ದೇಶ

Fuel Price Hike: ತರಕಾರಿ, ಧಾನ್ಯಗಳಿಂದ ಹಿಡಿದು ಕ್ಯಾಬ್ ರೈಡ್ ವರೆಗೆ; ಮುಂಬರುವ ದಿನಗಳಲ್ಲಿ ಏನೆಲ್ಲ ದುಬಾರಿ?

ಬೆಲೆ ಏರಿಕೆ ಪರಿಣಾಮವು ಮೊದಲು ಕಾಣಿಸಿಕೊಳ್ಳುವುದು ಇಲ್ಲಿಯೇ. ಡೀಸೆಲ್ ಟ್ರಕ್‌ಗಳಲ್ಲಿ ಹಾಳಾಗುವ ವಸ್ತುಗಳನ್ನು ರಾತ್ರಿಯಿಡೀ ಬಹಳ ದೂರದವರೆಗೂ ಸಾಗಿಸಲಾಗುತ್ತದೆ.

Fuel Price Hike: ತರಕಾರಿ, ಧಾನ್ಯಗಳಿಂದ ಹಿಡಿದು ಕ್ಯಾಬ್ ರೈಡ್ ವರೆಗೆ; ಮುಂಬರುವ ದಿನಗಳಲ್ಲಿ ಏನೆಲ್ಲ ದುಬಾರಿ?
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಪ್ರತಿ ಲೀಟರ್ ಗೆ 3 ರೂ. ಹಾಗೂ ಸಿಎನ್ ಜಿ ಕೆಜಿಗೆ 2 ರೂ. ಏರಿಕೆಯೊಂದಿಗೆ ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಮತ್ತೊಂದು ಬರೆ ಹಾಕಲಾಗಿದೆ. ದೇಶದಲ್ಲಿ ಸುಮಾರು ಶೇ. 65 ರಷ್ಟು ಜನರು ರಸ್ತೆ ಮೂಲಕವೇ ದೈನಂದಿನ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಡೀಸೆಲ್ ಬೆಲೆ ಹೆಚ್ಚಳ ಸಾರಿಗೆ ಮೇಲೆ ಮಾತ್ರವಲ್ಲದೇ, ಜೀವನ ವೆಚ್ಚದ ಮೇಲೂ ತೀವ್ರ ಪರಿಣಾಮ ಬೀರಿದೆ. ಟ್ರಕ್ ಗಳು ನಗರಗಳಿಗೆ ತರಕಾರಿ ಸಾಗಿಸುತ್ತವೆ. ವ್ಯಾನ್ ಗಳು ಹಾಲಿನ ಪಾಕೆಟ್ ಗಳನ್ನು ಡೆಲಿವರಿ ಮಾಡ್ತವೆ. ಬೈಕ್ ಗಳ ಮೂಲಕ ಆನ್ ಲೈನ್ ಆರ್ಡರ್ ಬರುತ್ತವೆ. ಇವೆಲ್ಲಾ ಈಗ ದುಬಾರಿಯಾಗಲಿವೆ. ಎಲ್ಲಾ ವೆಚ್ಚಗಳು ಅಂತಿಮವಾಗಿ ಗ್ರಾಹಕರ ಮೇಲೆ ಬೀಳಲಿದೆ.

ಮುಂಬರುವ ದಿನಗಳಲ್ಲಿ ಏನೆಲ್ಲಾ ದುಬಾರಿ ಆಗಲಿವೆ?

