ಲೇಹ್‌ನಲ್ಲಿ ಚೀತಾ ಹೆಲಿಕಾಪ್ಟರ್ ಅಪಘಾತ: ಪವಾಡಸದೃಶ್ಯ ಬದುಕುಳಿದ ಮೇಜರ್ ಜನರಲ್; ಸೆಲ್ಫಿ ವೈರಲ್!
ಲಡಾಖ್‌ನ ಲೇಹ್ ಬಳಿಯ ಪರ್ವತ ಟ್ಯಾಂಗ್ಸ್ಟೆ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಿಂದ ಮೂವರು ಭಾರತೀಯ ಸೇನಾ ಅಧಿಕಾರಿಗಳು ಸ್ವಲ್ಪದರಲ್ಲಿ ಪಾರಾಗಿದ್ದಾರೆ.

ಲಡಾಖ್‌ನ ಲೇಹ್ ಬಳಿಯ ಪರ್ವತ ಟ್ಯಾಂಗ್ಸ್ಟೆ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಿಂದ ಮೂವರು ಭಾರತೀಯ ಸೇನಾ ಅಧಿಕಾರಿಗಳು ಸ್ವಲ್ಪದರಲ್ಲಿ ಪಾರಾಗಿದ್ದಾರೆ. ನೌಕಾಪಡೆ ಹಳೆಯ ಚೀತಾ ಹೆಲಿಕಾಪ್ಟರ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್ ಸೇರಿದಂತೆ ಇಬ್ಬರು ಮೇಜರ್ ಜನರಲ್ ಇದ್ದರು.
ಸಿಂಗಲ್ ಎಂಜಿನ್ ಹೆಲಿಕಾಪ್ಟರ್ ಅನ್ನು ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಜನರಲ್ ಪೈಲಟ್ ಮಾಡಿದ್ದರೆ, 3ನೇ ಪದಾತಿ ದಳದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಸಚಿನ್ ಮೆಹ್ತಾ ಪ್ರಯಾಣಿಕರಾಗಿದ್ದರು. ಹೆಲಿಕಾಪ್ಟರ್ ದುರಂತದಲ್ಲಿ ಮೂವರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಅಪಘಾತದ ನಂತರ ಮೇಜರ್ ಜನರಲ್ ಮೆಹ್ತಾ ಮತ್ತು ಇತರ ಇಬ್ಬರು ಅಧಿಕಾರಿಗಳ ಸೆಲ್ಫಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಚೀತಾ ಹೆಲಿಕಾಪ್ಟರ್ ಬಗ್ಗೆ ಎದ್ದಿರುವ ಪ್ರಶ್ನೆಗಳು
ತೀವ್ರವಾಗಿ ಹಾನಿಗೊಳಗಾದ ಹೆಲಿಕಾಪ್ಟರ್ ಬಳಿ ಬಂಡೆಗಳ ಮೇಲೆ ಅವರು ಕುಳಿತಿರುವುದನ್ನು ಫೋಟೋ ತೋರಿಸುತ್ತದೆ. ಪರ್ವತ ಪರಿಸರ ಮತ್ತು ಹಳೆಯ ಚೀತಾ ಹೆಲಿಕಾಪ್ಟರ್‌ಗಳ ಸ್ಥಿತಿಯನ್ನು ಗಮನಿಸಿದರೆ, ಅವರ ಬದುಕುಳಿಯುವಿಕೆಯನ್ನು ಪವಾಡವೆಂದು ಪರಿಗಣಿಸಲಾಗಿದೆ. ಅಪಘಾತದ ಕಾರಣದ ಬಗ್ಗೆ ಅಧಿಕೃತ ತನಿಖೆಗೆ ಆದೇಶಿಸಲಾಗಿದೆ.
ಲೇಹ್ ಅಪಘಾತವು ಚೀತಾ ಹೆಲಿಕಾಪ್ಟರ್‌ಗಳ ಸುರಕ್ಷತೆಯ ಬಗ್ಗೆ ಮತ್ತಷ್ಟು ಕಳವಳವನ್ನು ಮೂಡಿಸಿದೆ. ಈ ಇತ್ತೀಚಿನ ಅಪಘಾತವು ಚೀತಾ ಹೆಲಿಕಾಪ್ಟರ್‌ಗಳ ಸುರಕ್ಷತೆಯ ಕುರಿತಾದ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಅವುಗಳನ್ನು ಮೊದಲು 1970 ರ ದಶಕದಲ್ಲಿ ಸೈನ್ಯಕ್ಕೆ ಸೇರಿಸಲಾಯಿತು. ಸಿಯಾಚಿನ್ ಹಿಮನದಿಯಲ್ಲಿ ಪಾಕಿಸ್ತಾನಿ ಪಡೆಗಳ ವಿರುದ್ಧ ಹೋರಾಡಲು 1984 ರಲ್ಲಿ ಪ್ರಾರಂಭಿಸಲಾದ ಆಪರೇಷನ್ ಮೇಘದೂತ್‌ನ ಭಾಗವೂ ಆಗಿದ್ದವು. ಇದೀಗ ಕೆಲಸ ವರ್ಷಗಳಿಂದ ಹಲವು ಚೀತಾ ಹೆಲಿಕಾಪ್ಟರ್ ಗಳು ಅಪಘಾತಕ್ಕೀಡಾಗುತ್ತಿವೆ.
ವರದಿಗಳ ಪ್ರಕಾರ, ಸೇನೆಯು ಆರು LUH ಹೆಲಿಕಾಪ್ಟರ್‌ಗಳನ್ನು ಬಳಸುತ್ತಿದೆ. ಇವು ಗರಿಷ್ಠ 220 ಕಿಮೀ/ಗಂ ವೇಗ, 6.5 ಕಿಮೀ ಸೇವಾ ಸೀಲಿಂಗ್ ಮತ್ತು 350 ಕಿಮೀ ಕಾರ್ಯಾಚರಣೆಯ ವ್ಯಾಪ್ತಿಯನ್ನು ತಲುಪಲು ವಿನ್ಯಾಸಗೊಳಿಸಲಾಗಿದೆ. 5 ಆಸನಗಳ ಚೀತಾ ಹೆಲಿಕಾಪ್ಟರ್ ಅನ್ನು ವಿಶ್ವದ ಅತ್ಯುತ್ತಮ ಎತ್ತರದ ಹೆಲಿಕಾಪ್ಟರ್‌ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



