ದೇಶ

CJP ಪಾಕಿಸ್ತಾನ ಜನತಾ ಪಾರ್ಟಿ, ಅಭಿಜೀತ್ ದಿಪ್ಕೆ ISI ಏಜೆಂಟ್! ಏನಿದು BJP ಆರೋಪ?

CJP ಇನ್‌ಸ್ಟಾಗ್ರಾಮ್‌ನಲ್ಲಿ ವಿಶ್ವದ ಅತಿದೊಡ್ಡ ಪಕ್ಷವಾದ ಬಿಜೆಪಿಯನ್ನು ಹಿಂದಿಕ್ಕಿ, ಕೇವಲ ಒಂದು ವಾರದಲ್ಲಿ 20 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವುದರಿಂದ ಡಿಪ್ಕೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆಗಳು, ಆರೋಪಗಳು ಕೇಳಿಬರುತ್ತಿದ್ದು, ಅವುಗಳಿಗೆ ಸ್ಪಷ್ಪೀಕರಣ ನೀಡುತ್ತಿದ್ದಾರೆ.

CJP ಪಾಕಿಸ್ತಾನ ಜನತಾ ಪಾರ್ಟಿ, ಅಭಿಜೀತ್ ದಿಪ್ಕೆ ISI ಏಜೆಂಟ್! ಏನಿದು BJP ಆರೋಪ?
ಅಭಿಜೀತ್ ದಿಪ್ಕೆ
Published On :

ನವದೆಹಲಿ: ಸದ್ಯ ವೈರಲ್ ಆಗುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದಿಪ್ಕೆ ಸರಿಯಾಗಿ ನಿದ್ರೆ ಮಾಡಲು ಆಗುತ್ತಿಲ್ಲ. ಅವರ ವಿರುದ್ಧ ಟೀಕೆಗಳು, ಆರೋಪಗಳು, ಬೆದರಿಕೆಗಳು ಹೆಚ್ಚಾಗುತ್ತಿವೆ.

CJP ಇನ್‌ಸ್ಟಾಗ್ರಾಮ್‌ನಲ್ಲಿ ವಿಶ್ವದ ಅತಿದೊಡ್ಡ ಪಕ್ಷವಾದ ಬಿಜೆಪಿಯನ್ನು ಹಿಂದಿಕ್ಕಿ, ಕೇವಲ ಒಂದು ವಾರದಲ್ಲಿ 20 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವುದರಿಂದ ಡಿಪ್ಕೆ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆಗಳು, ಆರೋಪಗಳು ಕೇಳಿಬರುತ್ತಿದ್ದು, ಅವುಗಳಿಗೆ ಸ್ಪಷ್ಪೀಕರಣ ನೀಡುತ್ತಿದ್ದಾರೆ.

CJP ಯ ಹೆಚ್ಚಿನ ಫಾಲೋವರ್ಸ್ ಗಳಲ್ಲಿ ಹೆಚ್ಚಿನವರು ಪಾಕ್ ಮೂಲದವರು ಎಂಬ ಹೊಸ ಆರೋಪ ಕೇಳಿಬಂದಿದೆ. ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಜಿಂದರ್ ಬಗ್ಗಾ ಮತ್ತು ಪಕ್ಷದ ವಕ್ತಾರರು ಈ ರೀತಿಯ ಆರೋಪ ಮಾಡಿದ್ದಾರೆ.

ಇದನ್ನು "ಪಾಕಿಸ್ತಾನ ಜನತಾ ಪಾರ್ಟಿ" ಎಂದು ಕರೆದ ಬಗ್ಗಾ, ಕಾಕ್ರೋಚ್ ಪಕ್ಷದ ದೇಶವಾರು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಎಂದು ಹೇಳಿಕೊಂಡವರ ಡೇಟಾವನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನ ಶೇ. 49, ಯುಎಸ್ (14%) ಮತ್ತು ಬಾಂಗ್ಲಾದೇಶ (14%) ನಾಗರಿಕರೊಂದಿಗೆ ಇನ್ಸಾಟಾದ ಫಾಲೋವರ್ಸ್ ಗಳಲ್ಲಿ ಶೇ. 77 ರಷ್ಟು ಮಂದಿ ಹೊರಗಿನವರು ಎಂಬುದನ್ನು ತೋರಿಸಿದೆ. ಈ ಡೇಟಾದ ಪ್ರಕಾರ ಕೇವಲ ಶೇ. 9 ರಷ್ಟು ಫಾಲೋವರ್ಸ್ ಗಳೊಂದಿಗೆ ಭಾರತವು ನಾಲ್ಕನೇ ಸ್ಥಾನದಲ್ಲಿದೆ.