ತರಕಾರಿಗಳು ಮತ್ತು ಹಣ್ಣುಗಳು: ಬೆಲೆ ಏರಿಕೆ ಪರಿಣಾಮವು ಮೊದಲು ಕಾಣಿಸಿಕೊಳ್ಳುವುದು ಇಲ್ಲಿಯೇ. ಡೀಸೆಲ್ ಟ್ರಕ್‌ಗಳಲ್ಲಿ ಹಾಳಾಗುವ ವಸ್ತುಗಳನ್ನು ರಾತ್ರಿಯಿಡೀ ಬಹಳ ದೂರದವರೆಗೂ ಸಾಗಿಸಲಾಗುತ್ತದೆ. ಇಂಧನ ಹೆಚ್ಚಳದ ನಂತರ ಸಾಗಣೆದಾರರು ಸರಕುಗಳ ಬೆಲೆಯನ್ನು ಪರಿಷ್ಕರಿಸುತ್ತಾರೆ. ಮಂಡಿಗಳು ಅದನ್ನು ಸಗಟು ವ್ಯಾಪಾರಿಗಳಿಗೆ ರವಾನಿಸುತ್ತವೆ. ಸಗಟು ವ್ಯಾಪಾರಿಗಳು ಅದನ್ನು ಚಿಲ್ಲರೆ ವ್ಯಾಪಾರಿಗಳಿಗೆ ರವಾನಿಸುತ್ತಾರೆ. ಚಿಲ್ಲರೆ ವ್ಯಾಪಾರಿಗಳು ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಾರೆ. ಟೊಮ್ಯಾಟೊ, ಈರುಳ್ಳಿ, ಆಲೂಗಡ್ಡೆ, ಎಲೆ ತರಕಾರಿಗಳು, ಹಣ್ಣುಗಳು ಹೆಚ್ಚು ಹಾಳಾಗುವ ವಸ್ತುಗಳಾಗಿದ್ದು, ಇವುಗಳು ಬೆಲೆ ಆದಷ್ಟು ಬೇಗ ದುಬಾರಿಯಾಗಲಿವೆ.

ಹಾಲು ಮತ್ತು ಡೈರಿ ಉತ್ಪನ್ನಗಳು: ಹಾಲು ಸಂಗ್ರಹಣೆಗೆ ವ್ಯಾನ್ ಗು ಬೇಕೆ ಬೇಕು. ಇವುಗಳು ಪ್ರತಿದಿನ ಹಳ್ಳಿಗಳಿಂದ ಹಾಲನ್ನು ಸಂಗ್ರಹಿಸಿ ಪಟ್ಟಣ, ನಗರ ಪ್ರದೇಶಗಳಿಗೆ ರವಾನಿಸುತ್ತವೆ. ಈ ವ್ಯಾನ್ ಗಳಿಗೆ ಡೀಸೆಲ್ ಅಗತ್ಯವಾಗಿದೆ. ಹೀಗಾಗಿ ಡೈರಿಗಳು ಹಾಲಿನ ಬೆಲೆಯನ್ನು ಹೆಚ್ಚಿಸುತ್ತವೆ. ಬಳಿಕ ಮೊಸರು, ಪನೀರ್, ಬೆಣ್ಣೆ ಮತ್ತು ಚೀಸ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ.

ದಿನಸಿ ಮತ್ತು ರೆಸ್ಟೋರೆಂಟ್‌ಗಳು: ಅದೇ ರೀತಿ, ಅಕ್ಕಿ, ಗೋಧಿ, ದ್ವಿದಳ ಧಾನ್ಯಗಳು, ಎಣ್ಣೆ, ಸಕ್ಕರೆ, ಚಹಾ, ಬಿಸ್ಕತ್ತು ಮತ್ತಿತರ ವಸ್ತುಗಳನ್ನು ಡೀಸೆಲ್ ಆಧಾರಿತ ವ್ಯಾನ್ ಗಳಿಂದಲೇ ಸಾಗಿಸಲಾಗುತ್ತದೆ. ಹೀಗಾಗಿ ಕಂಪನಿಗಳು ಎರಡು ರೀತಿಯಲ್ಲಿ ಬೆಲೆ ಹೆಚ್ಚಿಸುತ್ತವೆ. ಒಂದು MRP ಹೆಚ್ಚಳ ಮಾಡ್ತವೆ ಇಲ್ಲವೇ ಪ್ಯಾಕ್ ಗಾತ್ರವನ್ನು ಕಡಿಮೆ ಮಾಡುತ್ತವೆ. ಕೆಲವೊಮ್ಮೆ ಎರಡನ್ನೂ ಮಾಡ್ತವೆ. ಅನೇಕ ಹೋಟೆಲ್ ಗಳು CNG ಅನ್ನು ಬಳಸುತ್ತವೆ. CNG ಪ್ರತಿ ಕೆಜಿಗೆ ರೂ 2 ರಷ್ಟು ಹೆಚ್ಚಾದಂತೆ, ಅದು ನೇರವಾಗಿ ಗ್ರಾಹಕರಿಗೆ ವರ್ಗಾವಣೆ ಆಗುತ್ತದೆ. ಹೊರಗೆ ಊಟ ಮಾಡುವುದು, ಒಳಗೆ ಆರ್ಡರ್ ಮಾಡುವುದು ಅಥವಾ ಧಾಬಾದಿಂದ ಆಹಾರವನ್ನು ಪಡೆಯುವುದು ನಿಧಾನವಾಗಿ ದುಬಾರಿಯಾಗಬಹುದು.

