ದೇಶ

ಬಂಗಾಳ ಮಹಿಳೆಯರಿಗೆ, ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್: ತಿಂಗಳಿಗೆ 3,000 ರೂ, ಉಚಿತ ಬಸ್ ಪ್ರಯಾಣ, 7ನೇ ವೇತನ ಆಯೋಗ ರಚನೆಗೆ ಸಂಪುಟ ಅಸ್ತು

"ಜೂನ್ 1 ರಿಂದ ಮಹಿಳೆಯರಿಗೆ ಪ್ರತಿ ತಿಂಗಳು 3,000 ರೂ. ಸಹಾಯಧನ ನೀಡುವ 'ಅನ್ನಪೂರ್ಣ' ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ ಜೂನ್ 1 ರಿಂದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೂ ಸಂಪುಟ ಅನುಮೋದಿಸಿದೆ" ಎಂದು ಸಚಿವರು ತಿಳಿಸಿದರು.

ಬಂಗಾಳ ಮಹಿಳೆಯರಿಗೆ, ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್: ತಿಂಗಳಿಗೆ 3,000 ರೂ, ಉಚಿತ ಬಸ್ ಪ್ರಯಾಣ, 7ನೇ ವೇತನ ಆಯೋಗ ರಚನೆಗೆ ಸಂಪುಟ ಅಸ್ತು
ಸಿಎಂ ಸುವೇಂದು ಅಧಿಕಾರಿ
Published On :

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸರ್ಕಾರ ರಾಜ್ಯದ ಮಹಿಳೆಯರಿಗೆ ಬಂಪರ್ ಗಿಫ್ಚ್ ನೀಡಿದ್ದು, ಮಹಿಳೆಯರಿಗೆ ಪ್ರತಿ ತಿಂಗಳು 3,000 ರೂ. ಸಹಾಯಧನ ನೀಡುವ 'ಅನ್ನಪೂರ್ಣ' ಯೋಜನೆ ಮತ್ತು ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಸೋಮವಾರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಎರಡೂ ಯೋಜನೆಗಳು ಜೂನ್ 1 ರಿಂದ ಜಾರಿಗೆ ಬರಲಿವೆ.

ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಅಗ್ನಿಮಿತ್ರ ಪಾಲ್, ಸಿಎಎ ಅಡಿಯಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ ಮತ್ತು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ನ್ಯಾಯಮಂಡಳಿಗಳನ್ನು ಸಂಪರ್ಕಿಸುವ ಮಹಿಳೆಯರು ಸಹ 'ಅನ್ನಪೂರ್ಣ' ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಹೇಳಿದರು.

"ಜೂನ್ 1 ರಿಂದ ಮಹಿಳೆಯರಿಗೆ ಪ್ರತಿ ತಿಂಗಳು 3,000 ರೂ. ಸಹಾಯಧನ ನೀಡುವ 'ಅನ್ನಪೂರ್ಣ' ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಜೂನ್ 1 ರಿಂದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೂ ಸಂಪುಟ ಅನುಮೋದಿಸಿದೆ" ಎಂದು ಸಚಿವರು ತಿಳಿಸಿದರು.

ಸರ್ಕಾರವು ತನ್ನ ಉದ್ಯೋಗಿಗಳು ಮತ್ತು ಸಂಬಂಧಿತ ಶಾಸನಬದ್ಧ ನಾಗರಿಕ ಸಂಸ್ಥೆಗಳು, ಶಿಕ್ಷಣ ಮಂಡಳಿಗಳು ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ 7ನೇ ರಾಜ್ಯ ವೇತನ ಆಯೋಗ ರಚನೆಗೂ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.

"ಜೂನ್‌ನಿಂದ ಧಾರ್ಮಿಕ ವರ್ಗೀಕರಣದ ಆಧಾರದ ಮೇಲೆ ಸಂಘ, ಸಂಸ್ಥೆಗಳಿಗೆ ಸರ್ಕಾರಿ ಸಹಾಯವನ್ನು ನಿಲ್ಲಿಸಲು ಬಂಗಾಳ ಸಚಿವ ಸಂಪುಟ ನಿರ್ಧರಿಸಿದೆ. ಕಲ್ಕತ್ತಾ ಹೈಕೋರ್ಟ್ ತೀರ್ಪಿನ ಪ್ರಕಾರ ಸರ್ಕಾರವು ಅಸ್ತಿತ್ವದಲ್ಲಿರುವ ರಾಜ್ಯ ಒಬಿಸಿ ಪಟ್ಟಿಯನ್ನು ರದ್ದುಗೊಳಿಸಿದೆ ಮತ್ತು ಕೋಟಾ ಅರ್ಹತೆಯನ್ನು ನಿರ್ಧರಿಸಲು ತನಿಖಾ ಸಮಿತಿಯನ್ನು ರಚಿಸಲಾಗುತ್ತದೆ" ಎಂದು ಪಾಲ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.