ದೇಶ

ನನಗೆ ಪಾಕ್, ಬಾಂಗ್ಲಾದಿಂದ ಕೊಲೆ ಬೆದರಿಕೆ: ಪ್ರಧಾನಿ ಮೋದಿಗೆ ಝಲ್ಮುರಿ ಮಾರಿದ್ದ ಯುವಕ ಕಂಗಾಲು!

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಝಲ್ಮುರಿ ತಯಾರಿಸಿಕೊಟ್ಟಿದ್ದ ಸ್ಥಳೀಯ ಅಂಗಡಿಯವನಿಗೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಜೀವ ಬೆದರಿಕೆ ಬರುತ್ತಿದೆ.

ನನಗೆ ಪಾಕ್, ಬಾಂಗ್ಲಾದಿಂದ ಕೊಲೆ ಬೆದರಿಕೆ: ಪ್ರಧಾನಿ ಮೋದಿಗೆ ಝಲ್ಮುರಿ ಮಾರಿದ್ದ ಯುವಕ ಕಂಗಾಲು!
ನರೇಂದ್ರ ಮೋದಿ
Published On :

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಝಲ್ಮುರಿ ತಯಾರಿಸಿಕೊಟ್ಟಿದ್ದ ಸ್ಥಳೀಯ ಅಂಗಡಿಯವನಿಗೆ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಜೀವ ಬೆದರಿಕೆ ಬರುತ್ತಿದೆ. ರಾತ್ರೋರಾತ್ರಿ ಸಾಮಾಜಿಕ ಮಾಧ್ಯಮ ತಾರೆಯನ್ನಾಗಿ ಮಾಡಿದ ಜನಪ್ರಿಯತೆ ಈಗ ಅವರಿಗೆ ಮತ್ತು ಅವರ ಇಡೀ ಕುಟುಂಬಕ್ಕೆ ಭಯದ ಮೂಲವಾಗಿದೆ.

ಏಪ್ರಿಲ್ 19ರಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ವೇಳೆ ಮೋದಿ ಝಲ್ಮುರಿ ಸವಿದಿದ್ದರು. ಪ್ರಧಾನಿ ಮೋದಿ ಅವರು, ಬಿಕ್ರಮ್ ತಯಾರಿಸಿದ್ದು ಝಲ್ಮುರಿ ತಿಂದು ಬಹಳ ರುಚಿಯಾಗಿದೆ ಎಂದು ಹೇಳಿದ್ದರು. ಈ ಘಟನೆಯ ನಂತರ, ಬಿಕ್ರಮ್ ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆ ಅಂಗಡಿಗೆ ಹೋಗಲು ಶುರು ಮಾಡಿದ್ದರು.

ಬಿಕ್ರಮ್ ಸೌ ಅವರ ಈ ಹಠಾತ್ ಜನಪ್ರಿಯತೆಯು ಅವರಿಗೆ ಮತ್ತು ಅವರ ಕುಟುಂಬಕ್ಕೆ ಭಯವನ್ನುಂಟುಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ, ಅವರ ಮೊಬೈಲ್ ಫೋನ್‌ಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿನ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ನಿರಂತರ ಫೋನ್ ಕರೆಗಳು ಮತ್ತು ವಾಟ್ಸಾಪ್ ವೀಡಿಯೊ ಕರೆಗಳು ಬರುತ್ತಿವೆ. ಇದು ಕುಟುಂಬ ಆತಂಕಕ್ಕೆ ದೂಡಿದೆ.

ಈ ಘಟನೆಯು ಬಿಕ್ರಮ್ ಸೌ ಮತ್ತು ಅವರ ಕುಟುಂಬವನ್ನು ತೀವ್ರ ಭಯ ಮತ್ತು ಆತಂಕಕ್ಕೆ ದೂಡಿದೆ. ಪೊಲೀಸರಿಗೆ ಈ ವಿಷಯದ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ದೂರು ಸ್ವೀಕರಿಸಿದ ನಂತರ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬಂದ ಈ ಬೆದರಿಕೆ ಕರೆಗಳು ಈ ಪ್ರದೇಶದಲ್ಲಿ ಕಳವಳ ಮತ್ತು ಭೀತಿಯನ್ನು ಸೃಷ್ಟಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.