರಯತ್ನ: ಒಂಟಿಯಾಗಿ ನದಿ ಸ್ವಚ್ಛಗೊಳಿಸಿದ್ದ 20 ವರ್ಷದ ಭಾರತೀಯ ಯುವಕನಿಗೆ ಡಚ್ ಸಿಇಒನಿಂದ ಕೆಲಸದ ಆಫರ್!
ಬೋಯನ್ ಸ್ಲಾಟ್, ಬಿಟ್ಟು ತಬಾಯಿ
Published On :

ಜನರು ಸಾಮಾನ್ಯವಾಗಿ ನದಿಯಲ್ಲಿನ ಕೊಳಕನ್ನು ನೋಡಿ ನಿರ್ಲಕ್ಷಿಸಿದರೆ ಮಧ್ಯಪ್ರದೇಶದ 20 ವರ್ಷದ ಬಿಟ್ಟು ತಬಾಯಿ ಇದಕ್ಕೆ ವಿರುದ್ಧವಾಗಿ ನಡೆದುಕೊಂಡರು. ಅಜ್ನರ್ ನದಿಯಲ್ಲಿನ ಕೊಳಕನ್ನು ನೋಡಿ, ಅದನ್ನು ಸ್ವಚ್ಛಗೊಳಿಸಲು ನಿರ್ಧರಿಸಿದ್ದು ಆ ಗುರಿಯನ್ನು ಸಾಧಿಸಿದರು. ಬಿಟ್ಟು ತಬಾಯಿ ಎಂದೂ ಕರೆಯಲ್ಪಡುವ ಸುರೇಂದ್ರ ಸಿಂಗ್ ಚೌಧರಿ ತಮ್ಮ ಕೆಲಸಕ್ಕಾಗಿ ಖ್ಯಾತಿ ಗಳಿಸುತ್ತಿದ್ದಾರೆ. ಅವರ ಸ್ವಚ್ಛತಾ ಕಾರ್ಯದ ವೀಡಿಯೊ ವೈರಲ್ ಆಗಿದ್ದು, ಎಲ್ಲರೂ ಹೊಗಳಿದರು. ಇದಲ್ಲದೆ, ದಿ ಓಷನ್ ಕ್ಲೀನಪ್‌ನ ಸಂಸ್ಥಾಪಕ ಮತ್ತು ಸಿಇಒ ಬೋಯನ್ ಸ್ಲಾಟ್, ಬಿಟ್ಟು ತಬಾಯಿ ಅವರನ್ನು ಹೊಗಳಿದ್ದು ತಮ್ಮ ಜೊತೆ ಕೆಲಸ ಮಾಡಲು ಬರುವಂತೆ ಆಹ್ವಾನಿಸಿದರು.

ದಿ ಓಷನ್ ಕ್ಲೀನಪ್ ಸಾಗರಗಳು ಮತ್ತು ನದಿಗಳಲ್ಲಿನ ಪ್ಲಾಸ್ಟಿಕ್ ಮಾಲಿನ್ಯವನ್ನು ಪರಿಹರಿಸಲು ಕೆಲಸ ಮಾಡುತ್ತದೆ. ಇದು ನೆದರ್‌ಲ್ಯಾಂಡ್ಸ್‌ನಲ್ಲಿದೆ. ಸ್ಲಾಟ್ ಎಕ್ಸ್‌ನಲ್ಲಿ ಬಳಕೆದಾರರ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಾ, "ನಮ್ಮೊಂದಿಗೆ ಕೆಲಸ ಮಾಡಿ" ಎಂದು ಬರೆದಿದ್ದಾರೆ. ವಾಸ್ತವವಾಗಿ, 'ಬಿಟ್ಟು ತಬಾಹಿ' ಫೋಟೋವನ್ನು ಹಂಚಿಕೊಳ್ಳುವಾಗ, ಈ ಬಳಕೆದಾರರು "'ಬಿಟ್ಟು ತಬಾಹಿ' ಎಂದು ಕರೆಯಲ್ಪಡುವ 20 ವರ್ಷದ ಭಾರತೀಯ ಯುವಕ ಸುರೇಂದ್ರ ಸಿಂಗ್ ಚೌಧರಿ ಹಲವಾರು ತಿಂಗಳುಗಳಿಂದ ಅಜ್ನರ್ ನದಿಯನ್ನು ಸ್ವತಃ ಸ್ವಚ್ಛಗೊಳಿಸುತ್ತಿದ್ದಾರೆ" ಎಂದು ಬರೆದಿದ್ದಾರೆ. ಈ ಪೋಸ್ಟ್‌ಗೆ ಸ್ಲಾಟ್ ಪ್ರತಿಕ್ರಿಯಿಸಿದ್ದಾರೆ.

ಅಜ್ನರ್ ನದಿ ಎಲ್ಲಿದೆ?

ಅಜ್ನರ್ ನದಿಯು ರಾಜ್‌ಗಢ ಜಿಲ್ಲೆಯ ಅಂಡಲ್ಹೇರಾ ಗ್ರಾಮದಿಂದ ಹುಟ್ಟುತ್ತದೆ. ಒಂದು ಕಾಲದಲ್ಲಿ, ಅದರ ನೀರು ಸಾಕಷ್ಟು ಸ್ವಚ್ಛವಾಗಿತ್ತು. ಆದರೆ ಕ್ರಮೇಣ, ನದಿಯ ಮಾಲಿನ್ಯ ಹೆಚ್ಚಾಯಿತು. ಅದರ ಸ್ಥಿತಿ ಹದಗೆಟ್ಟಿತು. ಜನರು ಅಲ್ಲಿ ಕಸವನ್ನು ಸುರಿಯಲು ಪ್ರಾರಂಭಿಸಿದರು. ಜನವರಿ 26ರಂದು ಬಿಟ್ಟು ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದ್ದು ಈಗ ನದಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ.

ಎಲ್ಲರೂ ಬಿಟ್ಟು ಅವರ ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತಿದ್ದಾರೆ. ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಬಿಟ್ಟು ಅವರನ್ನು ಹೊಗಳಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಬಿಟ್ಟು ಅವರನ್ನು ಭೇಟಿಯಾಗಿ ಸಭೆಯ ವೀಡಿಯೊವನ್ನು ಹಂಚಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.