ಕ್ಯಾಬ್‌ಗಳು, ಆಟೋಗಳು ಮತ್ತು ಬಸ್‌ಗಳು: ಸಿಎನ್‌ಜಿ ಆಟೋಗಳು ಮತ್ತು ಪೆಟ್ರೋಲ್ ಕ್ಯಾಬ್‌ಗಳು ಈಗಾಗಲೇ ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿ ನಲುಗುತ್ತಿವೆ. ಡೀಸೆಲ್‌ನಲ್ಲಿ ಚಲಿಸುವ ಸಿಟಿ ಬಸ್‌ಗಳು ಹೆಚ್ಚಿನ ನಿರ್ವಹಣಾ ವೆಚ್ಚವನ್ನು ಎದುರಿಸುತ್ತವೆ. ಖಾಸಗಿ ಇಂಟರ್‌ಸಿಟಿ ಬಸ್‌ಗಳು ಟಿಕೆಟ್ ದರವನ್ನು ಹೆಚ್ಚಿಸುತ್ತವೆ. ಶಾಲಾ ವ್ಯಾನ್‌ಗಳು ಸಹ ಶುಲ್ಕವನ್ನು ಹೆಚ್ಚಿಸಬಹುದು.

ಆನ್‌ಲೈನ್ ಆರ್ಡರ್ ಗಳು: ಬಹುತೇಕ ಆನ್‌ಲೈನ್ ದಿನಸಿ ವಿತರಣಾ ಫ್ಲಾಟ್ ಫಾರ್ಮ್ ಗಳು ಎಲೆಕ್ಟ್ರಿಕ್ ಬೈಕ್ ಮೂಲಕ ಡೆಲಿವರಿ ಪರಿಚಯಿಸಿವೆ. ಆದರೂ, ಹೆಚ್ಚಿನ ಡೆಲಿವರಿ ವ್ಯಕ್ತಿಗಳು ಇನ್ನೂ ಪೆಟ್ರೋಲ್ ಬೈಕ್‌ ಬಳಸ್ತಿದ್ದಾರೆ. ಈ ಪ್ಲಾಟ್‌ಫಾರ್ಮ್‌ಗಳು ಸಾಮಾನ್ಯವಾಗಿ ವಿತರಣಾ ಶುಲ್ಕವನ್ನು ಹೆಚ್ಚಿಸುವ ಮೂಲಕ, ಪ್ಲಾಟ್‌ಫಾರ್ಮ್ ಶುಲ್ಕಗಳನ್ನು ಸೇರಿಸುವ ಮೂಲಕ ದರ ಹೆಚ್ಚಿಸಬಹುದು.

ವಿಮಾನ ಟಿಕೆಟ್‌ಗಳು: ವಿಮಾನಯಾನ ಟರ್ಬೈನ್ ಇಂಧನ ಪೂರೈಕೆ (ATF) ಜಾಗತಿಕ ಕಚ್ಚಾ ವಸ್ತುಗಳ ಬೆಲೆ ಮೇಲೆ ಅವಲಂಬನೆಯಾಗಿರುತ್ತದೆ. ತೈಲ ಬೆಲೆಗಳು ಹೆಚ್ಚಾದಾಗ, ವಿಮಾನಯಾನ ಸಂಸ್ಥೆಗಳು ಹೆಚ್ಚಿನ ದರಗಳು ಮತ್ತು ಕಡಿಮೆ ರಿಯಾಯಿತಿಗಳ ಮೂಲಕ ಪ್ರಯಾಣಿಕರಿಗೆ ಹೊರೆಯ ಒಂದು ಭಾಗವನ್ನು ವರ್ಗಾಯಿಸುತ್ತವೆ. ಇದು ಮೊದಲು ಜನ ದಟ್ಟಣೆಯ ದೇಶೀಯ ಮಾರ್ಗಗಳಲ್ಲಿ ಗೋಚರಿಸುತ್ತದೆ.

