ಸಿಎಂ ಸುವೇಂದು ಅಧಿಕಾರಿ ಪಿಎ ಕೊಲೆ ಕೇಸ್: ಪ್ರಮುಖ ಶೂಟರ್ ರಾಜ್‌ಕುಮಾರ್ ಸಿಂಗ್ ಬಂಧಿಸಿದ CBI
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಪಿಎ ಕೊಲೆ ಪ್ರಕರಣದ ಪ್ರಮುಖ ಶೂಟರ್ ರಾಜ್‌ಕುಮಾರ್ ಸಿಂಗ್ ನನ್ನು ಸಿಬಿಐ, ಮುಜಫರ್‌ನಗರ ಪೊಲೀಸರ ಸಹಯೋಗದೊಂದಿಗೆ ಬಂಧಿಸಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಪಿಎ ಕೊಲೆ ಪ್ರಕರಣದ ಪ್ರಮುಖ ಶೂಟರ್ ರಾಜ್‌ಕುಮಾರ್ ಸಿಂಗ್ ನನ್ನು ಸಿಬಿಐ, ಮುಜಫರ್‌ನಗರ ಪೊಲೀಸರ ಸಹಯೋಗದೊಂದಿಗೆ ಬಂಧಿಸಿದೆ. ಆರೋಪಿಯನ್ನು ಮುಜಫರ್‌ನಗರದಲ್ಲಿ ಬಂಧಿಸಲಾಗಿದೆ. ಸಿಬಿಐ ಆರೋಪಿಯ ಟ್ರಾನ್ಸಿಟ್ ರಿಮಾಂಡ್ ಪಡೆದುಕೊಂಡಿದ್ದು, ಮಂಗಳವಾರ ಕೋಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾದ ಎರಡು ದಿನಗಳ ನಂತರ, ಮೇ 6ರ ರಾತ್ರಿ ಸುವೇಂದು ಅಧಿಕಾರಿ ಅವರ ಪಿಎ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ರಥ್ ಕೋಲ್ಕತ್ತಾಗೆ ತೆರಳುತ್ತಿದ್ದಾಗ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ಡೋಲಾಟಲಾ ಪ್ರದೇಶದಲ್ಲಿ ಮೋಟಾರ್‌ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಪ್ರಸ್ತುತ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.
ರಥ್ ಹತ್ಯೆಯ ನಂತರ, ವಿಶೇಷ ತನಿಖಾ ತಂಡ (SIT) ರಚಿಸಲಾಯಿತು. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ರಥ್ ಅವರ ಕುಟುಂಬಕ್ಕೆ ನ್ಯಾಯ ಸಿಗುವಂತೆ ಮಾಡುವುದಾಗಿ ಭರವಸೆ ನೀಡಿದರು. ಪ್ರಕರಣವನ್ನು ನಂತರ ಸಿಬಿಐಗೆ ಹಸ್ತಾಂತರಿಸಿದ್ದರು. ಮೊದಲಿಗೆ ಮಾಯಾಂಕ್ ರಾಜ್ ಮಿಶ್ರಾ, ವಿಕ್ಕಿ ಮೌರ್ಯ ಮತ್ತು ರಾಜ್ ಸಿಂಗ್ ಎಂಬ ಮೂವರನ್ನು ಬಂಧಿಸಲಾಗಿತ್ತು. ಈಗ ರಾಜ್ ಕುಮಾರ್ ಸಿಂಗ್ ಬಂಧನದೊಂದಿಗೆ ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



