ದೇಶ

ಜಾರ್ಜಿಯಾ ಮೆಲೋನಿಗೆ ಕ್ಯಾಂಡಿ ಉಡುಗೊರೆ ನೀಡಿದ ಪ್ರಧಾನಿ ಮೋದಿ: 'ಇದು ನಾಯಕತ್ವವಲ್ಲ, ಗಿಮಿಕ್'; ರಾಹುಲ್ ಗಾಂಧಿ

'ಪ್ರಧಾನಿ ಮೋದಿ ನಮಗೆ ಉಡುಗೊರೆ ತಂದರು-- ತುಂಬಾ ಒಳ್ಳೆಯ ಟಾಫಿ' ಎಂದು ಮೆಲೋನಿ ಹೇಳುವಾಗ, ಮೋದಿ ಟಾಫಿ ಪ್ಯಾಕೆಟ್ ತೋರಿಸುತ್ತಾ 'ಮೆಲೋಡಿ' ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಜಾರ್ಜಿಯಾ ಮೆಲೋನಿಗೆ ಕ್ಯಾಂಡಿ ಉಡುಗೊರೆ ನೀಡಿದ ಪ್ರಧಾನಿ ಮೋದಿ: 'ಇದು ನಾಯಕತ್ವವಲ್ಲ, ಗಿಮಿಕ್'; ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Published On :

ನವದೆಹಲಿ: ದೇಶದಲ್ಲಿ ಆರ್ಥಿಕ ಬಿರುಗಾಳಿ ಬೀಸುತ್ತಿದೆ ಆದರೆ ಪ್ರಧಾನಿ ನರೇಂದ್ರ ಮೋದಿ ಇಟಲಿಯಲ್ಲಿ ಕ್ಯಾಂಡಿ ಹಂಚುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೋದಿ ಮೆಲೋಡಿ ಟಾಫಿ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡುವ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಹೇಳಿದ್ದಾರೆ.

'ಇದು ನಾಯಕತ್ವವಲ್ಲ, ಇದು ಗಿಮಿಕ್' ಎಂದು ತಮ್ಮ ಕ್ಷೇತ್ರ ರಾಯ್‌ಬರೇಲಿಗೆ ಭೇಟಿ ನೀಡಿರುವ ರಾಹುಲ್ ಗಾಂಧಿ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೇಶದ ರೈತರು, ಕಾರ್ಮಿಕರು, ವ್ಯಾಪಾರಿಗಳು ಮತ್ತು ಇತರರು ಕಣ್ಣೀರು ಹಾಕುತ್ತಿರುವಾಗ, ಪ್ರಧಾನಿ ನಗುತ್ತಿದ್ದಾರೆ ಮತ್ತು ರೀಲ್‌ಗಳನ್ನು ಮಾಡುತ್ತಿದ್ದಾರೆ ಮತ್ತು ಬಿಜೆಪಿಯವರು ಚಪ್ಪಾಳೆ ತಟ್ಟುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಿಂದಿಯಲ್ಲಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

'ನಮ್ಮ ತಲೆಯ ಮೇಲೆ ಆರ್ಥಿಕ ಬಿರುಗಾಳಿ ಬೀಸುತ್ತಿದೆ ಮತ್ತು ನಮ್ಮ ಪ್ರಧಾನಿ ಇಟಲಿಯಲ್ಲಿ ಕ್ಯಾಂಡಿಗಳನ್ನು ಹಂಚುವಲ್ಲಿ ನಿರತರಾಗಿದ್ದಾರೆ. ಇದು ನಾಯಕತ್ವ ಅಲ್ಲ, ಇದು ಗಿಮಿಕ್!' ಎಂದು ಅವರು ಹೇಳಿದರು.

'ಪ್ರಧಾನಿ ಮೋದಿ ನಮಗೆ ಉಡುಗೊರೆ ತಂದರು-- ತುಂಬಾ ಒಳ್ಳೆಯ ಟಾಫಿ' ಎಂದು ಮೆಲೋನಿ ಹೇಳುವಾಗ, ಮೋದಿ ಟಾಫಿ ಪ್ಯಾಕೆಟ್ ತೋರಿಸುತ್ತಾ 'ಮೆಲೋಡಿ' ಎಂದು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

'ಉಡುಗೊರೆಗೆ ಧನ್ಯವಾದಗಳು' ಮೆಲೋನಿ X ನಲ್ಲಿನ ತಮ್ಮ ಪೋಸ್ಟ್‌ನಲ್ಲಿ ವಿಡಿಯೋ ಹಂಚಿಕೊಂಡು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.