ಇಂದೋರ್: ಪತಿ ವಿರುದ್ಧದ ಅಪಹರಣ ಪ್ರಕರಣ ಪ್ರಶ್ನಿಸಿ, ಹೈಕೋರ್ಟ್ ಮೆಟ್ಟಿಲೇರಿದ ಕುಂಭ ಮೇಳದ ಮೋನಾಲಿಸಾ!
ತನ್ನ ನಿಜವಾದ ಜನ್ಮ ದಿನಾಂಕ ಜನವರಿ 1, 2008 ಆಗಿದ್ದು, ಅಧಿಕೃತ ದಾಖಲೆಗಳಲ್ಲಿ ತನ್ನ ಹುಟ್ಟಿದ ವರ್ಷವನ್ನು 2009 ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ತನ್ನನ್ನು ಹರಿಹರೆಯದ ಯುವತಿ ಎಂದು ಹೇಳಲಾಗಿದೆ ಎಂದು ಮೊನಾಲಿಸಾ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.

ಇಂದೋರ್: ಉತ್ತರ ಪ್ರದೇಶ ಮೂಲದ ನಟ ಫರ್ಮಾನ್ ಖಾನ್ ಅವರನ್ನು ವಿವಾಹವಾದ ನಂತರ ವಿವಾದಕ್ಕೀಡಾಗಿದ್ದ ಕುಂಭಮೇಳದ ವೈರಲ್ ಯುವತಿ ಮೊನಾಲಿಸಾ ಭೋಸ್ಲೆ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಆರಂಭದಲ್ಲಿ ಲವ್ ಜಿಹಾದ್ ನಲ್ಲಿ ಫರ್ಮಾನ್ ಖಾನ್ ಸಿಲುಕಿಸಿದ್ದಾನೆ ಎಂಬಂತಹ ಆರೋಪಗಳು ಸೋಶಿಯಲ್ ಮೀಡಿಯಾ ತುಂಬೆಲ್ಲಾ ಹರಿದಾಡಿತ್ತು.
ಬಳಿಕ ಆಕೆ ಹದಿಹರೆಯದ ಯುವತಿ ಎಂಬ ಹೇಳಿಕೆಯೊಂದಿಗೆ ಆಕೆಯ ವಯಸ್ಸಿಗೆ ಸಂಬಂಧಿಸಿದಂತೆ ಅನುಮಾನ ಉಂಟಾಗಿತ್ತು. ಕುಂಭಮೇಳದಲ್ಲಿ ಹಾರಗಳನ್ನು ಮಾರಾಟ ಮಾಡುವ ವೀಡಿಯೊಗಳು ವೈರಲ್ ಆದ ನಂತರ ಇಂಟರ್ನೆಟ್ ಸೆನ್ಸೇಷನ್ ಆದ ಮೊನಾಲಿಸಾ ಭೋಸ್ಲೆ, ಈಗ ತನ್ನ ಪತಿಯ ವಿರುದ್ಧ ದಾಖಲಾಗಿರುವ ಅಪಹರಣ ಪ್ರಕರಣವನ್ನು ಪ್ರಶ್ನಿಸಿ ಇಂದೋರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತನ್ನ ನಿಜವಾದ ಜನ್ಮ ದಿನಾಂಕ ಜನವರಿ 1, 2008 ಆಗಿದ್ದು, ಅಧಿಕೃತ ದಾಖಲೆಗಳಲ್ಲಿ ತನ್ನ ಹುಟ್ಟಿದ ವರ್ಷವನ್ನು 2009 ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ತನ್ನನ್ನು ಹರಿಹರೆಯದ ಯುವತಿ ಎಂದು ಹೇಳಲಾಗಿದೆ ಎಂದು ಮೊನಾಲಿಸಾ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.
ಜನನ ಪ್ರಮಾಣ ಪತ್ರದಲ್ಲಿನ ದೋಷವು ಫರ್ಮಾನ್ ಖಾನ್ ಜೊತೆಗಿನ ವಿವಾಹದ ನಂತರ ಕಾನೂನು ತೊಂದರೆಯನ್ನುಂಟುಮಾಡಿದೆ. ಇಬ್ಬರೂ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಭೇಟಿಯಾಗಿದ್ದು, ನಂತರ ಮಾರ್ಚ್ 2026 ರಲ್ಲಿ ಕೇರಳದ ದೇವಸ್ಥಾನದಲ್ಲಿ ಸ್ಥಳೀಯ ನಾಯಕರು ಮತ್ತು ಪೊಲೀಸರ ಸಮ್ಮುಖದಲ್ಲಿ ವಿವಾಹವಾದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಮದುವೆಯ ನಂತರ ಮೋನಾಲಿಸಾಳ ತಂದೆ ಮಹೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಫರ್ಮಾನ್ ಖಾನ್ ತನ್ನ ಅಪ್ರಾಪ್ತ ಪುತ್ರಿಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದರು. ದೂರಿನ ಆಧಾರದ ಮೇಲೆ, ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದರು.
ಆದಾಗ್ಯೂ, ಮೋನಾಲಿಸಾ ಈಗ ನ್ಯಾಯಾಲಯದ ಮುಂದೆ ತನ್ನ ಪತಿಯ ಬೆಂಬಲಕ್ಕೆ ಬಂದಿದ್ದು, ತಾನು ಕಾನೂನುಬದ್ಧವಾಗಿ ವಯಸ್ಕಳು ಎಂದು ಸಮರ್ಥಿಸಿಕೊಂಡಿದ್ದಾರೆ. ತನ್ನ ಹೇಳಿಕೆ ಬೆಂಬಲಿಸಲು ತಮ್ಮ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಸಲ್ಲಿಸಿದ್ದಾರೆ
ಮೋನಾಲಿಸಾಳ ಜನ್ಮ ದಿನಾಂಕಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಮೊನಾಲಿಸಾಳ ಸಾಮಾಜಿಕ ಮಾಧ್ಯಮ ಜನಪ್ರಿಯತೆ ಮತ್ತು ಆಕೆಯ ವಿವಾಹದ ಸುತ್ತಲಿನ ವಿವಾದವನ್ನು ಗಮನದಲ್ಲಿಟ್ಟುಕೊಂಡು, ಪ್ರಕರಣವು ವ್ಯಾಪಕ ಸಾರ್ವಜನಿಕ ಗಮನವನ್ನು ಸೆಳೆದಿದೆ. ಈ ವಿಷಯವು ಪ್ರಸ್ತುತ ಇಂದೋರ್ ಹೈಕೋರ್ಟ್ ಮುಂದೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