Story image

ನಿರ್ಮಾಣ ಮತ್ತು ರಿಯಲ್ ಎಸ್ಟೇಟ್: ಸಿಮೆಂಟ್, ಉಕ್ಕು, ಮರಳು, ಇಟ್ಟಿಗೆಗಳು ಎಲ್ಲವೂ ದುಬಾರಿಯಾಗಲಿವೆ. ಇವೆಲ್ಲವೂ ಡೀಸೆಲ್ ಮೇಲೆ ಅವಲಂಬಿತವಾಗಿದೆ. ಹೆಚ್ಚಿನ ಸಾರಿಗೆ ವೆಚ್ಚವನ್ನು ವಸ್ತುಗಳ ಮೇಲೆಯೇ ಹಾಕಲಾಗುತ್ದೆ. ಆಸ್ತಿ ಮತ್ತು ಬಾಡಿಗೆಯೂ ಹೆಚ್ಚಾಗಲಿದೆ. ಇದಲ್ಲದೆ, ಕಾರ್ಖಾನೆಗಳು ಡೀಸೆಲ್ ಜನರೇಟರ್‌ಗಳು ಮತ್ತು ಡೀಸೆಲ್ ಲಾಜಿಸ್ಟಿಕ್ಸ್ ಅನ್ನು ಬಳಸುತ್ತವೆ. ಇಷ್ಟಲ್ಲದೇ ಎಲೆಕ್ಟ್ರಾನಿಕ್ಸ್, ಬಟ್ಟೆ, ಔಷಧಗಳು, ಉಪಕರಣಗಳ ಬೆಲೆಗಳು ಏರಿಕೆಯಾಗಲಿವೆ.

ಕೃಷಿ ವೆಚ್ಚಗಳು: ಡೀಸೆಲ್ ಟ್ರಾಕ್ಟರ್‌ಗಳು, ನೀರಾವರಿ ಪಂಪ್‌ಗಳು, ಕೊಯ್ಲು ಯಂತ್ರಗಳ ಬೆಲೆಯೂ ದುಬಾರಿಯಾಗಿದೆ. ಬಿತ್ತನೆ ಅಥವಾ ಕೊಯ್ಲಿನ ಮೂಲಕ ಇಂಧನವು ಹೆಚ್ಚಿದ್ದರೆ, ಕೃಷಿ ವೆಚ್ಚಗಳು ಹೆಚ್ಚಾಗುತ್ತವೆ. ಇದು ನಂತರ ಆಹಾರ ವಸ್ತುಗಳ ಬೆಲೆಗಳಿಗೆ ಕಾರಣವಾಗಬಹುದು.

ತಕ್ಷಣ ಏನು ಬದಲಾಗುವುದಿಲ್ಲ: ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು, ಬಟ್ಟೆ ಮತ್ತು ದೀರ್ಘ ಒಪ್ಪಂದಗಳನ್ನು ಹೊಂದಿರುವ ವಲಯಗಳು ನಿಧಾನವಾಗಿ ದರ ಹೆಚ್ಚಳ ಮಾಡುತ್ತವೆ. ಡೀಸೆಲ್ ಬೆಲೆ ಹೆಚ್ಚಾದಾಗ, ಯಾವುದೇ ವಸ್ತುವನ್ನು ಸಾಗಿಸುವುದಕ್ಕೂ ಹೆಚ್ಚು ವೆಚ್ಚವಾಗುತ್ತದೆ. ವಸ್ತುಗಳನ್ನು ಸಾಗಿಸುವಾಗ, ವಸ್ತುಗಳನ್ನು ಖರೀದಿಸುವುದಕ್ಕೂ ಹೆಚ್ಚು ವೆಚ್ಚವಾಗುತ್ತದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.