ಕಾಕ್ರೋಚ್ ಪಕ್ಷ ಮತ್ತು ಪಾಕಿಸ್ತಾನ ಫಾಲೋವರ್ಸ್: ಈ ಡೇಟಾವನ್ನು ಬಿಜೆಪಿ ನಾಯಕಿ ಪ್ರೀತಿ ಗಾಂಧಿ ಕೂಡ ಪ್ರಸ್ತಾಪಿಸಿದ್ದಾರೆ. ನಿಮ್ಮ ದೊಡ್ಡ ಅಭಿಮಾನಿ ಬಳಗವು ಗಡಿಯಾಚೆ, ಶತ್ರು ರಾಷ್ಟ್ರದಲ್ಲಿ ಕುಳಿತಿರುವಾಗ, ನೀವು ನಿಜವಾಗಿಯೂ ಯಾರ ಪರವಾಗಿ ಮಾತನಾಡುತ್ತಿರುವುದಾಗಿ ನಟಿಸುತ್ತಿರುವಿರೋ ಅದನ್ನು ನಿಲ್ಲಿಸುವ ಸಮಯ ಬಂದಿದೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಷ್ಟೇ ಅಲ್ಲದೇ Cjpಯ ಹಲವಾರು ಬಳಕೆದಾರರು ವಿದೇಶದಿಂದ ನಿಷ್ಕ್ರಿಯ ಖಾತೆಗಳಾಗಿರಬಹುದು ಎಂದಿದ್ದಾರೆ.ಇನ್‌ಸ್ಟಾಗ್ರಾಮ್‌ನಲ್ಲಿ ಕಾಕ್ರೋಚ್ ಪಕ್ಷದ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿದ್ದರೂ, X ನಲ್ಲಿ ಹೆಚ್ಚಳ ಕಂಡುಬಂದಿಲ್ಲ.

ಕುತೂಹಲಕಾರಿ ಸಂಗತಿ ಏನೆಂದರೆ, ಕೇಂದ್ರದ ನಿರ್ದೇಶನದ ನಂತರ ಗುರುವಾರ ಭಾರತದಲ್ಲಿ CJP ಯ X ಹ್ಯಾಂಡಲ್ ಅನ್ನು ತಡೆಹಿಡಿಯಲಾಗಿದೆ. ಗುಪ್ತಚರ ಇಲಾಖೆಯ ನಿರ್ದೇಶನದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Story image

ಅಭಿಜಿತ್ ಡಿಪ್ಕೆ ISI ಏಜೆಂಟಾ?

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಗೆ ವಿರೋಧವಾಗಿ ಕಳೆದ ವಾರ ಆರಂಭವಾದ ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅಭಿಜಿತ್ ಡಿಪ್ಕೆ ವಿರುದ್ಧ ಟೀಕೆಗಳು, ಆರೋಪಗಳು, ಬೆದರಿಕೆಗಳು ಹೆಚ್ಚಾಗುತ್ತಿದೆ ಎನ್ನಲಾಗಿದೆ. ಪುಣೆ ಮೂಲಕ ಡಿಪ್ಕೆ ಈಗ ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರು ಈ ಹಿಂದೆ ಎಎಪಿಯೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ಡಿಪ್ಕೆ ವಿರುದ್ಧ ಮತ್ತೆ ಬಂದಿರುವ ಪ್ರಮುಖ ಆರೋಪವೆಂದರೆ ಅವರು "ಐಎಸ್ಐ ಏಜೆಂಟ್ ಎಂದು ಬಿಜೆಪಿ ನಾಯಕ ತಜಿಂದರ್ ಬಗ್ಗಾ ಸೇರಿದಂತೆ ಹಲವರು ಆರೋಪಿಸಿದ್ದು, ಈ ಸಂಬಂಧ ಕಾನೂನು ಹಕ್ಕುಗಳ ವೀಕ್ಷಣಾಲಯ (ಎಲ್‌ಆರ್‌ಒ) ಸಲ್ಲಿಸಿದ 2019 ರ ದೂರನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನಕ್ಕೆ ಸಂಬಂಧಿಸಿದ ಪ್ರಚೋದನಕಾರಿ ವಿಷಯವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸಿದ್ದರಿಂದ ಈ ದೂರು ದಾಖಲಿಸಲಾಗಿತ್ತು.

ದೂರಿನಲ್ಲಿ ದಿಪ್ಕೆ ಅವರನ್ನು ಪುಣೆ ಎಎಪಿ ನಾಯಕ ಎಂದು ಉಲ್ಲೇಖಿಸಿಲಾಗಿದ್ದು,"ಸುಳ್ಳು ಪ್ರಚಾರ" ಮತ್ತು "ಹುರಿಯತ್ ಶೈಲಿಯ ಪ್ರತ್ಯೇಕತಾವಾದ"ವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಯುಎಪಿಎ ಅಡಿಯಲ್ಲಿ ಅವರನ್ನು ಬಂಧಿಸುವಂತೆ ಪೊಲೀಸರಲ್ಲಿ ಮನವಿ ಮಾಡಲಾಗಿತ್ತು. ಆದರೆ, ದೂರು ಮುಂದುವರೆಯಲಿಲ್ಲ. ಇದು ಆರೋಪವಾಗಿಯೇ ಉಳಿದಿದೆ. ದಿಪ್ಕೆ "ಐಎಸ್‌ಐ ಏಜೆಂಟ್ ಎಂದು ತನಿಖಾ ಸಂಸ್ಥೆಗಳು ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ.

ಈಗ ಅವರು ಸ್ಥಾಪಿಸಿದ ಕಾಕ್ರೋಜ್ ಜನತಾ ಪಾರ್ಟಿ ವಿಡಂಬನೆಯಾಗಿ ಪ್ರಾರಂಭವಾಗಿದ್ದರೂ, ಅದು ಬೇಗನೆ ಭಾರತದ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ.

Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.