ದೇಶ

ಶಾಸಕನ ಮನೆ ಬಳಿ ಬಾಂಬ್ ದಾಳಿ: ಮಣಿಪುರ ಕಾಂಗ್ರೆಸ್ ಸಿಎಲ್‌ಪಿ ನಾಯಕ ಮೇಘಚಂದ್ರ ಸಿಂಗ್ ಮನೆ ಗೇಟ್ ಬಳಿ ಹ್ಯಾಂಡ್ ಗ್ರೆನೇಡ್ ಸ್ಫೋಟ

ಮಣಿಪುರದಲ್ಲಿ ಬೆಚ್ಚಿಬೀಳಿಸಿದ ಘಟನೆ: ಜನಾಂಗೀಯ ಸಂಘರ್ಷದ ನಡುವೆ ಕಾಂಗ್ರೆಸ್ ಸಿಎಲ್‌ಪಿ ನಾಯಕ ಮೇಘಚಂದ್ರ ಸಿಂಗ್ ಮನೆ ಗೇಟ್ ಬಳಿ ಹ್ಯಾಂಡ್ ಗ್ರೆನೇಡ್ ಸ್ಫೋಟ; ಅದೃಷ್ಟವಶಾತ್ ಪ್ರಾಣಹಾನಿ ಇಲ್ಲ, ಭದ್ರತಾ ಪಡೆಗಳಿಂದ ತೀವ್ರ ಶೋಧ.

ಶಾಸಕನ ಮನೆ ಬಳಿ ಬಾಂಬ್ ದಾಳಿ: ಮಣಿಪುರ ಕಾಂಗ್ರೆಸ್ ಸಿಎಲ್‌ಪಿ ನಾಯಕ ಮೇಘಚಂದ್ರ ಸಿಂಗ್ ಮನೆ ಗೇಟ್ ಬಳಿ ಹ್ಯಾಂಡ್ ಗ್ರೆನೇಡ್ ಸ್ಫೋಟ
ಕಾಂಗ್ರೆಸ್ ಶಾಸಕನ ಮನೆ ಬಳಿ ಬಾಂಬ್ ದಾಳಿ — Online Desk
Published On :

ತೌಬಾಲ್ (ಮಣಿಪುರ): ಕಳೆದ ಮೂರು ವರ್ಷಗಳಿಂದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಹೊತ್ತಿ ಉರಿಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಇದುವರೆಗೂ 306 ಮಂದಿ ಮೃತಪಟ್ಟಿದ್ದು, 49 ಮಂದಿ ನಾಪತ್ತೆಯಾಗಿದ್ದಾರೆ. ಒಮ್ಮೆ ರಾಷ್ಟ್ರಪತಿ ಆಳ್ವಿಕೆ ಏರಿ, ರಾಜ್ಯ ಸಹಜ ಸ್ಥಿತಿಯತ್ತ ಬರುತ್ತಿದೆ ಎಂದು ಪುನಃ ಸರ್ಕಾರ ಸ್ಥಾಪನೆಯದ್ರು ಮಾತ್ರ ರಾಜ್ಯದಲ್ಲಿ ರಕ್ತಸಿಕ್ತ ಅಧ್ಯಾಯ ಕಡಿಮೆ ಆಗಿಲ್ಲ; ಹೌದು, ಕಾಂಗ್ರೆಸ್ ಶಾಸಕ ಹಾಗೂ ಸಿಎಲ್‌ಪಿ ನಾಯಕ ಕೇಲ್ಶಮ್ ಮೇಘಚಂದ್ರ ಸಿಂಗ್ ಅವರ ನಿವಾಸದ ಬಳಿಯೇ ಬಾಂಬ್ ಸ್ಫೋಟವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಯಾವಾಗ ನಡೆಯುಯಿತು ಈ ಸ್ಪೋಟ?

ಮಣಿಪುರದ ತೌಬಾಲ್ ಜಿಲ್ಲೆಯ ಯೈರಿಪೋಕ್ ಪ್ರದೇಶದ ಬಿಷ್ಣುನಾಹಾದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕ ಕೇಲ್ಶಮ್ ಮೇಘಚಂದ್ರ ಸಿಂಗ್ ಅವರ ನಿವಾಸದ ಮುಖ್ಯ ಗೇಟ್ ಬಳಿ ಶಂಕಿತ ಹ್ಯಾಂಡ್ ಗ್ರೆನೇಡ್ ಸ್ಫೋಟಗೊಂಡಿದೆ. ಗುರುವಾರ ರಾತ್ರಿ ಸುಮಾರು 8:15 ಗಂಟೆಗೆ ಈ ಘಟನೆ ನಡೆದಿದೆ. ಮಣಿಪುರದ ತೌಬಲ್ ಜಿಲ್ಲೆಯ ಯೈರಿಪೋಕ್ ಬಿಷ್ಣುನಾಹಾ ಪ್ರದೇಶದಲ್ಲಿರುವ ಶಾಸಕರ ಸ್ವಂತ ನಿವಾಸದ ಮುಖ್ಯ ಗೇಟ್ ಬಳಿಯೇ ಈ ಸ್ಫೋಟ ಸಂಭವಿಸಿದೆ.

ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ, ಬೈಕ್ ಅಥವಾ ವಾಹನದಲ್ಲಿ ಬಂದ ಅಪರಿಚಿತ ದುಷ್ಕರ್ಮಿಯೊಬ್ಬ ಶಾಸಕರ ಮನೆಯ ಗೇಟ್ ಗುರಿಯಾಗಿಸಿ ಹ್ಯಾಂಡ್ ಗ್ರೆನೇಡ್ (ಕೈಬಾಂಬ್) ಎಸೆದು ಪರಾರಿಯಾಗಿದ್ದಾನೆ. ಇನ್ನು, ಸ್ಫೋಟದ ಸದ್ದು ಸುತ್ತಮುತ್ತಲಿನ ಪರಿಸರವನ್ನು ನಡುಗಿಸಿದ್ದು, ಮನೆಯ ಒಳಗಿದ್ದ ಶಾಸಕ ಮೇಘಚಂದ್ರ ಸಿಂಗ್ ಅವರು ತೀವ್ರ ಆತಂಕ ಹಾಗೂ ಭೀತಿಯಿಂದ ತಾವು ಧರಿಸಿದ್ದ ಬಟ್ಟೆಯಲ್ಲೇ ತಕ್ಷಣವೇ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಅದೃಷ್ಟವಶಾತ್, ಬಾಂಬ್ ಗೇಟ್‌ನ ಹೊರಭಾಗದಲ್ಲಿ ಸ್ಫೋಟಗೊಂಡಿದ್ದರಿಂದ ಶಾಸಕರಿಗಾಗಲಿ, ಅವರ ಕುಟುಂಬದವರಿಗಾಗಲಿ ಅಥವಾ ಅಲ್ಲಿ ಭದ್ರತೆಯಲ್ಲಿದ್ದ ಸಿಬ್ಬಂದಿಗಾಗಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.

ಮುಂದುವರೆದು,  ಸ್ಫೋಟದ ತಕ್ಷಣವೇ ಯೈರಿಪೋಕ್ ಪೊಲೀಸ್ ಠಾಣೆಯ ಉನ್ನತ ಅಧಿಕಾರಿಗಳು ಮತ್ತು ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಇಡೀ ಪ್ರದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದುಷ್ಕರ್ಮಿಗಳ ಪತ್ತೆಗೆ ವಿಶೇಷ ಶೋಧ ಕಾರ್ಯ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.